Tuesday, 12 June 2018

ಗೊಂದಲಗೊಳಿಸು ಪ್ರಭುವೇ ಗೊಂದಲಗೊಳಿಸು. .



ಗೊಂದಲಗೊಳಿಸು ಪ್ರಭುವೇ ಗೊಂದಲಗೊಳಿಸು. .
ನನ್ನಲೇ ನಾನು
ಅಲ್ಪಕ್ಕೆ ತೃಪ್ತಿಗೊಂಡು ನಿಷ್ಕ್ರಿಯನಾದಾಗ
ಗೊಂದಲಗೊಳಿಸು ಪ್ರಭುವೇ ನನ್ನನ್ನು ಗೊಂದಲಗೊಳಿಸು. .
ಅಲ್ಪಸ್ವಲ್ಪ ಕನಸುಗಳ
ನನಸಾಗಿಸಿ ಆರಾಮನಾದಾಗ
ಗೊಂದಲಗೊಳಿಸು ಪ್ರಭುವೇ ಗೊಂದಲಗೊಳಿಸು. .
ದಡದ ಕಣ್ಣಿಗೆ ಕಾಣುವಷ್ಟು ದೂರ
ಪ್ರಯಾಣಿಸಿ
ಗುರಿಯದಡಕ್ಕೆ ಸುರಕ್ಷಿತವಾಗಿ ಮರಳಿ ಹಿಗ್ಗಿದಾಗ
ಗೊಂದಲಗೊಳಿಸು ಪ್ರಭುವೇ ನನ್ನನ್ನು ಗೊಂದಲಗೊಳಿಸು. .
------------------------ 


ಬುದ್ಧ ಹೇಳಿದ, . .
ಆಸೆಗಳಿಗೆ ತಳವಿಲ್ಲದಂತಾಗಲಿ
ನಿನ್ನ ಬದುಕಿನ ಪಾತ್ರೆ…
ಕಾಣುವುದು ಆಗ ಬದುಕು
ವಿಮೋಚನೆಯ ಸವಿನಿದ್ರೆ

ಇನ್ನೊಬ್ಬ ಗುರು ಹೇಳಿದ, . .
ಅಜ್ಞಾನದ ಕೋಣೆಯ ಬಿಟ್ಟು
ಜ್ಞಾನ ಕೋಣೆಯ ಕಡೆಗೆ ಗುರಿಯಿಟ್ಟು
ನಡೆದು ಸೇರುವುದೇ ವಿಮೋಚನೆಯ ಗುಟ್ಟು.

ವಿಮೋಚನೆಯ ಪ್ರತಿಪಾದಕ
ದೈವಶಾಸ್ತ್ರಜ್ಞ ಹೇಳಿದ. .
ಅಸಮಾನತೆ, ಶೋಷಣೆ ಜಗತ್ತು
ಕೊನೆಗೊಂಡು ಹೂಸ ಜಗತ್ತು ಸೃಷ್ಟಿಗೊಂಡು
ದೇವರಾಜ್ಯದ
ಪ್ರತಿಬಿಂಬವಾಗುವುದೇ ವಿಮೋಚನೆಯ ಒಗ್ಗಟ್ಟು.

ನಾನು ನನ್ನನೇ ಕೇಳಿದೆ…
ವಿಮೋಚನೆಂಬುವುದು….
ದೂರದ ಮಾತಲ್ಲ. . ತಲುಪುವ ಸ್ಥಳವಲ್ಲ
ಅದು ಪ್ರತಿಕ್ಷಣದ ಗೆಲುವು. .
ಕ್ಷಣ ಹೆಜ್ಜೆಯ ಒಲವು…
ಕೆಟ್ಟತನ ಬಳಲಿ ಸೋತು ತನ್ನಲ್ಲಿ
ಒಳ್ಳೆತನ ಗೆಲ್ಲುವುದೇ ವಿಮೋಚನೆ



¨ ಜೀವಸೆಲೆ


No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...