Monday, 8 October 2018

ಸಂತ ಯೊವಾನ್ನರ ಶುಭಸಂದೇಶ - 2



                                                                                                   - ಸಹೋ. ವಿನಯ್ ಕುಮಾರ್, ಚಿಕ್ಕಮಗಳೂರು




ಶುಭಸಂದೇಶ ನಡೆದು ಬಂದ ದಾರಿ
· ಯೇಸುವಿನ ಜೀವನ ಪರಿಸ್ಥಿತಿ.
· ಆದಿ ಧರ್ಮಸಭೆಯ ಪರಿಸ್ಥಿತಿ
· ಶುಭಸಂದೇಶಕರ್ತರ ಹಿನ್ನೆಲೆ 
· ಪಾಷಂಡವಾದಗಳ ಮಧ್ಯೆ ವಿಶ್ವಾಸ ಬಿತ್ತುವ ಪರಿಸ್ಧಿತಿ
· ಆರಾಧನಾ ವಿಧಿಯ ಪ್ರಭಾವ.
· ಜನರ ಜೀವನ ಪರಿಸ್ಧಿತಿ.
ಇವೆಲ್ಲವೂ ಶುಭಸಂದೇಶದ ಒಳಗೆ ಹಾಸುಹೊಕ್ಕಿವೆ ಹಾಗು ಈ ಎಲ್ಲಾ ಅಂಶಗಳ ತುಣುಕುಗಳನ್ನು ನಾವು ಕಾಣಬಹುದಾಗಿದೆ. ಮೊದಲು ಮೌಖಿಕವಾಗಿದ್ದ ಶುಭಸಂದೇಶವನ್ನು ಸಂಗ್ರಹಿಸಿ ಅದನ್ನ ಸಂಕಲನ ಮಾಡಿ ಕೊನೆಗೆ ಬರವಣಿಗೆಯ ಮೂಲಕ ಹೊರತರಲಾಯಿತು.
 ಶುಭಸಂದೇಶಗಳಲ್ಲಿ ಯೇಸು ಸ್ವಾಮಿಯ ಚಿತ್ರಣ.
ವಾಸ್ತವ ಕ್ರಿಸ್ತ (ಜನನಜೀವನದ ಸ್ಥಳಸಮಯನಡವಳಿಕೆಪುರಾಣದ ಕುರಿತು)
ಐತಿಹಾಸಿಕ ಕ್ರಿಸ್ತ (ಇತಿಹಾಸಕ್ಕೆ ತಳಕು ಹಾಕಿಕೊಂಡು, ಎಲ್ಲಾ  ಕಟ್ಟುಪಾಡುಗಳನ್ನು ತೊರೆದು)
ಶುಭಸಂದೇಶದ ಕ್ರಿಸ್ತ (ಶುಭಸಂದೇಶಕರ ಕಣ್ಣಿನಿಂದ ಕಾಣುವುದು)
ಶುಭಸಂದೇಶ ನಿರ್ಮಾಣದ ಕಾಲಾವಧಿ
· ಯೇಸುಸ್ವಾಮಿ (ಕ್ರಿ.ಪೂ. ೬ ರಿಂದ ಕ್ರಿ.ಶ. ೩೦)
·  ಪ್ರೇಷಿತರು ಮತ್ತು ಆದಿಸಭೆ   (ಕ್ರಿ.ಶ. ೩೦- ೬೫                         
·  ಶುಭಸಂದೇಶಗಳ ಕಾಲಾವಧಿ (ಕ್ರಿ.ಶ. ೬೫- ೧೦೦)
· ಮಾರ್ಕ  (ಕ್ರಿ.ಶ. ೬೫-೭೦                               
·  ಮತ್ತಾಯ + ಲೂಕ (ಕ್ರಿ.ಶ. ೮೦- ೯೦                                        
· ಯೊವಾನ್ನ (ಕ್ರಿ.ಶ. ೯೫-೧೦೦)
 ನಮ್ಮ ಗಮನಕ್ಕೆ ಯೇಸುಸ್ವಾಮಿ ಸತ್ತು ಪುನರುತ್ಧಾನರಾಗಿ ಸುಮಾರು ೭೦ ವರ್ಷದ ಬಳಿಕ ಶುಭಸಂದೇಶಗಳನ್ನುರಚಿಸಲಾಗಿದೆ ಕಾಲಾವಧಿಯಲ್ಲಿ ಶುಭಸಂದೇಶವು ಪ್ರೇಷಿತರಿಂದ ಜನರಿಂದ ಬಾಯಿಂದ ಬಾಯಿಗೆ ಹರಡುತ್ತಿತ್ತುಪ್ರೇಷಿತರಮರಣದಿಂದಾಗಿ ಶುಭಸಂದೇಶ ಅಳಿದು ಹೋಗಬಹುದೆಂಬ ಆತಂಕದಲ್ಲಿ ಶುಭಸಂದೇಶವನ್ನು ಬರವಣಿಗೆಯ ಮೂಲಕಪ ಪ್ರಕಟಿಸುವಂತೆ ಮುಂದಾದರುಯಾವುದೇ ಒಂದು ಘಟನೆ ನಡೆದು ಒಂದು ವಾರ ಬಿಟ್ಟು ಅದರ ಬಗ್ಗೆ ಕೇಳಿದರೆ ನಮಗೆ ಎಷ್ಟರಮಟ್ಟಿಗೆ ಅದು ನೆನಪಿಗೆ ಬರುತ್ತದೆ ಎಂಬುದು ಪ್ರಶ್ನೆ? ಆದರೆ ಇಲ್ಲಿ ಸುಮಾರು ೭೦ ವರ್ಷದ ಬಳಿಕ  ಘಟನೆಗಳನ್ನುಬರೆಯುತ್ತಿದ್ದಾರೆ ಎಂಬುದು ಗಮನಾರ್ಹ.
ನಾವು ಶುಭಸಂದೇಶವನ್ನು ಗಮನಿಸಿದರೆ ನಮಗೆ ಸಿಗುವುದು ಶುಭಸಂದೇಶ ಪ್ರಾರಂಭವಾಗಿರುವುದು ಯೇಸುಸ್ವಾಮಿಯ ಜನನದಿಂದ, ಆದರೆ ನಿಜವಾಗಿಯೂ ಶುಭಸಂದೇಶ ಆರಂಭವಾದದ್ದು ಕ್ರಿಸ್ತನ ಪುನರುತ್ಧಾನದಿಂದ. ಶುಭಸಂದೇಶ ಹಿಮ್ಮುಖವಾಗಿ ಆರಂಭವಾಗಿದೆ. ಒಂದು ಸಿನಿಮಾದ ಅಂತ್ಯವನ್ನು ಮೊದಲು ತೋರಿಸಿದಂತೆ, ಪುನರುತ್ಧಾನದಿಂದ ಆರಂಭಗೊಂಡು ಆತನ ಜನನದವರೆಗೆ ನಿರ್ಮಿತವಾಗಿದೆ. ಎಲ್ಲಾ ವಿವರಗಳು ಸಂಗ್ರಹವಾದ ಮೇಲೆ ಅದನ್ನು ಸರಿಯಾದರೀತಿಯಲ್ಲಿ ಕ್ರಮಬದ್ದವಾಗಿ ಅಳವಡಿಸಲಾಗಿದೆ. ಆದಿ ಧರ್ಮಸಭೆಯಲ್ಲಿ ಪುನರುತ್ಥಾನದ ಮಹತ್ವ ಬಹಳ ದೊಡ್ಡದಾಗಿದೆ. ಎಲ್ಲಾಆರಾಧನೆ, ಪೂಜಾವಿಧಿಗಳು, ಪ್ರಾರ್ಥನೆಗಳು ಕ್ರಿಸ್ತನ ಪುನರುತ್ಧಾನವನ್ನೇ ಕೇಂದ್ರವಾಗಿಟ್ಟುಕೊಂಡಿವೆ.
ಶುಭಸಂದೇಶ ಪದದ ಅರ್ಥ:
ಶುಭಸಂದೇಶ ಎಂಬ ಪದವು ಗ್ರೀಕ್ ಭಾಷೆಯ ‘ಎವಾಂಗೇಲಿಯೋನ’ ಎಂಬ ಪದದಿಂದ ಬಂದಿದೆ. ನಾಮಪದ ಎಂವಾಗೇಲಿಯೋನ ಕ್ರಿಯಾಪದ ಎವಾಂಗೇಲಿಯೂಸ. ಈ ಪದವನ್ನು ಯುದ್ದದಲ್ಲಿ ಜಯ ಗಳಿಸಿದಾಗ, ಕುಟುಂಬದಲ್ಲಿ ಗಂಡುಮಗು ಜನಿಸಿದಾಗ, ಮದುವೆಯ ಶುಭ ಸಮಯದಲ್ಲಿ ಬಳಸುತ್ತಿದ್ದರು. ಹಿಬ್ರೂ ಭಾಷೆಯಲ್ಲಿ ಬೆಸೊರಾಹ ಅಂದರೆ ಯುದ್ದದಲ್ಲಿಜಯಗಳಿಸಿದ ಶುಭ ಸಮಾಚಾರ (೨ ಸಮು ೧೮, ೨೦) ಅಥವಾ ಶುಭ ಸಮಾಚಾರ ತಂದಂತಹ ವ್ಯಕ್ತಿಗೆ ಬಹುಮಾನ. (೨ಸಮು ೪:೧೦, ೧೮:೨೨, ೨ ಅರಸ ೭:೯) ಒಟ್ಟಾರೆ ಈ ಪದದ ಅರ್ಥ ಶುಭ ಸಮಾಚಾರ, ರಕ್ಷಣೆಯ ಶುಭಸಮಾಚಾರ ಎಂಬುದಾಗಿದೆ.
( ಮುಂದುವರಿಯುವುದು)


No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...