ಬಾಡುವ ಜೀವವೊಂದು
ಕಿತ್ತು ತಿನ್ನುತ್ತಿರುವದು ಹಣ್ಣು
ಹೊಟ್ಟೆ ಬಾಡಿಗೆಯ ಕಟ್ಟಲು
ಜೀವನುದ್ದಕ್ಕೂ ಮುದುಕಿಯ
ಮನಸನ್ನು ತಿಂದ ಮಕ್ಕಳೆಷ್ಟೋ
ಅವಳ ಹಣವ ಕಸಿದವರೆಷ್ಟೋ
ಅವರವರ ಸುಖದ ಕೂಲಿಗಾಗಿ
ಒಬಂಟಿಯಾಗಿ ತಾನು
ಒಂಟಿ ಕೋಲಿನ ಜಂಟಿಯಾಗಿ
ಬದುಕ ನೂಕಲೇಬೇಕಲ್ಲವೆ
ಉಂಗುಟಿನ ಚಪ್ಪಲಿ ಸವೆಯುದರೊಳಗೆ
ಸವೆದರು ಖರೀದಿಸಿಕೊಡುವ
ಮಾಲಿಕನಿಲ್ಲ ಜೊತೆಗೆ
ಇವತ್ತೋ ನಾಳೆ ತುಕ್ಕು ಹಿಡಿಯುವ
ಬಟ್ಟೆಯ ಬಿಟ್ಟು
ಹಣ್ಣು ಸಿಗುತ್ತಿಲ್ಲ
ಎಷ್ಟೆ ಕೈ ಚಾಚಿದರು
ಹಸಿವು ನೀಗುತ್ತಿಲ್ಲ
ಎಷ್ಟೋ ಮಕ್ಕಳಿದ್ದರು
ಉದ್ದನೆಯ ಕೋಲೆ ಆಧಾರ
ಮುದಿ ಜೀವಕೆ
ಕಿತ್ತು ತಿಂದೆ ತಿನ್ನುವೇ ಹಣ್ಣನು
ಬಾಯ ದಣಿವಾರಿಸಲು
ನನಗಾದ ನೋವು ಗಿಡದ ಎಲೆಗೂ
ನಾ ನೀಡಲಾರೇನು
ನಾ ಸತ್ತಿಲ್ಲ ಮುಂದೇನೂ ಸಾಯಲ್ಲ
ಬದುಕೆ ತೀರುವೆನು
ಗಿಡ ಮರಗಳ ಅರಮನೆಯಲಿ
ಸಿಕ್ಕ ಸಿಕ್ಕ ಹಣ್ಣ ಹಂಪಲು
ತಿಂದು
ಹಸಿವಿನ ಬೇರಿಗೆ ಜೀವ ನೀಡುವೆನು
ಬಿದ್ದ ಹಣ್ಣನು ಲೆಕ್ಕಿಸದೆ
ತಿಂದು ಕಾಲ ಕಳೆವೆನು
ಮನದಾಳದ ನೋವ ಮರೆವೆನು
- ಜಿ. ಶಿವಮೂರ್ತಿ, ಕೆ.ಗುಡದಿನ್ನಿ
No comments:
Post a Comment