ಇಲ್ಲಿಹುದು ನಿನ್ನ ಕಾಲ್ಮಣೆ,
ನಿನ್ನ ಪಾದವದರ ಮೇಲಿದೆ,
ಆಶ್ರಯವದು ಹೀನರಿಗೆ,
ದೀನರಿಗೆ, ಅನಾಥರಿಗೆ.
ನಿನಗೆ ನಾನೆರಗುವಾಗ,
ನಾ ನಿಲುಕಲಾರೆ
ಹೀನ ದೀನ ಅನಾಥರೆಲ್ಲ
ಜೋತುಬಿದ್ದ ನಿನ್ನ ಪಾದದಾಳವ.
ನಾರುಮಡಿಯನುಟ್ಟು
ನೀನು ಹೀನ ದೀನ ಅನಾಥರೊಡನೆ,
ಆಡುತಿರಲು ಹಮ್ಮು ಬಿಮ್ಮು
ಸುಳಿವುದುಂಟೇ ಸನಿಹದಿ?
ಅನಾಥರೊಂದಿಗೆ ನೀನು
ಒಡನಾಡುವಾಗ,
ನನ್ನ ಮನಸಿಗದು ತಟ್ಟುವುದೇ ಇಲ್ಲ.
(ಟ್ಯಾಗೋರರ Here
is thy footstool and there rest thy feet where live the poorest ಕವನದ ಭಾವಾನುವಾದ: ಸಿ ಮರಿಜೋಸೆಫ್)
-0-0-0-0-
No comments:
Post a Comment