Tuesday, 12 June 2018

ಸುದ್ದಿ, ಚೂರು ಪಾರು ಸುದ್ದಿ




ಕೇರಳದ ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ದಲಿತ ಕ್ರೈಸ್ತನ ಮರ್ಯಾದಾ ಹತ್ಯೆ ಪ್ರಕರಣ
ಕೆವಿನ್ ಜೋಸೆಫ್ (೨೪) ಅವರ ಮರ್ಯಾದಾ ಹತ್ಯೆ ಪ್ರಕರಣವು ಈಚೆಗೆ ಕೇರಳದ ನಿಯಮಸಭಾ ಮಂದಿರದಲ್ಲಿ (ವಿಧಾನ ಸಭೆಯಲ್ಲಿ) ಪ್ರತಿಧ್ವನಿಸಿದೆ. ಕೊಟ್ಡಾಯಂ ಜಿಲ್ಲೆಯಲ್ಲಿ ಕೆವಿನ್ ಜೋಸೆಫ್ ಅವರನ್ನು ಅವನ ಹೆಂಡತಿಯ ಸಂಬಂಧಿಗಳು ಹಿಂಸಿಸಿ ಸಾಯಿಸಿದ್ದಾರೆ ಎಂದು ಜೋಸೆಫ್ ಕುಟುಂಬದವರು ಆರೋಪಿಸಿದ್ದರು. ಮರಣೋತ್ತರ ಪರೀಕ್ಷೆಯು ಜೋಸೆಫ್ ದೈಹಿಕ ಹಿಂಸೆಯ ಕಾರಣ ಅಸುನೀಗಿದ್ದಾರೆ ಎಂದು ತಿಳಿಸಿದ ಹಿನ್ನೆಲೆಯಲ್ಲಿ, ವಿರೋಧ ಪಕ್ಷಗಳು, ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಿಸಿ ವಿಧಾನಸಭೆಯಲ್ಲಿ ಪ್ರತಿಭಟನೆ ನಡೆಸಿದರು. ಕಳೆದ ತಿಂಗಳು ಮೇ ೨೮ ರಂದು, ಪೋಲಿಸರು ಕೇವಿನ್ ಜೋಸೆಫ್ ಎಂಬ ಯುವಕನ ಶವವನ್ನು ಜಲಮೂಲವೊಂದರಿಂದ ಹೊರಗೆ ತೆಗೆದಿದ್ದರು. ದಲಿತ ವರ್ಗಕ್ಕೆ ಸೇರಿದ ಕೆವಿನ್ ವರ್ಗೀಸ್, ಸವರ್ಣೀಯ ಕ್ರೈಸ್ತ ಕುಟುಂಬಕ್ಕೆ ಸೇರಿದ್ದ ನೀನು ಚಾಕೋ (೨೦) ಎಂಬವಳನ್ನು ವಿವಾಹವಾಗಿದ್ದ. ವಿವಾಹಕ್ಕೆ ನೀನು ಅವರ ಕುಟುಂಬದವರು ಆಕ್ಷೇಪ ವ್ಯಕ್ತಪಡಿಸಿದ್ದರು. ಪೋಲಿಸರು ಪ್ರಕರಣಕ್ಕೆ ಸಂಬಂಧಿಸಿದಂತೆ, ನೀನುಳ ತಂದೆ, ಸಹೋದರ ಹಾಗೂ ಎಂಟು ಜನ ಬಾಡಿಗೆ ಬಂಟರನ್ನು ಬಂಧಿಸಿದ್ದಾರೆ. ಬಾಡಿಗೆ ಬಂಟರು, ಕೇವಿನ್ ಜೋಸೆಫ್ ಅಪಹರಣ ಮತ್ತು ಹತ್ಯೆಗೆ ಸುಪಾರಿ ಪಡೆದಿದ್ದರು ಎಂದು ಶಂಕಿಸಲಾಗಿದೆ.

ಕಂಧಮಲ್ ಅಮಾಯಕರ ಬಂಧನ - ನ್ಯಾಯಾಂಗದ ಲೋಪ: ಸಿರಿಯಾಕ್ ಜೋಸೆಫ್ಒಡಿಶಾದ ಕಂದಮಲ್ ಕಂದಮಲ್ ಗಲಭೆಯ ಪ್ರಕರಣದಲ್ಲಿ ಅಮಯಾಕರನ್ನು ಸುದೀರ್ಘ ಅವಧಿಯ ಕಾಲ ಬಂಧನದಲ್ಲಿರಿಸುವ ಕ್ರಮ ನ್ಯಾಯಾಂಗ ವ್ಯವಸ್ಥೆಯಲ್ಲಿನ ಲೋಪ ಎಂದು ನಿವೃತ್ತ ನ್ಯಾಯಮೂರ್ತಿ ಸಿರಿಯಾಕ್ ಜೋಸೆಫ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು, ಈಚೆಗೆ ಇಲ್ಲಿ ಖ್ಯಾತ ತನಿಖಾ ವರದಿ ಪತ್ರಕರ್ತ ಅಂಟೊ ಅಕ್ಕರ ಅವರ, ‘ಹೂ ಕಿಲ್ಡ್ ಸ್ವಾಮಿ ಲಕ್ಷ್ಮಣಾನಂದಹೆಸರಿನ ಇಂಗ್ಲಿಷ್ ಹೊತ್ತಿಗೆಯ ಸಂಕ್ಷಿಪ್ತ ಮಲೆಯಾಳಿ ಭಾಷೆಯ ಅನುವಾದದನಿರಪರಾಧಿಗಳ್ ತಡವರಾಯಲ್’ (ಅಮಾಯಕರ ಬಂಧನ) ಹೊತ್ತಿಗೆಯ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪುಸ್ತಕದಲ್ಲಿ, ಹೊತ್ತಿಗೆಯ ಲೇಖಕರು ಹಲವಾರು ಸಂಗತಿಗಳನ್ನು ಬಯಲಿಗೆ ಎಳೆದಿದ್ದಾರೆ. ಅಮಾಯಕ, ಅನಕ್ಷರಸ್ಥ ಮಾನಸಿಕ ಅಸ್ವಸ್ಥನನ್ನು ಪ್ರಕರಣದಲ್ಲಿ ಜೈಲಿಗೆ ಸೇರಿಸಲಾಗಿದೆ. ಹೊತ್ತಿಗೆಯು ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿನ ದೋಷಗಳನ್ನು ಬಿಡಿಬಿಡಿಯಾಗಿ ಬಿಡಿಸಿ ಹೇಳಿದೆಎಂದು ಅವರು ಹೇಳಿದರು. ರಾಷ್ಟ್ರೀಯ ಮಾನ ಹಕ್ಕು ಆಯೋಗವೂ, ಕಂಧಮಲ್ ಪ್ರಕರಣದ ನಿರಪರಾಧಿಗಳಿಗೆ ನ್ಯಾಯ ಒದಗಿಸುವಲ್ಲಿ ವಿಫಲವಾಗಿರುವುದನ್ನು ಸಕಾರಣಗಳೊಂದಿಗೆ ಹೊತ್ತಿಗೆಯಲ್ಲಿ ದಾಖಲಿಸಲಾಗಿದೆಎಂದು ಅವರು ಲೇಖಕರ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಳೆದ ೨೦೦೮ರಲ್ಲಿ ನಡೆದ ಸ್ವಾಮಿ ಲಕ್ಷ್ಮಣಾನಂದ ಅವರ ಕೊಲೆಯು ಏಳು ವಾರಗಳ ಕಾಲ ಒಡಿಶಾದ ಕಂಧಮಲ್ ಜಿಲ್ಲೆಯಲ್ಲಿ ಕ್ರೈಸ್ತರ ಮೇಲೆ ದೊಂಬಿ ನಡೆಸಲು ಕಾರಣವಾಗಿರುವುದು ಈಗ ಇತಿಹಾಸದ ಪುಟ ಸೇರಿದೆ. ಏಳು ವಾರಗಳಲ್ಲಿ ನಡೆದ ದೊಂಬಿ ಹಿಂಸಾಚಾರಗಳಲ್ಲಿ ೧೦೦ ಜನ ಕ್ರೈಸ್ತರು ಸಾವಿಗೀಡಾಗಿದರು. ೩೦೦ ಚರ್ಚುಗಳನ್ನು ೬೦೦೦ ಕ್ರೈಸ್ತರ ಮನೆಗಳನ್ನು ಧ್ವಂಸಗೊಳಿಸಲಾಯಿತು. ೫೬, ೦೦೦ ಜನ ಮನೆಮಠಗಳನ್ನು ಕಳೆದುಕೊಂಡಿದ್ದರು.

ಕ್ರೈಸ್ತರ ಆಕ್ರೋಶಕ್ಕೆ ಕಾರಣವಾದ ಓಂ ಸ್ವಾಮಿ ಮಹಾರಾಜ್ ಹೇಳಿಕೆ
ಕ್ರೈಸ್ತರನ್ನು ಭಾರತದಿಂದ ಓಡಿಸಿ ಎಂದು ಒತ್ತಾಯಸಿರುವ ಕಟ್ಟಾ ಹಿಂದುತ್ವವಾದಿ ಓಂ ಸ್ವಾಮಿ ಮಹಾರಾಜ್ ಎಂಬುವವರು, ಕಥೋಲಿಕ ಕ್ರೈಸ್ತ ಪಂಗಡದ ಪರಮೋಚ್ಚ ಜಗದ್ಗುರು ಪೋಪ್ ಫ್ರಾನ್ಸಿಸ್ ಭಯೋತ್ಪಾದನೆಯನ್ನು ಬೆಂಬಲಿಸುತ್ತಾರೆಂದು ದೂರಿ ಅವರ ಚಿತ್ರವಿರುವ ಪಟವನ್ನು ತುಳಿದು ಅವಮಾನಪಡಿಸಿದ ಘಟನೆ ಈಚೆಗೆ ನಡೆದಿದ್ದು ಆಕ್ರೋಶಕ್ಕೆ ಕಾರಣವಾಗಿದೆ.
ಸಂಬಂಧದ ವಿಡಿಯೋ ಕಳೆದ ತಿಂಗಳು ಮೇ ೨೫ ರಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದರಲ್ಲಿ ಕಟ್ಟಾ ಹಿಂದುತ್ವವಾದಿ ಆಗಿರುವ ಓಂ ಸ್ವಾಮಿ ಮಹಾರಾಜ, ನವದೆಹಲಿಯ ಸೆಕ್ರೆಡ್ ಹಾರ್ಟ್ ಕೆಥಿಡ್ರಲ್ ಆಸುಪಾಸಿನಲ್ಲಿಯೇ ತನ್ನ ಸುಮಾರು ಇಪ್ಪತ್ತು ಜನ ಬೆಂಬಲಿಗರೊಂದಿಗೆ ಪೋಪ್ ಫ್ರಾನ್ಸಿಸ್ ಅವರ ಚಿತ್ರಪಟಗಳನ್ನು ಹಿಡಿದು ಮೆರವಣಿಗೆ ನಡೆಸಿ ಬಾಷಣ ಮಾಡಿರುವುದು ಕಂಡುಬಂದಿದೆ.
ಭಾಷಣದಲ್ಲಿ ವಿವಾದಿತ ಸ್ವಾಮಿ, ಭಾರತದಲ್ಲಿನ ಕ್ರೈಸ್ತರು ಮಾವೋವಾದಿಗಳನ್ನು ಮತ್ತು ಭಯೋತ್ಪಾದಕರನ್ನು ಬೆಂಬಲಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಕ್ರೈಸ್ತರು ದೇಶಬಿಟ್ಟು ತೊಲಗಬೇಕು, ಇಲ್ಲದಿದ್ದರೆ ಅವರನ್ನು ಹೊರಹಾಕಲಾಗುವುದು ಎಂಬ ಅವರ ಮಾತುಗಳು ತೀವ್ರ ಆಕ್ಷೇಪಣೆಗಳಿಗೆ ಕಾರಣವಾಗಿದೆ. ಮಧ್ಯಪ್ರದೇಶದಲ್ಲಿ ಕ್ರೈಸ್ತ ಸಂಘಟನೆ ರಾಷ್ಟ್ರೀಯ ಇಸಾಯಿ ಮಹಾಸಂಘವು, ಪ್ರಕರಣದತ್ತ ಕೇಂದ್ರ ಸರ್ಕಾರದ ಗಮನ ಸೆಳೆದು, ವಿಡಿಯೋದ ಪ್ರಸಾರಕ್ಕೆ ತಡೆಯೊಡ್ಡಬೇಕೆಂದು ಆಗ್ರಹಿಸಿದೆ.


No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...