ಕಳೆದಿಹವು ಅದೆಷ್ಟೋ ವರುಷಗಳು ಬಾಳಲಿ
ನೆನ್ನೆಯ ನೆನಪುಗಳೆಲ್ಲ ಮಾಸದೆ
ಕೆದರುತಿವೆ ಆಡಂಭರದ ಆಟಿಕೆಗಳು
ಎಣ್ಣೆ ಸಾರಾಯಿ ನೆಪದಲಿ
ಹಸಿರು ಇರದ ನಿಸರ್ಗದಲಿ.
ಅದೊಂದು ಯುಗಾದಿಯು
ಎಲೆಗಳೆಲ್ಲ ಚಿಗುರೊಡೆದು
ಪರಿಸರಕ್ಕೊಮ್ಮೆ ಮರುಜನ್ಮ ತುಂಬಿ
ತಂದೆ ತರುವುದೊಮ್ಮೆ ಬಾಳಲಿ
ಹೊಸ ವರುಷದ ಆಗಮನದಲಿ
ಕಣ್ಣ ತಂಪು ಮಾಡಲು
ಹಚ್ಚ ಹಸಿರು ಕಾಣಲು.
ವರುಷ ಬದಲಾದೊಡೇನು
ಹರುಷ ಬದಲಾದಿತೇನು
ಮನದೊಳಿರುವ ಕಸವ ಬಳಿದರೊಮ್ಮೆ ಅಂದು
ಹೊಸ ವರುಷ ಬಂದಿತೊಮ್ಮೆ ಬಾಳಲಿ
ದಿನವು ಬದಲಾದೊಡೇನು ಮನವು ಬದಲಾದಿತೇನು
ಜಗವ ಜಯಿಸುವ ಗುರಿಯಿಟ್ಟೊಡನೆ
ಕನಸ ನನಸಾದೊಡನೆ
ಹೊಸ ವರುಷ ಬಂದಿತೊಮ್ಮೆ
ನಗುತಲಿ.
ಆಚರಣೆಯೇಕೆ ಹೊಸ ವರುಷಕೆ
ಅಗಲಿಕೆಯೇಕೆ ಹಳೆ ವರುಷಕೆ
ಮುಗಿದಿಲ್ಲ ಹಳೆ ವರುಷದ
ಸಂಬಂಧಗಳು
ಕಳೆದಿಲ್ಲ ಇನ್ನು ಕನವರಿಕೆಯ ನೆನಪುಗಳು
ಬದುಕಿನುದ್ದಕ್ಕೂ ಹೊಸ ವರುಷವೇ
ನೀನು ಬದಲಾದೊಡೆ ನಿನ್ನತನ ಬದಲಾದೊಡೆ.
- ಜಿ. ಶಿವಮೂರ್ತಿ, ಕೆ.ಗುಡದಿನ್ನಿ
No comments:
Post a Comment