ಎಲ್ಲವೂ ಸ್ತಬ್ಧವಾಗಿಬಿಟ್ಟಿದೆ ಬಿಡಿ!
ಕೊರೊನಾ
ಮಾಹಾಮಾರಿಯಿಂದ
ಎಲ್ಲವು ಸ್ತಬ್ಧ.
ಕೆಲಸವಿಲ್ಲ, ಊಟವಿಲ್ಲ ಓಡಾಟವಿಲ್ಲ
ಜಗದ ಒಟ್ಟು ವ್ಯಾಪಾರವೇ ಇಲ್ಲ..
ಈ ಸ್ತಬ್ಧ ಶಬ್ದಗಳ ಜೊತೆಜೊತೆಗೆ
ಕೇಳುತ್ತಿದೆ ಹಕ್ಕಿಗಳ ಚಿಲಿಪಿಲಿ
ತಣ್ಣನೇ ಗಾಳಿಯ ಪಿಸುಗುಟ್ಟು
ಹಸಿವವನ ನರಳಾಟದ ಚಿತ್ಕಾರ
ತಾಯಿ ಕಳೆದುಕೊಂಡ ಮಗಳ ರೋದನ
ಮನೆಸೇರುವ ಮುಂಚೆನೇ ಮಣ್ಣಾದ
ಪುಟ್ಟ ಹುಡುಗಿಯ ಮೃತ್ಯು
ಮತಾಂಧರ ಹಾವಳಿಯಿಂದ
ಬಲಿಪಶುಗಳಾದ ನಮ್ಮ ಅಣ್ಣತಮ್ಮಂದಿರ ಹತಾಶ
ಕೆಲಸವಿಲ್ಲದೆ ಕಂಗಲಾದ ನೋವು
ಕೇಳುತ್ತಿದೆ ಎಲ್ಲವೂ ಸ್ತಬ್ಧಶಬ್ದಗಳ ಈ ವ್ಯಾಪಾರದಲ್ಲಿ.
ಇಂತಹ ದನಿಯನ್ನು ಕೇಳಿಸಲೆಂದೇ
ಸ್ತಬ್ಧವಾಯಿತೇ ಜಗತ್ತು ಗೊತ್ತಿಲ್ಲ!
ಆದರೂ ಕೇಳುತ್ತಿದೆ
ಡಾಕ್ಟರ್ ನರ್ಸುಗಳ ಆತಂಕ
ಅಶಾ ಕಾರ್ಯಕರ್ತರ ಕೂಗಾಟ
ಕೂಲಿಕಾರ್ಮಿಕರ ಪರಕೀಯತೆಯ ನೋಟ
ರೈಲಿನ ಹಳಿಯ ಮೇಲೆ ಸುಸ್ತಾಗಿ ಮಲಗಿ
ಮಾಂಸದ ಮುದ್ದೆಯಾದ ದೇಹಗಳ ಆತ್ಮ
ಹೊಲಸು ರಾಜಕೀಯದ ರಂಪಾಟ
ಯಾಕೋ ಈ ಎಲ್ಲಾ ದನಿಗಳ ನರಳಾಟವ
ಕೇಳಿಸಿಕೊಂಡರೂ ನಮ್ಮಲ್ಲಿ
ಅನಾದರ ಅಲಕ್ಷ್ಯ ಅನಾಸಕ್ತಿ!
ಕೇಳಿಸಿಕೊಳ್ಳಬೇಕಾದವರೂ ಕೇಳಿಸಿಕೊಳ್ಳುತ್ತಿಲ್ಲ
ಕೇಳಿಸಿಕೊಂಡವರಲ್ಲಿ ಲಾಭನಷ್ಟದ ಪರಿತಾಪ
ಆಧಿಕಾರದ ಆಹಮಿಕೆ, ಧರ್ಮದ ಅಮಲು
ಮಾಧ್ಯಮದ ಪಿಟೀಲು.
ದಲ್ಲಾಳಿ ಕಾಪೆರ್Çರೇಟರ್‍ಗಳ ದುರಾಸೆ
ಹೌದು,
ನಮ್ಮ ನೋವಿಗೂ ಬೆಲೆ ಇಲ್ಲವೇ?
ನೋವು ನೋವುಗಳಲ್ಲವೇ ಅವು?
ಅವು ಬೆಲೆಕಳೆದುಕೊಂಡ ನಾಣ್ಯಗಳೇ?
ಬೇಡವಾದ ಕಾಲಕಸವೇ?
ಕೇಳಿಸದೆ ಇದ್ದರೆ ಇವೆಲ್ಲವೂ ನಮಗೆ ನಿಮಗೆ
ನಮ್ಮ ನಿಮ್ಮ ಐವತ್ತಾರು ಇಂಚಿನ ಎದೆಯಲ್ಲಿ
ಎಲ್ಲವೂ ಸ್ತಬ್ಧವಾಗಿದೆ ಬಿಡಿ!
**********
No comments:
Post a Comment