ಆಸೆಗಳು ಬೆಸೆಯುವ ಸುಂದರ ಬೆಳಗಿನಲಿ
ಹಬ್ಬ-ದಿಬ್ಬಣಗಳ ಸಂಭ್ರಮವಿಲ್ಲದೆ
ಮುರುಕಲು ಗುಡಿಸಲೇ
ಅರಮನೆಯೆಂದು ಭಾವಿಸಿ
ಬದುಕುತಿರುವೆವು
ನಾವು ಬಡವರು.
ಕೊಂದು ತಿನ್ನುವ ಜನರ ಮಧ್ಯೆ
ಬಿರು ಬಿಸಿಲಲಿ ಬೇವರು ಸುರಿಸುತಾ
ಹಗಲಿರುಳೆನ್ನದೆ ದುಡಿದರೂ
ಹಿಟ್ಟರದೆ ಬರಿ ಹೊಟ್ಟೆಯಲಿ
ತಂಗಳೆ ಬಿಸಿ ಎಂದು ಭಾವಿಸಿ
ದೂಡುತಿರುವೆವು ದಿನಗಳನ್ನೆ
ನಾವು ಬಡವರು.
ಹರಿದ ಬಟ್ಟೆಯನ್ನುಟ್ಟು
ಬಿರಿಯುವ ಚಳಿಯಲಿ
ನಡುಗುವ ಮೈಗೆ ಹೊದಿಕೆಯು ಇರದೆ
ಮನೆಯಂಗಳದ ಎಳೆ ಬೀಸಿಲೇ
ಹೊದಿಕೆಯೆಂದು ಭಾವಿಸಿ
ನಾವು ಬಡವರು.
ಪ್ರತಿದಿನವೂ ಚಿಮುಣಿಯ ಬೆಳಕಿನಲಿ
ಕನಸುಗಳನ್ನು ಹೆಣೆಯುತ್ತಾ
ಈಸಿ ಜೈಯಿಸುತ್ತಿರುವೆವು
ನಾವು ಬಡವರು
¨ ಗಾಯತ್ರಿ, ಮಾನವಿ
No comments:
Post a Comment