Monday, 8 October 2018

ಕಥಾದನಿ

- ಇನ್ನಾ



    ಹೆನ್ರಿ ನೌವೆನ್ ಈ ಒಂದು ಕಥೆಯನ್ನು ಹೇಳುತ್ತಾರೆ. ಒಬ್ಬ ಮುದುಕ ಗಂಗಾ ನದಿಯ ತೀರದಲ್ಲಿ ಪ್ರತಿದಿನವೂ ಧ್ಯಾನ ಮಾಡುತ್ತಿದ್ದ. ಒಂದು ದಿನ ಧ್ಯಾನ ಮಾಡುವಂತಹ ಸಮಯದಲ್ಲಿ, ಚೀಳೊಂದು ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದನ್ನು ಕಂಡು, ಚೇಳನ್ನು ರಕ್ಷಿಸಲು ಮುನ್ನುಗ್ಗಿದ. ಚೇಳನ್ನು ನೀರಿನಿಂದ ತೆಗೆಯಲು ಪ್ರಯತ್ನಿಸುತ್ತಿದ್ದಂತೆ, ಆ ಚೇಳು ಅವನ ಕೈ ಕಚ್ಚಿತು. ಆದರೂ ಬಿಡದೆ, ಚೇಳನ್ನು ನೀರಿನಿಂದ ಮೇಲೆತ್ತಲು ಹೋದಾಗ, ಮತ್ತೊಮ್ಮೆ ಆ ಚೇಳು ಅವನ ಕೈಯನ್ನು ಕಚ್ಚಿತು. ಅವನ ಕೈ ನೋವಿನಿಂದ ಉರಿಯಲು ಪ್ರಾರಂಭಿಸಿತ್ತು. ಆದರೂ ಕೈ ಚೆಲ್ಲದೆ, ಚೇಳನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದ ಆ ವ್ಯಕ್ತಿಯನ್ನು ಕಂಡ ಒಬ್ಬ ಯಾತ್ರಿಕ “ಏಯ್! ಮೂರ್ಖ, ನಿನಗೆ ಏನಾಗಿದೆ? ಆ ಕೃತಜ್ಞತೆಯಿಲ್ಲದ ವಿಷಜಂತುವನ್ನು ರಕ್ಷಿಸಲು ನಿನ್ನ ಜೀವವನ್ನೇ ಅಪಾಯಕ್ಕೆ ಒಳಗಾಗಿಸುತ್ತಿರುವೆಯಲ್ಲಾ? ನಿನಗೆ ಬುದ್ಧಿ ಇದ್ಯಾ? ಎಂದು ಬೈಯುತ್ತಿದಂತೆ, ಆ ಮುದುಕ ಶಾಂತವಾಗಿ “ಓ ಸ್ನೇಹಿತನೇ ಕಚ್ಚುವುದು ಚೇಳಿನ ಗುಣ, ರಕ್ಷಿಸುವುದು ನನ್ನ ಗುಣ” ಎಂದು ಹೇಳಿ ತನ್ನ ಪ್ರಯತ್ನವನ್ನು ಮುಂದುವರಿಸಿದನಂತೆ. 
---------------------------

     ಕಾರ್ವೆತ್ ಮಿಚೆಲ್ ಹೇಳಿದ ಕಥೆಯಿದು. ಒಬ್ಬ ಒಂದು ಗಿಳಿಯನ್ನು ಖರೀದಿಸಿ, ಮನೆಗೆ ತಂದು “ಇವೊತ್ತು” ಎಂದು ಹೇಳಲು ಕಲಿಸಿಕೊಟ್ಟನಂತೆ. ಅ ಗಿಳಿ ಅ ವ್ಯಕ್ತಿಯನ್ನು ಕಂಡಾಗಲೆಲ್ಲಾ “ಇವೊತ್ತು” “ಇವೊತ್ತು” ಎಂದು ಕಿರಿಚಿಕೊಳ್ಳುತ್ತಿತ್ತಂತೆ. ಅವನು ಬೆಳಗ್ಗೆ ಎದ್ದಾಗ, ರಾತ್ರಿ ಮನಗೆ ಬಂದಾಗ ಯಾವಾಗಲೂ ಆ ಗಿಳಿ “ಇವೊತ್ತು” ಎಂದು ನೆನಪಿಸುತ್ತಿತಂತೆ. 
   ಸುಮಾರು ಆರು ತಿಂಗಳ ನಂತರ ಆ ವ್ಯಕ್ತಿ ಇನ್ನೊಂದು ಗಿಳಿಯನ್ನು ಖರೀದಿಸಿ ನಾಳೆ ಎಂದು ಹೇಳಲು ಆ ಗಿಳಿಗೆ ಕಲಿಸಿಕೊಟ್ಟನಂತೆ. ಬದುಕೆಂಬುದು ಇಂದು ಮಾತ್ರ, ಅದಕ್ಕೆ ನಾಳೆಗಳಿಲ್ಲ ಎಂದು ನಾನು ಬದುಕುತ್ತಿದ್ದೇನೆ… ಆದರೆ ಬದುಕೆಂಬುದು ಇಂದು ನಾಳೆಗಳ ವಾಸ್ತವ. ವರ್ತಮಾನ ಮತ್ತು ಭವಿಷ್ಯತ್ ಕಾಲದ ಮೊತ್ತ. ಅ ಎರಡು ಗಿಳಿಗಳು ಬದುಕೆಂಬುದು ಇಂದು ನಾಳೆಗಳ ವಾಸ್ತವ ಎಂದು ಅರಿತು ಬಾಳಲು ಅವನಿಗೆ ನೆರವಾದವಂತೆ.





No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...