ಶ್ರಮದಾಳು, ಮೌನ ಶಿಲ್ಪಿಯೇ
ರಿಕ್ತ ಮನದೊಳು ಕಾವ್ಯ ರಚಿಸಿಹೆ
ನಿನಗಾಗಿ ನಿಹಿತಗೊಂಡ ಕೈಬರಹಗಳು
ಋಣಿಯಾಗ ಬಯಸಿವೆ ನುಡಿ ಭಾವನೆಗಳು
ಆಕಾರವಾಗಿಸಿ ಎನಗೆ ಉಸಿರ ನೀಡಿಹೆ
ಸಾಗರ ತರಂಗದೊಳು ಕೈಸೆರೆ ಮಾಡಿಹೆ
ನನಗ್ಯಾಕೆ ಈ ನಿಸ್ತಾರದ ಬದುಕು
ನೀರಧಿ ಮನವ ಸವಿಸ್ತರಿಸಿ ಕದಕು
ಬಾಳು ದೂರದ ಹಾದಿ ಸಾಗುವಲ್ಲಿ
ತೀರವೆ ಕಾಣದ ಸಾಗರದಿ
ನಿನ್ನ ನೆನೆದು ಹಾತೊರೆದು ಜೀವಿಸಿಹೆ
ಬದುಕ ಏಕಾಂತತೆ ತಿಳಿಯದೆ
ಕಾದಿದೆ ಎನ್ನ ಮನ ನೀನಿತ್ತ ಕರೆಯೊಳು
ಈಜಿಪ್ತ್ ತೊರೆದು ಕಾನನದ ಕಳೆಯೊಳು
ವಿರಾಗಿ ನಾನು, ನಿನ್ನನ್ನೇ ಹುಡುಕುತ್ತಿಹೆ
ಬದುಕ ಹಸನಾಗಿಸು ಹಾಲ್ಜೇನಿನೊಳು
ಬಾಳು ಚಿಗುರಾಗಲು ಫಲ ನಿನದಲ್ಲವೆ
ಮಾತು ಮಿಡಿಯಲು ಭಾವನೆ ನಿನದಲ್ಲವೆ
ನೀನು ದಿಟವಾದರೆ, ಆ ದಿಟ ನನದಾಗಲಿ
ಕಲ್ಲುಗಳು ಸಹ ನಿನ್ನ ಹೊಗಳಿ ಹಾಡಲಿ
ನಿನ್ನ ಜೋಲಿಯ ಅರಿವು ಮೂಡಿಸು
ನಿನ್ನ ಗುಡಿಯ ಕಟ್ಟೊ ಬಡಗಿಯಾಗಿಸು
ಅದ ಕಾಯೋ ಬಿಕ್ಷುವಾಗುವೆ
ನಿನ್ನ ಜನರ ಸೇವಾಹೈದನಾಗುವೆ
ಎಂದಿಗೂ ಕ್ರೌರ‍್ಯಕ್ಕೆ ಬಲಿಯಾಗದೆ
ನಿನ್ನ ಜಪದೊಳು ಈ ಉಸಿರು ನಿನದಾಗಲಿ
ಕೇಳೊಮ್ಮೆ ಈ ಭಿಕ್ಷುವಿನ ಅಳಲು
ನಿಹಿತನಾಗಿ ಸೇರ ಬಯಸುವೆ ನಿನ್ನೊಳು.
¨ ನಮಿ, ಬೆಂಗಳೂರು
No comments:
Post a Comment