ಬಿಡಿಸ ಬನ್ನಿ ರಂಗವಲ್ಲಿ
ಹೊಸ ವರುಷದ ಹೊಸ್ತಿಲಲ್ಲಿ
ಹಚ್ಚ ಬನ್ನಿ ಭಾವ ಬಣ್ಣ
ಸಾಲು ಚುಕ್ಕಿ ನಡುವೆ ಹೊಕ್ಕಿ
ಮನುಜರೆಲ್ಲಾ ಚುಕ್ಕಿಗಳೇ
ಎಳೆಯ ಬನ್ನಿ ಗೆರೆಗಳ
ಹೃದಯದಿಂದ ಹೃದಯಕೆ
ಭಾವದಿಂದ ಭಾವಕೆ !
ಕೆಂಪು ಚುಕ್ಕಿ, ನೀಲಿ ಚುಕ್ಕಿ
ಹಸಿರು ಚುಕ್ಕಿ, ಹಳದಿ ಚುಕ್ಕಿ
ಇರಲಿ ಬಿಡಿ ಕಪ್ಪು ಚುಕ್ಕಿ !
ಮನೆಗಳಲ್ಲೂ ಮನಗಳಲ್ಲೂ
ಕನಸು ಕಣ್ಣ ರೆಪ್ಪೆಯಲ್ಲೂ
ಒಲುಮೆ ನಭದ ಎಲ್ಲೆಯಲ್ಲೂ
ಮೂಡಿ ಬರಲಿ ಬೆಳ್ಳಿ ಚುಕ್ಕಿ
ಬದುಕು ಎಂಬ ರಂಗವಲ್ಲಿ
ಮೂರರಿಂದ ಆರು ಚುಕ್ಕಿ
ಆರರಿಂದ ಮೂರು ಚುಕ್ಕಿ
ಜೀವವೆಂಬ ಮಾಯಾ ಹಕ್ಕಿ !
- ಎ. ಡೇವಿಡ್ಕುಮಾರ್
No comments:
Post a Comment