ಅಳುವ ಮನಸ್ಸ
ಸಂತೈಸುವ
ಪ್ರತಿಯೊಬ್ಬರೂ ನನ್ನವರು
-------------
ನೋವಿಗೆ ನೂರೆಂಟು ಕಾರಣಗಳಿರಬಹುದು
ಆದರೆ ನೋವಿಗೆ ಸ್ಪಂದಿಸಲು ಇರುವ
ಕಾರಣ ಒಂದೇ: ಮನುಷ್ಯತ್ವ
-------------
ಪುಸ್ತಕದಲ್ಲಿದ್ದ ಸಾಲುಗಳು
ನನ್ನ ಪ್ರತಿಬಿಂಬಿಸುತ್ತಿತ್ತೋ ಏನೋ
ಓದಲು ಭಯವಾಗುತ್ತಿದೆ..
--------
ಬಡಿದು ಸಾಯಿಸುವುದರಿಂದ
ಉಳಿಯುವುದಿಲ್ಲ ಧರ್ಮ
ಉಳಿಯುವುದು ಪ್ರೀತಿಯ ಒರತೆಯಿಂದ
------------
ನಿನಗೆ ನಿನ್ನ ಧರ್ಮದವರು
ನಿನ್ನವರಾದರೆ ನನಗೆ
ಧರ್ಮವ ಮೀರಿದ ಪ್ರೀತಿಯ
ಬಿತ್ತುವವರೆಲ್ಲರೂ ನನ್ನವರು…
¨ ಜೀವಸೆಲೆ
No comments:
Post a Comment