- ಡೇವಿಡ್ ಕುಮಾರ್. ಎ
ಜಠರ, ಮೂತ್ರಪಿಂಡ, ಪಿತ್ತಜನಕಾಂಗ
ಗುಂಬಿಸಿಬಿಡಿ ಮದ್ಯದ ಅಮಲ
ಹೆಚ್ಚಲಿ ರಾಜ್ಯದ ಭೋಗ ಖಜಾನೆ!
ವ್ಯವಸ್ಥೆಯ ಬಲಿಪಶುಗಳು
ಜಾತಿಯಲಿ ಕೀಳು, ವರ್ಗದಲಿ ಕಡೆ,
ಮದ್ಯವೆಂಬ ಮಿಥ್ಯೆ, ಭ್ರಮೆಯಲಿ,
ಬಾಳ ಕಳೆದವರು, ಕುಡುಕರೆಂಬ ಬಿರುದು!
‘ಕರಿನಾಯಿ’, ‘ಮಿಂಚುಳ್ಳಿ’
‘ಹಳೆ ಮುದುಕ’
ಕೇಳಾ...
ಆರ್ಥಿಕ ಯಂತ್ರ-ಗಾಲಿಯ ತೈಲವೇ ನಾವು
ನಮ್ಮ ಪ್ರಾಣದ ಫಲಾನುಭವಿಗಳಾರು?
ಮಾರುವವರ ಮಾರಿಹಬ್ಬದಲಿ
ಮಾರಿಕೊಂಡವರು ನಾವು
ಬಲಿಕೋಣದಷ್ಟೇ ಅಮಾಯಕರು
ಬಿದಿರು ಬಸ್ಸಿನ ಪ್ರಯಾಣಿಕರು!
No comments:
Post a Comment