Saturday, 20 June 2020

ಆಗು ಹೋಗುಗಳ ನಡುವೆ - ವಾಸ್ತವವನ್ನು ಬದಲಿಸಲಾಗುವುದಿಲ್ಲ ಎಂಬ ಸತ್ಯ ಅವರಿಗೆ ತಿಳಿಸಬೇಕಾಗಿದೆ”

 - ಜೋವಿ

 

ನಮ್ಮಲ್ಲಿ ಹೊಸತಳಿಯ ಭಕ್ತರು ಅಂದರೆ ಅಂಧ ಅನುಯಾಯಿಗಳು ಊರು ತುಂಬಾ ಹುಟ್ಟಿಕೊಂಡಿದ್ದಾರೆ. ಇವರು ಎಲ್ಲವನ್ನೂ ಅದರಲ್ಲೂ ರಾಜಕೀಯ ನಾಯಕರನ್ನು, ಅವರು ಹೇಳುವ ಸಾವಿರಾರು ಸುಳ್ಳುಗಳನ್ನು ಕಣ್ಣುಮುಚ್ಚಿ ನಂಬಿ, ಅನುಸರಿಸುವಂತವರು. ಅವರಲ್ಲಿ ಸಿದ್ಧಾಂತಗಳ ಬಗೆಗಿನ ಜ್ಞಾನವಾಗಲಿ, ಇತಿಹಾಸದ ಪ್ರಜ್ಞೆಯಾಗಲಿ ಇರುವುದಿಲ್ಲ. ಇವರು ಸಾಮಾಜಿಕ ಅಥವಾ ಡಿಜಿಟಲ್ ಮಾಧ್ಯಮದಲ್ಲಿ ಬರುವಂತಹ ಮಾಹಿತಿಗಳನ್ನು (ಸುಳ್ಳು ಸುದ್ದಿಗಳನ್ನು) ವಿಮರ್ಶೆಗೆ ಒಳಪಡಿಸದೆ ಎಲ್ಲವನ್ನು ವೇದವಾಕ್ಯವೆಂದು ಸ್ವೀಕರಿಸುವುದರಿಂದ ಇವರನ್ನು ಮುಲಾಜಿಲ್ಲದೆ ಭಕ್ತರೆಂದೇ ಕರೆಯಬಹುದು. ಈ ರೀತಿಯ ಒಂದು ಕಲ್ಟ್ (ವ್ಯಕ್ತಿಪೂಜೆ) ಅಂದರೆ ಆರಾಧನಾ ಅಂಧ ಅನುಸರಣೆಯನ್ನು ಸಾಮಾಜಿಕ ಮಾಧ್ಯಮ ಸಾಧನಗಳಾದ ವಾಟ್ಸಾಪ್, ಫೇಸ್‍ಬುಕ್, ಟ್ವಿಟರ್ಗಳು ಸೃಷ್ಟಿಸಿ ಪೆÇೀಷಿಸಿಕೊಂಡು ಹೋಗುತ್ತಿವೆ. ಜತೆಗೆ ಟಿವಿ ಸುದ್ದಿ ನಿರೂಪಕರು, ಟಿವಿ ಚಾನೆಲ್‍ಗಳು, ಮುದ್ರಣ ಮಾಧ್ಯಮಗಳು ಸಹ ಅಂಧ ಅಭಿಮಾನದ ವ್ಯವಸ್ಥೆಗೆ ಸಾಕಷ್ಟು ನೀರು ಗೊಬ್ಬರ ಹಾಕಿ ಬೆಳೆಸುತ್ತಿವೆ. ಒಟ್ಟಾರೆ ಮಾಧ್ಯಮ ವ್ಯವಸ್ಥೆಗಳು ತಮ್ಮದೇ ಆದ ‘ಪರ್ಯಾಯ’ ಅಥವಾ ‘ಸುಳ್ಳು ಸಂಗತಿ’ಗಳನ್ನು ಆಧರಿಸಿ ಅವರ ಹಿತಪೆÇೀಷಕರ ಆದೇಶದಂತೆ  ‘ಪರ್ಯಾಯ’ ಅಥವಾ ‘ಸುಳ್ಳು ವಾಸ್ತವ’ವನ್ನು ಸೃಷ್ಟಿಸಿ ಅದೇ ಸತ್ಯವೆಂದು ಸಾವಿರಾರು ಸಲ ತಮ್ಮ ಮಾಧ್ಯಮಗಳ ಮೂಲಕ ಹೇಳಿಸಿ ಸುಳ್ಳುಗಳನ್ನು ‘ಸತ್ಯ’ವಾಗಿಸಿವೆ. ಇದರ ಪರಿಣಾಮವಾಗಿ ಈ ಭಕ್ತಗಣದಲ್ಲಿ ಒಂದು ರೀತಿಯ ದೃಷ್ಟಿಕೋನವನ್ನೇ ಬೆಳೆಸಿಬಿಟ್ಟಿದೆ. ಆದರೆ ಭಕ್ತರು   ತೋರ್ಪಡಿಸುವ ಈ ದೃಷ್ಟಿಕೋನವು ಸ್ವಷ್ಟ ಮತ್ತು ನೈಜ ಮಾಹಿತಿಗಳಿಂದಾಗಲಿ ಅದು ಐತಿಹಾಸಿಕ ಸತ್ಯಗಳನ್ನು ಆಧರಿಸಿ ರೂಪುಗೊಂಡಿರುವಂತಹದಲ್ಲ ಎಂಬ ಸತ್ಯವನ್ನು ನಾವು ಮರೆಯಬಾರದು.

2017 ಜನವರಿಯಲ್ಲಿ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ರ ಪ್ರಮಾಣ ಸ್ವೀಕಾರ ಸಮಾರಂಭದಲ್ಲಿ ಬೃಹತ್ ಜನಸಮೂಹ ಪಾಲ್ಗೊಂಡಂತೆ ತೋರಿಸುವ ‘ಪೆÇೀಟೋಶಾಪ್ ಇಮೇಜ್’ ಅಥವಾ ಚಿತ್ರಗಳ ಬಗ್ಗೆ ಪ್ರಿಂಟ್ ಮಾಧ್ಯಮಗಳು ಪ್ರಶ್ನಿಸಿದಾಗ, ಅವರ ಹಿರಿಯ ಸಲಹೆಗಾರ ಕೆಲ್ಲಿಯೆನ್ ಕಾನ್ವೇ ಅವರು ‘ನಮ್ಮದೇ ಆದ ಸತ್ಯ ಸಂಗತಿಗಳು ನಮ್ಮಲಿವೆ’ ಎಂದು ಉತ್ತರಿಸಿದರಂತೆ. ಸತ್ಯವೆಂಬುವುದು ಯಾರ ಅಸ್ತಿಯಲ್ಲ, ಅವು ಸ್ವತಂತ್ರವು ಅಂದರೆ ನಮ್ಮ ವೈಯಕ್ತಿಕ ಪೂರ್ವಪ್ರಜ್ಞೆಗಳಿಂದ ಸ್ವತಂತ್ರವಾಗಿವೆ ಎಂದು ತಿಳಿಸಲು ನ್ಯೂಯಾರ್ಕ ಟೈಮ್ಸ್ ಎಷ್ಟು ಪ್ರಯತ್ನಪಟ್ಟರೂ ಟ್ರಂಪ್ ಮತ್ತು ಅವರ ತಂಡ ತಮ್ಮದೇ ಆದ ‘ಸತ್ಯ ಸಂಗತಿ’ಗಳನ್ನು ಜನರಿಗೆ ಮಾಧ್ಯಮಗಳ ಮೂಲಕ ಉಣಿಸಲು ಪ್ರಾರಂಭಿಸಿದರು. ಅದು ಅವರ ಅನುಯಾಯಿಗಳಿಗೆ ಅಂದರೆ ಭಕ್ತಗಣಕ್ಕೆ ‘ಪರ್ಯಾಯ ವಾಸ್ತವ’ದಂತೆ ಕಾಣಿಸಿಕೊಂಡಿತು. ಆಷ್ಟು ಮಾತ್ರವಲ್ಲ, ಕೆಲವೊಂದು ಸುದ್ದಿವಾಹಿನಿಗಳಿಗೆ ಟಿವಿ ಚಾನೆಲ್‍ಗಳಿಗೆ ಮತ್ತು ವಾಟ್ಸಪ್, ಫೇಸ್ಬುಕ್ ಗುಂಪುಗಳಿಗೆ ಭಕ್ತರನ್ನು sssಸೇರಿಸಿ, ಸದ್ಯಸರಾಗಿಸಿ ‘ಎಲ್ಲವೂ ಚೆನ್ನಾಗಿದೆ’ ಎಂಬ ಭ್ರಮೆಯಲ್ಲಿ ಅವರು ತೇಲುವಂತೆ ಮಾಡಲಾಯಿತು. ಟ್ರಂಪ್ ಸ್ವತಃ ಸಿ.ಎನ್.ಎನ್ ಮತ್ತು ಬಿ.ಬಿ.ಸಿ.ಯನ್ನು ನಕಲಿ ಸುದ್ದಿ ಚಾನೆಲ್‍ಗಳೆಂದು ಜರಿದು ಯಾವ ಸುದ್ದಿ ವಾಹಿನಿಗಳನ್ನು ತಮ್ಮ ಭಕ್ತರು ಶ್ರದ್ಧೆಯಿಂದ ನೋಡಬೇಕು ಎಂಬುವುದನ್ನು ಸಹ ಸ್ವಷ್ಟಪಡಿಸಿ, ಅವರ ಪ್ರಕಾರ ಫಾಕ್ಸ್ ನ್ಯೂಸ್ ಮಾತ್ರ ವಿಶ್ವಾಸದ ಅಥವಾ ನಂಬುಗೆಯ ಏಕೈಕ ಚಾನೆಲ್ ಅನಿಸಿಕೊಂಡಿತ್ತು.

ಇದೇ ರೀತಿಯ ವೈಪರೀತ್ಯ ಘಟನೆಗಳು ಭಾರತದಲ್ಲೂ 2013 - 14 ರಿಂದ ನಡೆಯುತ್ತಿವೆ, ಅದರಲ್ಲೂ ಮೋದಿ ಮತ್ತು ಅಮಿತ್ ಶಾರವರು ರಾಜಕೀಯ ಮುಂಚೂಣಿಗೆ ಬಂದನಂತರ ಈ ರೀತಿಯ ಕೈಚಳಕ ತಡೆರಹಿತವಾಗಿ ನಡೆಯುತ್ತಿದೆ ಮತ್ತು ವ್ಯವಸ್ಥಿತವಾಗಿ ರಾಜರೋಷವಾಗಿಯೇ ನಡೆಯುತ್ತಿದೆ. ಇವರು ಪಕ್ಷದ ಐಟಿ ಸೆಲ್‍ಗೆ ಮುಖ್ಯಸ್ಥರಾಗಿ ಮಾಜಿ ಬ್ಯಾಂಕರ್ ಅಮಿತ್ ಮಾಳವಿಯಾ ಅವರನ್ನು ಕರೆತಂದದಲ್ಲದೆ, ಒಂದು ದೊಡ್ಡ ಬಜೆಟ್ ಕೂಡ ಅದಕ್ಕೆ ಕೊಟ್ಟು ಲಕ್ಷಾಂತರ ಭಾರತೀಯರ ಮನಸ್ಸಿನ ಮೇಲೆ ಅನಿಯಮಿತವಾಗಿ ನಿಯಂತ್ರಿಸಲು ಮತ್ತು ದಾಳಿ ನಡೆಸಲು ಅವಕಾಶ ಮಾಡಿಕೊಟ್ಟರು. ಹೌದು, ಪಕ್ಷದ ಐಟಿ ಸೆಲ್‍ನ ಮುಖ್ಯಸ್ಥ ಮಾಳವಿಯಾ ಅವರಿಗೆ ಸುಮಾರು 150 ಉದ್ಯೋಗಿಗಳಿರುವ ತಂಡವು ಸಹಾಯ ಮಾಡುವುದಲ್ಲದೆ, 150 ಉದ್ಯೋಗಿಗಳ ತಂಡಕ್ಕೆ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಸುಮಾರು 20000 ಪಕ್ಷದ ಕಾರ್ಯಕರ್ತರು ಸಹಾಯ ಮಾಡುತ್ತಿದ್ದಾರೆ. ಇವರು ಐಟಿ ಸೆಲ್ ಸೃಷ್ಟಿಸುವ ಸುಳ್ಳು ಸುದ್ದಿಗಳನ್ನು ಅಥವಾ ಮೇಮ್ಸಗಳನ್ನು ಹರಡುವುದು ಮತ್ತು ಅವು ವೈರಲ್ ಆಗುವಂತೆ ನೋಡಿಕೊಳ್ಳುವುದು ಇವರ ಮುಖ್ಯ ಕೆಲಸ. ಈ ಕೆಲಸಕ್ಕೆ ಇವರಿಗೆಲ್ಲಾ ಸಾಕಷ್ಟು ಸಂಭಾವನೆಯನ್ನು ಸಹ ಕೊಡಲಾಗುತ್ತಿದೆ.

ಹೌದು, ನಕಲಿ ಫೇಸ್ಬುಕ್ ಪುಟಗಳನ್ನು (ಭಾರತೀಯ ಸೈನ್ಯದ ಹೆಸರಿನ ಹಲವಾರು ಪುಟಗಳು ಮತ್ತು ಕುರಾನ್ ಬಗ್ಗೆ ಮಾತನಾಡುವ ಮುಸ್ಲಿಂ ಧರ್ಮಗುರುಗಳ ಪುಟಗಳನ್ನು ಒಳಗೊಂಡಂತೆ) ಸೃಷ್ಟಿಸಿ ಇವುಗಳ ಮೂಲಕ ತಮ್ಮ ನಾಯಕರಿಗೆ ಲಕ್ಷಾಂತರ ನಕಲಿ ಭಕ್ತರನ್ನು, ಅನುಯಾಯಿಗಳನ್ನು ಸೃಷ್ಟಿಸಿ, ಸುಳ್ಳು ಮತ್ತು ದುರುದ್ದೇಶಪೂರಿತ ವಿಷಯಗಳನ್ನು ಹರಡುತ್ತಾ ‘ಪರ್ಯಾಯ ವಾಸ್ತವ’ವನ್ನು ಸೃಷ್ಟಿಸಲಾಗುತ್ತಿದೆ. ಈ ಪರ್ಯಾಯ ವಾಸ್ತವದ ಕೆಲವೊಂದು ಮುಖ್ಯ ವಿಷಯಗಳು ಯಾವುವೆಂದರೆ;‘ಮೋದಿ ಪ್ರಧಾನಿಯಾದ ನಂತರವೇ ಭಾರತದ ಅಭಿವೃದ್ಧಿಯಾಗುತ್ತಿದೆ, ಭಾರತ ಅಭಿವೃದ್ಧಿಯ ವೇಗಕ್ಕೆ ಮುಖ್ಯ ಅಡೆತಡೆಗಳು ಕಾಂಗ್ರೇಸ್ ನೇತೃತ್ವದ ವಿರೋಧ ಪಕ್ಷಗಳು, ಈ ಪಕ್ಷಗಳು ಭಾರತ ಪ್ರಬಲವಾಗುವುದನ್ನು ಬಯಸುವುದಿಲ್ಲ.. ಇತ್ಯಾದಿ. ಕಾಂಗಿ, ಗಂಜಿ ಗಿರಾಕಿ, ಎಡಪಂಥೀಯ, ಲಿಬರಲ್ಸ್, ಅರ್ಬನ್ ನಕ್ಸಲ್ಸ್ ಇವೆಲ್ಲವೂ ಭಕ್ತರ ನಿಘಂಟಿನಲ್ಲಿರುವ ಅತೀ ಹೆಚ್ಚು ಉಪಯೋಗಿಸಲ್ಪಡುವ ಕೊಳಕು ಪದಗಳಾಗಿವೆ.

ಮೊದಲನೆಯದಾಗಿ, ಸರ್ಕಾರದ ಎಲ್ಲಾ ನೀತಿಗಳನ್ನು ಮತ್ತು ಪ್ರಧಾನಮಂತ್ರಿಯ ಎಲ್ಲಾ ಕ್ರಮಗಳನ್ನು ಶ್ಲಾಘಿಸಿ ಅವುಗಳಿಗೆ ಬಿಟ್ಟಿ ಪ್ರಚಾರ ಕೊಡುವಲ್ಲಿ ಐಟಿ ಸೆಲ್‍ಗಳು ಪಕ್ಷದ ಮುಖ್ಯವಾಣಿಯಾಗಿವೆ. ಎರಡನೆಯದಾಗಿ, ದೇಶದ ದುಸ್ಥಿತಿಗೆ ಮಾಜಿ ಪ್ರಧಾನ ಮಂತ್ರಿ ನೆಹರೂ ಮತ್ತು ಅವರ ಕುಟುಂಬವನ್ನು ಹೊಣೆಗಾರನ್ನಾಗಿಸಿ ಅವರು ಎಸಗಿರುವ ತಪ್ಪುಗಳು ಅಂದರೆ 70 ವರ್ಷಗಳಲ್ಲಿ ಆದ ತಪ್ಪುಗಳನ್ನು ಸರಿ ಪಡಿಸಲು ಮೋದಿಯವರು ಹಗಲಿರುಳು ದುಡಿಯುತ್ತಿದ್ದಾರೆ ಎಂಬ ಭ್ರಮೆಯನ್ನು ಹುಟ್ಟಿಸಲಾಗುತ್ತಿದೆ. ಮೂರನೆಯದಾಗಿ, ಭಾರತದ ಪೌರಾಣಿಕಗಳಲ್ಲಿ ಕಾಣಿಸಿಕೊಳ್ಳುವ ‘ಸುವರ್ಣಯುಗ’ದಲ್ಲಿ ಪರಮಾಣು ಬಾಂಬುಗಳಿಂದ ಹಿಡಿದು ಅಂತರ್ಜಾಲದವರೆಗೆ ಎಲ್ಲವೂ ಅವಿಷ್ಕಾರಗೊಂಡಿದ್ದ ‘ಯುಗ’ವೆಂದು ಜನರನ್ನು ನಂಬಿಸಲಾಗುತ್ತಿದೆ. ಸಾವಿರಾರು ವರ್ಷಗಳ ಹಿಂದೆ ಭಾರತದಲ್ಲಿ ಮಾಡಿದ ಪ್ಲಾಸ್ಟಿಕ್ ಸರ್ಜರಿಗೆ ಗಣೇಶ ಮೊದಲ ಉದಾಹರಣೆ ಎಂದು ಮೋದಿ ಅವರೇ ಸ್ವತಃ ಹೇಳಿರುವುದನ್ನು ನಾವು ಇಲ್ಲಿ ಸ್ಮರಿಸಿಕೊಳ್ಳಬಹುದು. ಈ ರೀತಿಯ ಸುಳ್ಳು ಸರಣಿಯಲ್ಲಿ ಗೋ ಮೂತ್ರವು ಕ್ಯಾನ್ಸರ್ ಕಾಯಿಲೆಗೆ ಪರಿಹಾರಕ ಜೌಷಧಿ ಎಂದು ಸಹ ಜನರನ್ನು ನಂಬಿಸಲಾಗುತ್ತಿದೆ.

ಈ ಪರ್ಯಾಯ ‘ಸುಳ್ಳು ವಾಸ್ತವ’ದ ಸಮಸ್ಯೆಯೆಂದರೆ ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರನ್ನು ಸೇರಿದಂತೆ ನಮ್ಮ ರಾಜಕೀಯ ಇತರ ಧುರೀಣರ ಬಗ್ಗೆ ಕಲ್ಪಿತ ಸಂಗತಿಗಳನ್ನು ಸೃಷ್ಟಿಸಿ ಅವರ ವಿರುದ್ಧ ಜನರಲ್ಲಿ ಹಗೆತನ ಅಥವಾ ದ್ವೇಷವನ್ನು ಉತ್ತೇಜಿಸುತ್ತಿರುವುದಲ್ಲದೆ, ಜನರಲ್ಲಿ ಅವೈಜ್ಞಾನಿಕತೆಯನ್ನು ಮೂಢಸ್‍ನಂಬಿಕೆ ಮತ್ತು ಅಜ್ಞಾನದ ಅಧಾರಗಳ ಮೇಲೆ ಸೃಷ್ಟಿಸಲಾಗುತ್ತಿದೆ. ಹೌದು, ಒಮ್ಮೆ ಜನರಲ್ಲಿ ಈ ರೀತಿಯ ಅವೈಜ್ಞಾನಿಕತೆ ಬೆಳೆದರೆ ಅಸತ್ಯ ಮತ್ತು ವಿವೇಚನಾರಹಿತ ಮಾಹಿತಿಗಳನ್ನು ಜನರ ತಲೆಗಳಿಗೆ ತುಂಬುವುದು ಸುಲಭವಾಗಿಬಿಡುತ್ತದೆ.

ನಮ್ಮನ್ನು ಬುದ್ಧಿಹೀನರಾಗಿಸುವ ಈ ವ್ಯವಸ್ಥಿತ ಹುನ್ನಾರ, ವಿಚಾರವಾದಿಗಳನ್ನು ಮತ್ತು ಬುದ್ಧಿಜೀವಿಗಳನ್ನು ಕೊಲೆ ಮಾಡಿ ಬಾಯಿ ಮುಚ್ಚಿಸುವ ಮಟ್ಟಕ್ಕೂ ತಲುಪಿದೆ. ಮೂರು ಪ್ರಸಿದ್ಧ ವಿಚಾರವಾದಿಗಳ ಉದ್ದೇಶಿತ ಹತ್ಯೆಗಳನ್ನು ನೆನಪಿಸಿಕೊಳ್ಳಿ- ಆಗಸ್ಟ್ 2013 ರಲ್ಲಿ ನರೇಂದ್ರ ಧಬೊಲ್ಕರ್, 2015ರ ಫೆಬ್ರವರಿಯಲ್ಲಿ ಗೋವಿಂದ್ ಪನ್ಸಾರೆ ಮತ್ತು ಆಗಸ್ಟ್ 2015ರಲ್ಲಿ ಎಂ. ಕಲ್ಬುರ್ಗಿ ಮತ್ತು ಗೌರಿ ಲಂಕೇಶ್ ಅವರ ಹತ್ಯೆ. ಅಷ್ಟು ಮಾತ್ರವಲ್ಲ ಇವರ ಹತ್ಯೆಯನ್ನು ಭಕ್ತಗಣಗಳು ಸಂಭ್ರಮಿಸಿ ತಮ್ಮ ವಿಕೃತಿ ಮನಸ್ಥಿತಿಯನ್ನು ಸಹ ತೋರ್ಪಸಿದರು.

ವಾಟ್ಸಾಪ್‍ನ ‘ಸತ್ಯಗಳ’ ಕೆಲವು ಅತ್ಯತ್ತಮ ಉದಾಹರಣೆಗಳೆಂದರೆ, ಪಂಡಿತ್ ನೆಹರು ವಾಸ್ತವವಾಗಿ ಒಬ್ಬ ಮುಸ್ಲಿಂ, ಅವರು ಮೋತಿಲಾಲ್ ನೆಹರೂ ಹಾಗೂ ಮುಸ್ಲಿಂ ಮಹಿಳೆಯ ಅನೈತಿಕ ಸಂಬಂಧಕ್ಕೆ ಹುಟ್ಟಿದ ಮಗ, ಭಾರತದ ವಿಭಜನೆಗೆ ಪ್ರಮುಖ ಕಾರಣಕರ್ತ, ನಾಥೂರಾಮ್ ಗೋಡ್ಸೆ ಮಹತ್ಮಾ ಗಾಂಧಿಯಷ್ಟೇ ರಾಷ್ಟ್ರೀಯತಾವಾದಿ ಮತ್ತು ದೊಡ್ಡ ದೇಶಭಕ್ತ ಹೀಗೆ ಸಾವಿರಾರು ಸುಳ್ಳುಗಳನ್ನು ಸಾವಿರಾರು ಸಲ ಹೇಳಿ ಹರಡಿ ನಂಬಿಸಲಾಗುತ್ತಿದೆ.

ಪ್ರತಿಯೊಬ್ಬರು ತಾವು ಇಷ್ಟಪಡುವುದನ್ನು ನಂಬಲು ಸ್ವತಂತ್ರರಾಗಿದ್ದರೂ, ಆ ನಂಬಿಕೆಗಳು ಪುರಾವೆ ಮತ್ತು ಸತ್ಯಸಂಗತಿಗಳನ್ನು ಆಧಾರಿಸಿರಬೇಕು, ಮತ್ತು ಐತಿಹಾಸಿಕ ಸಂಗತಿಗಳನ್ನು ಆಧಾರಿಸಿಕೊಂಡಿರಬೇಕು. ಈ ‘ಪರ್ಯಾಯ ವಾಸ್ತವ’ ಸಮುದಾಯಗಳ ನಡುವೆ ಕಂದಕಗಳನ್ನು ಮತ್ತು ಅಪಾಯಕಾರಿ ಒಡಕನ್ನು ಸೃಷ್ಟಿಸುತ್ತಿವೆ, ಇವು ಸಮುದಾಯಗಳ ನಡುವೆ ಹಗೆತನ ಮತ್ತು ಹಿಂಸೆಯನ್ನು ತೀವ್ರಗೊಳಿಸುತ್ತಿವೆ. ನಮ್ಮ ಸಮಾಜದಲ್ಲಿ ಎಷ್ಟು ಬಿರುಕು ಸೃಷ್ಟಿಯಾಗಿದೆ ಎಂದರೆ ಅದು ಕೇವಲ ಬಹುಸಂಖ್ಯಾ ಮತ್ತು ಅಲ್ಪಸಂಖ್ಯಾ ಆಧಾರಿಸಿದ ಸಾಮಾಜಿಕ ಧ್ರುವೀಕರಣ ಮಾತ್ರವಲ್ಲ; ಕುಟುಂಬ ಮತ್ತು ಸ್ನೇಹಿತರ ನಡನಡುವೆಯೂ ಒಡಕುಗಳು ತೀವ್ರಗೊಳ್ಳುತ್ತಿವೆ.

ಹೌದು, ಕೋವಿಡ್ ಈ ‘ಪರ್ಯಾಯ ವಾಸ್ತವ’ದ ಖಾಲಿತನವನ್ನು ಬಹಿರಂಗಪಡಿಸಿದೆ. ಮೋದಿ ಮತ್ತು ಟ್ರಂಪ್‍ರ ಮಾಧ್ಯಮ ಸೃಷ್ಟಿಯ ಅಂದರೆ ಎಚ್ಚರಿಕೆಯಿಂದ ಸೃಷ್ಟಿಸಿದ ‘ವ್ಯಕ್ತಿಚಿತ್ರಣ’ ಚೂರುಚೂರಾಗಿದೆ. ಇವರಿಬ್ಬರ ಅಸಮರ್ಥತೆಯು ಬಟ್ಟ ಬಯಲಾಗಿದೆ. ಕೋವಿಡ್‍ನ್ನು ನಿಯಂತ್ರಿಸುವಲ್ಲಿ ವಿಫಲನಾದ ಟ್ರಂಪ್ ಲಕ್ಷಾಂತರ ಜನರ ಸಾವಿಗೆ ಕಾರಣನಾಗಿದ್ದಾನೆ. ಈ ಕಡೆ, ಕೋವಿಡ್ ಸಂದರ್ಭದಲ್ಲಿ ವಲಸೆ ಕಾರ್ಮಿಕರನ್ನು ನಡೆಸಿಕೊಂಡ ರೀತಿ ಮೋದಿಯ ಅಸಮರ್ಥತೆಯನ್ನು ತೆರೆದಿಟ್ಟಿದೆ. ಹೌದು, ಅಮಿತ್ ಮಾಳವಿಯಾ ಮತ್ತು ಅವರ ತಂಡ ‘ಪರ್ಯಾಯ ವಾಸ್ತವ’ವನ್ನು ಎಷ್ಟೇ ಹರಡಿದರೂ, ವಾಸ್ತವವನ್ನು ಬದಲಿಸಲಾಗುವುದಿಲ್ಲ ಎಂಬ ಸತ್ಯ ಅವರಿಗೆ ತಿಳಿಸಬೇಕಾಗಿದೆ.

***********************


No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...