Thursday, 8 November 2018

ನಾನು ಹೆಣ್ಣು

¨ ಡೇವಿಡ್ ಕುಮಾರ್

ಎಲೈ ಗಂಡೇ...
ಕೊಚ್ಚಿ ಹೋಗಲಿ ನಿನ್ನ ಹುಚ್ಚು ದಂಗೆಗಳು
ನನ್ನ ಋತುರಕ್ತದ ಕೆಂಪು ಹೊಳೆಯಲಿ

ಮುಟ್ಟು ಮುಟ್ಟೆಂದು ಅಟ್ಟುವಿರೋ ಎನ್ನ
ರಟ್ಟು ಮಾಡುವೆನು ನಿನ್ನ ಗುಟ್ಟುಗಳ
ಋತುಸ್ರಾವವು ಹೊಲಸಲ್ಲವೋ ಮೂಢ
ಅಂಡಾಣುಗಳ ಬ್ರಹ್ಮಾಂಡವಿದು !
ಮಾಸಕೊಮ್ಮೆ ಸ್ರವಿಸುವೆನು ಸ್ತ್ರೀಸಾರವ
ಹರಿಯುವುದು ಕ್ರಾಂತಿಯ ಕೆಂಪು ಝರಿ !

ಓ ಅಲ್ಲಾ...
ಕಪ್ಪುಮಸಿ ವೇಷವ ತೊಡಿಸಿ
ಮಸೀದಿಯಿಂದ ಬಹಿಷ್ಕರಿಸಿ
ತಲ್ಲಾಕು ತಲವಾರುಗಳ
ನೋವು ತರಹೇವಾರುಗಳು

ಓ ಕ್ರಿಸ್ತ...
ನೀನೇನೋ ಶಿಲುಬೆಯಿಂದ ಇಳಿದೆ
ನಾನೋ... ನೇತಾಡುತ್ತಿರುವೆ
ಪುರುಷ ಪ್ರಧಾನ ಕ್ರೂಝೆಯಲಿ
ದೇವರ ದಾಸಿ ಎಂಬ ಫಲಕದಡಿಯಲಿ




No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...