ಬೆಳಕ ಚೆಲ್ಲು ಕತ್ತಲಿಗೆ
ಕರಗು ಮೊಂಬತ್ತಿಯೇ
ಕರಗಿ ಕೊರಗ ನೀಗಿಸು
ಉರುಳಿ ಬೀಳುವ ಸುಖದ ಸುತ್ತೋಲೆಗೆ
ಹಸಿದ ಒಡಲು ಬರಡಾಗುವ ಮುನ್ನ
ಮುದ್ದೆ ಮಾಂಸವ ಬೇಡದ ಜೀವಕೆ
ಬೆಳಕ ಚೆಲ್ಲು ಮೊಂಬತ್ತಿಯೆ
ಒಮ್ಮೆ ನಿನ್ನ ಮೇಣದ ತುಣುಕಲಿ
ಹಸಿವ ನೀಗಿಸಲು
ನುರಿತ ಕೂಸುಗಳು
ಕಲೆತಿಹವು ಕೆಲಸಕ್ಕಾಗದದನು
ಬೇಡಿದರೂ ಬೇಡವೆಂದರೂ
ಜೀವ ಹೊಯ್ಯುವನು ಯಮನು
ಬೆಳಕು ಚೆಲ್ಲು ಮೊಂಬತ್ತಿಯೆ
ಒಮ್ಮೆ ಒಡಲೊಳಗಿಂದ ಸಾಕಿದ
ಬದುಕಿಗೆ ಬೆಳಕಾಗಲು
ಅರಳಿದ ಮೊಗ್ಗುಗಳು
ಹೂವಾಗಿ ತಲೆಯ ಕಳಸಕ್ಕೆ
ಮಿಂಚಿ ಮಾನ ಕದಿಯುವರ ಕಣ್ಣಿಗೆ ಕುಕ್ಕಬೇಕಾಗಿದೆ
ಬೆಳಕ ಚೆಲ್ಲು ಮೊಂಬತ್ತಿಯೇ
ಒಮ್ಮೆ ಕತ್ತಲೆಯ ಕಳ್ಳರಿಗೆ
ಬೇಳಕ ನೀಡಿ ಬದುಕ ಬೆಳಗಿಸಲು
¨ ಶಿವಮೂರ್ತಿ ಕೆ. ಗುಡ್ಡಿನ್ನಿ
No comments:
Post a Comment