Saturday, 12 January 2019

ತನ್ನ ಪವಾಡಗಳಿಂದ ದೇಶ ವಿದೇಶಗಳ ಸಾವಿರಾರು ಭಕ್ತರನ್ನು ಹೊಂದಿದ್ದ ಸ್ವಾಮೀಜಿಯ ಆಸ್ಥಾನವದು. ಭಕ್ತರು ಒಬ್ಬೊಬ್ಬರಾಗಿ ತಮ್ಮಕಷ್ಟಗಳನ್ನುಸ್ವಾಮೀಜಿ ಬಳಿ ನಿವೇದಿಸುತ್ತಿದ್ದರು. ಸ್ವಾಮೀಜಿ ತನ್ನ ಪವಾಡದ ಮೂಲಕ ಗಾಳಿಯಿಂದ ಭಸ್ಮವನ್ನು ಸೃಷ್ಟಿಸಿ ಹಸನ್ಮುಖರಾಗಿ ಅವರಿಗೆ ಹಂಚುತ್ತಿದ್ದನು. ಭಕ್ತ ಸಮೂಹ ಅದನ್ನು ಅಷ್ಟೇ ಆದರದಿಂದ ಪಡೆದು ಧನ್ಯತೆಯ ಭಾವದಿಂದ ಹೊಂದುತ್ತಿದ್ದರು.

ಬರಗಾಲದಿಂದ ಕಂಗಾಲಾಗಿದ್ದ ರೈತನೊಬ್ಬ ಅದೇ ಸ್ವಾಮೀಜಿಯ ಬಳಿ ಬಂದು ತನ್ನ ಕಷ್ಟಗಳನ್ನೆಲ್ಲ ಹೇಳಿಕೊಂಡನು. ಸ್ವಾಮೀಜಿ ಎಂದಿನಂತೆ ಗಾಳಿಯಿಂದ ಭಸ್ಮವನ್ನು ತೆಗೆದು ಅವನಿಗೆ ಕೊಟ್ಡ. ಅದನ್ನು ತಿರಸ್ಕರಿಸಿದ ರೈತ, ‘ಬರದಿಂದ ಕಂಗಾಲಾದ ನನಗೆ ಬೇಕಾದುದು ಭಸ್ಮವಲ್ಲ ಸ್ವಾಮಿ; ಒಂದಿಷ್ಟು ಅಕ್ಕಿ ಮತ್ತು ಕಾಳುಗಳನ್ನು ತಾವು ಗಾಳಿಯಿಂದ ಸೃಷ್ಟಿಸಿ ಕೊಡಿ’ ಎಂದು ನಯವಾಗಿ ಬೇಡಿಕೆಯಿಟ್ಟ. ಸ್ವಾಮೀಜಿಯ ಮುಖದಲ್ಲಿದ್ದ ‘ಪ್ರಸನ್ನತೆ’ ಒಮ್ಮೆಲೇ ಮಾಯವಾಯ್ತು!

●●●

ಪಾದ್ರಿಯು ತನ್ನ ಧರ್ಮಕೇಂದ್ರದ ಸದಸ್ಯರ ಮನೆಗಳನ್ನು ಭೇಟಿ ಮಾಡುತ್ತಿದ್ದ ಕಾರಣ, ಭಾನುವಾರದ ಬಲಿಪೂಜೆಯ ಪ್ರಬೋಧನೆಯನ್ನು ಸಿದ್ಧಮಾಡಿಕೊಳ್ಳಲು ಆಗಲಿಲ್ಲ. ಹಾಗಾಗಿ ಅವರು ಹಿಂದಿನ ಭಾನುವಾರ ಬಲಿಪೂಜೆಗೆ ಸಿದ್ದಪಡಿಸಿದ ಪ್ರಬೋಧನೆಯನ್ನೇ ಹೇಳಿದರು. ಮತ್ತೊಂದು ವಾರವೂ ಹೀಗೆಗಿ ಅದೇ ಪ್ರಬೋಧನೆಯನ್ನು ಪುನರಾವರ್ತಿಸಿದರು. ಇದರಿಂದ ಕುಪಿತರಾದ ವಿಚಾರಣೆಯ ಸದಸ್ಯರು  ಧರ್ಮಾಧ್ಯಕ್ಷರಿಗೆಗೆ ದೂರು ಕೊಡುತ್ತಾ, "ನಮ್ಮ ಧರ್ಮಕೇಂದ್ರದ ಗುರುಗಳು ಸುಮಾರು ನಾಲ್ಕು ಭಾನುವಾರಗಳಿಂದ ಒಂದೇ ಪ್ರಬೋಧನೆಯನ್ನು ಕೊಡುತ್ತಿದ್ದಾರೆ" ಎಂದು ಹೇಳಿದರು. 
ಧರ್ಮಾಧ್ಯಕ್ಷರು ಸದಸ್ಯರಿಗೆ, “ಸ್ವಲ್ಪ ಪ್ರಬೋಧನೆಯ ಬಗ್ಗೆ ಒಂದೆರಡು ವಾಕ್ಯಗಳಲ್ಲಿ ಹೇಳಿ” ಎಂದು ಕೇಳಿದಾಗ,  ಅವರು ತಲೆಕೆರೆದುಕೊಳ್ಳಲು ಪ್ರಾರಂಭಿಸಿದರು. ಕೊನೆಗೆ ಧರ್ಮಾಧ್ಯಕ್ಷರು, "ನಿಮ್ಮ ಧರ್ಮಕೇಂದ್ರದ ಗುರುಗಳಿಗೆ ಪುನಃ ಅದೇ ಪ್ರಬೋಧನೆಯನ್ನು ಈ ಭಾನುವಾರವೂ  ಕೊಡಲು ಹೇಳಿ", ಎಂದು ಸದಸ್ಯರನ್ನು ವಾಪಸ್ಸು ಕಳುಹಿಸಿದರು.

●●●

ಸನ್ಯಾಸಿಯೊಬ್ಬ ಗುರು ಜೋಶೋಗೆ ಹೇಳಿದ,
"ಈ ಗುರುಕುಲಕ್ಕೆ ಈಗಷ್ಟೇ ನಾನು ಬಂದೆ. ನನಗೆ ವಿದ್ಯೆಯನ್ನು ನೀಡಿ",
'ಬೆಳಗಿನ ಗಂಜೆ ಕುಡಿದಾಯಿತೇ?'
"ಆಯಿತು ಗುರುಗಳೇ"
"ಹಾಗಿದ್ದರೆ ಗಂಜೆ ಕುಡಿದ ಬಟ್ಟಲನ್ನು ತೊಳೆದಿಡು..."

●●●

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...