- ಉಮರ್ ದೇವರಮನಿ
ಯಾಕೆ ಆಸೆ ನನ್ನ ನಗುವನು ಕಸಿಯುತಿದೆ
ಕೆನೆ ಭರಿತ ಹಾಲಿಗೆ ಹುಳಿಯನು ಹಿಂಡುತಿದೆ
ಹರಿಯುವ ನದಿಗೆ ಅಣೆಕಟ್ಟು ಅಡ್ಡ ಬಂದು
ಸಾಗರ ಸೇರುವ ಮೀನಿನ ರೆಕ್ಕೆಗಳನು ಮುರಿಯುತಿದೆ
ಇದೆಂಥಹ ಬಳ್ಳಿ ಹೂವನ್ನೇ ಸುತ್ತುತಿದೆ
ಅರಳುವ ಹೂವಿನ ಮಕರಂದವನು ಮರೆಸುತಿದೆ
ಬಯಲೊಳಗೆ ಬಯಲಾಗಬೇಕೆಂದು ಕೊಂಡಿದ್ದೆ ಸಾಕಿ
ಯಾಕೆ ಈ ಆಲಯವು ಗೋಡೆಗಳನು ಬಯಸುತಿದೆ
ಬುದ್ಧ ಬಸವ ಯೇಸು ಪೈಗಂಬರರೇ ಕೇಳಿ
ನೀವು ಕೊಟ್ಟ ಮಧುಬಟ್ಟಲು ಹೀಗೇಕೆ ಸೋರುತಿದೆ
*******************
No comments:
Post a Comment