¨ ಫಾ. ಜಾನ್ ಪ್ರದೀಪ್ ಯೇ.ಸ.
ನಾ ಬರುವೆ ಪ್ರಭುವೇ (I am coming Lord). ಈ ನುಡಿಗಳನ್ನು ಸ್ಪೇನ್‌ದೇಶಕ್ಕೆ ಸೇರಿದ ಪಾಲ್ಮ ದೆ ಮಯೋರ್‍ಕ ಎಂಬ ದ್ವೀಪದ ಯೇಸುಸಭೆಯ ಅತ್ಯ೦ತ ಹಳೆಯ ಕಾಲೇಜುಗಳಲ್ಲೊಂದಾದ (ಸ್ಥಾಪನೆ:೧೫೬೧) ಹಾಗೂ ಇಂದಿಗೂ ಕಾರ್ಯನಿರತವಿರುವ Our Lady of Montesion ನಲ್ಲಿ ದ್ವಾರಪಾಲಕ Receptionist ನಾಗಿ ಸೇವೆ ಸಲ್ಲಿಸಿದ ಜೆಸ್ವಿಟ್ ಸಂತ ಅಲ್ಫೋನ್ಸ್ ರಾಡ್ರಿಗಸ್‌ರವರು ಸುಮಾರು ೪೬ ವರುಷಗಳ ಕಾಲ ಪ್ರತಿದಿನ ಕಾಲೇಜಿನ ಕದತಟ್ಟುತ್ತಿದ್ದ ಪ್ರತಿಯೊರ್ವ ವಿದ್ಯಾರ್ಥಿಗೆ ಅತಿಥಿಗೆ ನುಡಿಯುತ್ತಿದ್ದರು.
ಸಕಲ ಸಂತರ ಪಟ್ಟಿಗೆ ಸೇರಿರುವ ಅಲ್ಫೋನ್ಸ್ ರಾಡ್ರಿಗಸ್‌ರವರು ಸ್ವೇನ್ ದೇಶದ ಸೆಗೊವಿಯ ಎಂಬ ನಗರದಲ್ಲಿ ೨೫ ಜುಲೈ ೧೫೩೩ ರಂದು ಉಣ್ಣೆ ವ್ಯಾಪಾರ ಮಾಡುವ ಕುಟುಂಬದಲ್ಲಿ ಜನಿಸಿದರು. ದೈವಭಕ್ತರಾದ ಈ ಸಂತರು ತನ್ನ ೨೭ನೇ ವಯಸ್ಸಿನಲ್ಲಿ ವಿವಾಹವಾಗಿ, ೩೧ ವಯಸ್ಸಿನಲ್ಲಿ ತನ್ನ ಪತ್ನಿ ಹಾಗೂ ಮೂವರು ಮಕ್ಕಳು ಅಕಾಲಿಕ ಮರಣಹೊಂದಿದಾಗ, ತನ್ನ೪೦ನೇ ವಯಸ್ಸಿನಲ್ಲಿ ೩೧ ಜನವರಿ ೧೫೭೧ ರಂದು ಯೇಸುಸಭೆ ಸೇರಿ ತನ್ನ ಜೀವನವನ್ನು ದೇವರ ಹಾಗೂ ಪರರ ಸೇವೆಗೆ ಮುಡಿಪಾಗಿಟ್ಟು ೩೧ ಅಕ್ಟೋಬರ್ ೧೬೧೭ರಲ್ಲಿ ಪಾಲ್ಮ ದೆ ಮಯೋರ್‍ಕದಲ್ಲಿ ಕೊನೆಯುಸಿರೆಳೆದರು. ಇವರು ದೈವಾಧೀನರಾಗಿ ೪೦೦ ಸಂವತ್ಸರಗಳು ಸಂದಿವೆ. ಅದ್ದರಿ೦ದ ಈ ವರ್ಷ (೨೦೧೮) ಈ ಸಂತರು ಮೃತಪಟ್ಟ೪೦೦ ವರ್ಷದ ಸ್ಮರಣೆಯ ಆಚರಣೆಯು (ಜುಬಿಲಿ ಮಹೋತ್ಸವ) ಧರ್ಮಸಭೆಗೆ ವಿಶೇಷವಾಗಿ ಯೇಸುಸಭೆಗೆ ಮಹದಾನಂದದ ಸಂಗತಿಯೇ ಸರಿ.
ಯೇಸುಸಭೆಯಎಲ್ಲಾ ಸಹೋದರರ (Jesuit Brothers) ಹಾಗೂ ಪಾಲ್ಮ ದೆ ಮಯೋರ್‍ಕ ದ್ವೀಪದ ಪಾಲಕ ಸಂತರಾಗಿರುವ ಅನುಭಾವಿ ಸಂತ ಅಲ್ಫೋನ್ಸ್ ರಾಡ್ರಿಗಸ್‌ರವರು ಉತ್ತಮ ಬರಹಗಾರರಾಗಿದ್ದರು. ಯೇಸುವಿನ ಪವಿತ್ರ ಹೃದಯ, ಮಾತೆ ಮರಿಯ, ಪ್ರಾರ್ಥನೆ, ದೇವರ ಇರುವಿಕೆ, ಅಂಗನಿಗ್ರಹ, ವಿಧೇಯತೆ ಇತ್ಯಾದಿ ಅಧ್ಯಾತ್ಮಿಕ ವಿಷಯಗಳ ಬಗ್ಗೆ ತಮ್ಮ ಚಿಂತನೆಗಳನ್ನು ವ್ಯಕ್ತಪಡಿಸಿದ್ದಾರೆ.
ತನ್ನ ನಡೆ-ನುಡಿಯ ಮೂಲಕ ಸಂತ ಅಲ್ಫೋನ್ಸ್ ರಾಡ್ರಿಗಸ್‌ರವರು ಹಲವರಿಗೆ ಪ್ರೇರಣೆಯನ್ನು ನೀಡಿದ್ದಾರೆ. ವಿಶೇಷವಾಗಿ ಲ್ಯಾಟಿನ್ ಅಮೇರಿಕಾದ ಗುಲಾಮರ ಗುಲಾಮ (Slave of slaves) ಎಂದು ಪ್ರಸಿದ್ದಿಯಾಗಿರುವ ಯೇಸುಸಭೆಯಇನ್ನೊರ್ವ ಸಂತ ಪೀಟರ್‌ಕ್ಲೇವರ್‌ರವರುಯೇಸುಸಭೆ ಸೇರಲು ಸಂತ ಅಲ್ಫೋನ್ಸ್ ರಾಡ್ರಿಗಸ್‌ರವರಉತ್ತೇಜನ, ಆಧ್ಯಾತ್ಮಿಕ ಮಾರ್ಗದರ್ಶನ ಹಾಗೂ ಪ್ರಾರ್ಥನಾಮಯಜೀವನವೇ ಮೂಲ ಕಾರಣ.ಪ್ರಖ್ಯಾತ ಜೆಸ್ವಿಟ್ ಕವಿ ಜೆರಾರ್ಡ್ ಮ್ಯಾನ್ಲೆ ಹಾಪ್ಕಿನ್ಸ್ ನವರಿಗೂ ಕೂಡ ಸಂತ ಅಲ್ಫೋನ್ಸ್ ನವರ ಬದುಕು ಪ್ರೇರಣೆಯಾಗಿತ್ತು.
ಪವಿತ್ರ ಬೈಬಲಿನ ಪ್ರಕಟಣಾ ಗ್ರಂಥ ೩: ೨೦ರಲ್ಲಿ ಹೀಗೆ ಬರೆಯಲಾಗಿದೆ: “ಇಗೋ ನಾನು ಬಾಗಿಲ ಬಳಿ ನಿ೦ತು ತಟ್ಟುತ್ತಾ ಇದ್ದೇನೆ. ಯಾವನಾದರೂ ನನ್ನ ಸ್ವರವನ್ನು ಕೇಳಿಸಿಕೊ೦ಡು ಬಾಗಿಲನ್ನು ತೆರೆದರೆ ನಾನು ಮನೆಯೊಳಗೆ ಪ್ರವೇಶಿಸುತ್ತೇನೆ. ಅವನ ಸಂಗಡ ಊಟ ಮಾಡುತ್ತೇನೆ ಮತ್ತು ಅವನೂ ನನ್ನ ಸಂಗಡ ಊಟ ಮಾಡುತ್ತಾನೆ.”
ನಮ್ಮ ಹೃದಯದ ಕದವನ್ನುಯೇಸುವಿಗೆ ತೆರೆದು ಆತನಂತಾಗಲು ಸಂತ ಅಲ್ಫೋನ್ಸ್ ರಾಡ್ರಿಗಸ್‌ರವರ ಬದುಕು ಮತ್ತುಕಾಯಕ ನಮ್ಮೆಲ್ಲರಿಗೂ ಪ್ರೇರಣೆಯಾಗಲಿ.
No comments:
Post a Comment