Saturday, 21 December 2019

ಗೀತಾಂಜಲಿಯ ತುಣುಕು



ನನ್ನ ಪಯಣವದು ಬಲು ಘೋರ, 

ದಾರಿಯೂ ಅತಿ ದೂರ. 

ಬಂದೆ ನಾ ಮುಂಬೆಳಗ ತೇರನೇರಿ, 

ಬೆಂಗಾಡುಗಳ ಲೋಕಲೋಕಗಳ ದಾಟಿ, 

ನಕ್ಷತ್ರಲೋಕದಲಿ ಜಾಡೆನ್ನ ಬೀರಿ. 

ಪಯಣವಿದು ಅತಿ ದೂರ, 

ನಿನ್ನ ಸನಿಹಾತಿ ಸನಿಹಕೆ ತಲಪುವುದು, 

ನಡೆಯಂತೂ ಬಲು ಕಷ್ಟ, 

ಮೃದುಮಧುರ ರಾಗದಲಿ ಕೊನೆಯಹುದು. 

ದಾರಿಗನೋ ದಿಕ್ಕಿಲ್ಲದ ಬಾಗಿಲನೆಲ್ಲ ತಟ್ಟಿ 

ತನ್ನ ಗೂಡಿಗೆ ಬರಬೇಕು, 

ಯಾವೊಬ್ಬನೂ ದಿಕ್ಕು ದೆಸೆಯೆಲ್ಲ ಅಲೆದು 

ಕೊನೆಗೆ ಗರ್ಭಗುಡಿಯ ಮುಟ್ಟಬೇಕು. 

ದಿಟ್ಟಿಯದು ಅತ್ತಿತ್ತ ಅಲೆದಾಡಿ 

ರೆಪ್ಪೆ ಮುಚ್ಚುವ ಮುನ್ನ ನಾನೆಂದೆ: ’ಓ ನೀನಿಲ್ಲಿದ್ದೀಯಾ!’ 

’ಓ! ಎಲ್ಲಿ?’ ಎಂಬ ಕೇಳ್ವಿಯೂ ಅಳುವೂ 

ಕರಗಿ ಕಣ್ಣೀರಾಗಿ ಒರತೆ ನೂರಾಗಿಸಲಿ 

’ನಾನಿಲ್ಲಿದ್ದೇನೆ’ ಎಂಬ ಸಾಂತ್ವನದ ಪ್ರಳಯದಲಿ 

ಜಗವ ಮುಳುಗೇಳಿಸಲಿ. 


(ರವೀಂದ್ರನಾಥ ಟ್ಯಾಗೋರರ The time that my journey takes is long ಪದ್ಯದ ಭಾವಾನುವಾದ) 

- ಸಿ ಮರಿಜೋಸೆಫ್ 

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...