ಮಾನವನ ಭಾವನೆಗಳ ಅಭಿವ್ಯಕ್ತ ವು ಪದಗಳ ಮೂಲಕ ಹೊರಬಂದು ಭಾಷೆಯಾಗಿ ಸಂವಹನ ಕ್ರಿಯೆಗೆ ಪುಷ್ಟಿ ನೀಡುತ್ತದೆ. ಪದ ಬಳಕೆಯು ಭಾಷೆ ಬೆಳೆದಂತೆ ತನ್ನ ರೂಪವನ್ನು ಬದಲಾಯಿಸಿಕೊಳ್ಳುತ್ತದೆ. ಈಗ ನಾವು ಬಳಸುತ್ತಿರುವ ಪದಗಳು ಇನ್ನು ಹತ್ತು ವರ್ಷದ ನಂತರ ಬಳಕೆ ಇಲ್ಲದೆ ಇರಬಹುದು ಅಥವಾ ಬದಲಾಗಬಹುದು. ಹೀಗೆ ಪದ ಬಳಕೆಯು ನಮ್ಮ ಧರ್ಮ ಸಭೆಯಲ್ಲಿ ಇದೆ. ನಾವು ಧಾರ್ಮಿಕ ಚೌಕಟ್ಟಿನಲ್ಲಿ ಬಳಸುವ ಪದಗಳು ಸಹ ಬದಲಾಗಿವೆ ಹೊಸ ರೂಪಗಳನ್ನು ಪಡೆದಿವೆ. ಆ ಪದಗಳ ಬಗ್ಗೆ ಗಮನ ಹರಿಸುವ ಈ ಸಣ್ಣ ಹೊತ್ತಿಗೆ ಪದ ಪುಂಕ.
ನಾವು ನಮ್ಮ ಊರಿನ ದೇವಾಲಯವನ್ನು ವಿಚಾರಣೆ ಎಂದು ನಮ್ಮ ಚರ್ಚಿನ ಗುರುಗಳನ್ನು ವಿಚಾರಣೆ ಗುರು ಎಂದು ಕರೆಯುತ್ತೇವೆ. ನಮ್ಮ ಚರ್ಚ್ ಅಥವಾ ದೇವಾಲಯ ಯಾವುದೇ ವಿಚಾರಣೆ ಕೇಂದ್ರವಲ್ಲ ಇದೊಂದು ಧಾರ್ಮಿಕ ಪುಣ್ಯ ಕ್ಷೇತ್ರ ಇದನ್ನು ಧರ್ಮ ಕೇಂದ್ರ ಎಂದು ಕರೆಯುವುದು ಸೂಕ್ತ. ಪ್ರತಿ ಒಬ್ಬ ಗುರು ಇನ್ನೊಬ್ಬ ಕ್ರಿಸ್ತ. ಆತ ಯಾವುದೇ ವಿಚಾರಣೆಗೆ ಅಥವಾ ನ್ಯಾಯಾಧಿಪತಿಯ ಸ್ಥಾನಕೆ ನಿಲ್ಲಿಸುವುದು ಸೂಕ್ತವಲ್ಲ. ವಿಚಾರಣೆ ಗುರು ಎನ್ನುವುದು ಎಷ್ಟು ಸೂಕ್ತ? ಆತ ಧರ್ಮಕೇಂದ್ರದ ಗುರು ಇದು ನಮ್ಮ ದೈನಂದಿನ ಬಳಕೆಯಲ್ಲಿ ಬಳಸುವುದು ಕಷ್ಟವಾದರೆ ಚರ್ಚ್ ಗುರು ಅಥವಾ ನಮ್ಮ ಚರ್ಚ್ ಫಾದರ್ ಆಗಬಹುದು.
ನಮ್ಮ ಧರ್ಮ ಕೇಂದ್ರಗಳಲ್ಲಿ ಅಥವಾ ಧರ್ಮಕ್ಷೇತ್ರಗಳಲ್ಲಿ ಕಿರು ಕ್ರೈಸ್ತ ಸಮುದಾಯ ಗಳಿವೆ. ಅದಕ್ಕೆ ಒಂದೊಂದು ಸಂತರ ಅಥವಾ ಸಾಮಾನ್ಯ ಹೆಸರುಗಳನ್ನು ಇಡಲಾಗುತ್ತದೆ. ಉದಾಹರಣೆ: ಸಂತ ಜೋಸೆಫರ ವಿಭಾಗ. ಈ ಕಿರು ಕ್ರೈಸ್ತ ಸಮುದಾಯದ ಸಮುದಾಯವನ್ನು ವಿಭಾಗ ಎಂದು ಕರೆಯುವುದು ಎಷ್ಟು ಸೂಕ್ತ? ವಿಭಾಗ ಎಂದರೆ ವಿಭಾಗಿಸುತ್ತದೆ ಸಮುದಾಯದ ಕಲ್ಪನೆ ಪರಿಕಲ್ಪನೆ ಈ ಪದದಲ್ಲಿ ಇದೆಯೇ? ವಿಭಾಗದ ಬದಲು ಸಮುದಾಯ ಎಂದು ಕರೆದರೆ ಹೆಚ್ಚು ಅರ್ಥಗರ್ಭಿತ. ಸಮುದಾಯ ಎನ್ನುವುದು ಐಕ್ಯತೆಯನ್ನು ಒಗ್ಗಟ್ಟನ್ನು ತೋರಿಸುತ್ತದೆ. ಹೀಗೆ ಇನ್ನಿತರ ಪದಗಳನ್ನು ಒತ್ತು ನಿಮ್ಮ ಮುಂದೆ ತರುತ್ತೇವೆ.
1. ವಿಚಾರಣೆ- ಧರ್ಮ ಕೇಂದ್ರ.
2. ವಿಚಾರಣೆ ಗುರು- ಧರ್ಮಕೇಂದ್ರದ ಗುರು.
3. ವಿಭಾಗ-ಸಮುದಾಯ
-ಸಹೋ.ವಿನಯ್ ಕುಮಾರ್
No comments:
Post a Comment