- ಜೋವಿ
ನಮ್ಮನ್ನು ನಾವು ಕ್ರೈಸ್ತರೆಂದು ಕರೆದುಕೊಳ್ಳುತ್ತೀವೋ ಇಲ್ಲವೋ ಗೊತ್ತಿಲ್ಲ, ಆದರೆ ಕ್ರಿಸ್ತನನ್ನು ನಾವು ಗಂಭೀರವಾಗಿ ಪರಿಗಣಿಸಿದಂತಿಲ್ಲ ಎಂಬುದನ್ನು ಮಾತ್ರ ಸ್ಪಷ್ಟವಾಗಿ ಹೇಳಬಹುದು. ಕೆಲವು ಗಮನೀಯ ಅಂಶಗಳನ್ನು ಹೊರತುಪಡಿಸಿ, ಬಹುಮಟ್ಟಿಗೆ ಕ್ರಿಸ್ತ ಹೇಳಿದ್ದÀನ್ನು ನಮ್ಮ ಜೀವನದಲ್ಲಿ ನಾವು ಪಾಲಿಸುತ್ತಿಲ್ಲ. ನಾವು ನಮ್ಮ ಶತ್ರುಗಳನ್ನ ಪ್ರೀತಿಸುವುದಾಗಲೀ, ನಮ್ಮ ಇನ್ನೊಂದು ಕೆನ್ನೆಯನ್ನು ತೋರುವುದಾಗಲೀ, ಏಳೆಪ್ಪತ್ತು ಸಲ ಕ್ಷಮಿಸುವುವುದಾಗಲೀ ಇವುಗಳನ್ನು ಪಾಲಿಸುವುದು ತುಂಬ ವಿರಳ. ನಮ್ಮ ಈ ವೈಫಲ್ಯಕ್ಕೆ ನಮ್ಮದೇ ಅದ ಸಮರ್ಥನೆಗಳಿವೆ: ನಾವು ಸಂತರಲ್ಲ, ಇಂಥÀದೊಂದು ಜೀವನ ಎಲ್ಲರಿಗೂ ಸಾಧ್ಯವಿಲ್ಲ. ಆದರ್ಶಪ್ರಾಯವಾದ ಈ ರೀತಿಯ ಜೀವನವನ್ನು ರೂಢಿಸಿಕೊಳ್ಳುವುದು ಸ್ವಲ್ಪ ಕಷ್ಟಕರವೇ ಸರಿ ಇತ್ಯಾದಿ.
ನಮ್ಮ ಈ ಕಾಲಘಟ್ಟದ ಪರಿಸ್ಥಿತಿ, ವಿದ್ಯಮಾನಗಳನ್ನು ಅವಲೋಕಿಸಿದಾಗ ನಾವು ಕ್ರಿಸ್ತನನ್ನು ಗಂಭೀರವಾಗಿ ಪರಿಗಣಿಸಬೇಕಾದ ಅನಿವಾರ್ಯತೆ ಖಂಡಿತವಾಗಿ ಮನದಟ್ಟಾಗುತ್ತದೆ. ವಾಸ್ತವವಾಗಿ ನಮ್ಮ ಕಾಲದ ವಸ್ತುಸ್ಠಿತಿಯನ್ನು ಸಹ ನಾವು ಗಂಭೀರವಾಗಿ ತೆಗೆದುಕೊಳ್ಳಬೇಕಾದ ಒತ್ತಡ ನಮ್ಮ ಮೇಲಿದೆ. ಕಾಲವು ಒಡ್ಡುತ್ತಿರುವ ಬೆದರಿಕೆ, ಸವಾಲುಗಳನ್ನು ಗಣನೆಗೆ ತೆಗೆದುಕೊಳ್ಳದೆ ನಾವು ನಮ್ಮದೇ ಕನಸಿನ ಲೋಕದಲ್ಲಿ ಜೀವಿಸುತ್ತಿದೇವೆ. ಕೆಲ ಕ್ರೈಸ್ತರಂತೂ ಇಂದಿನ ಕಾಲದ ವಸ್ತುಸ್ಥಿತಿಯನ್ನು, ಅದರಲ್ಲಿನ ಅಗುಹೋಗುಗಳನ್ನು ಗಂಭೀರವಾಗಿ ಪರಿಗಣಿಸದೆ, ಕ್ರಿಸ್ತನನ್ನು ಗಂಭೀರವಾಗಿ ಪರಿಗಣಿಸಬಹುದೆಂಬ ಮೌಢ್ಯತೆಯಲ್ಲಿ ಬದುಕುತ್ತಿದ್ದಾರೆ. ಕ್ರಿಸ್ತನ ಅಧ್ಯಾತ್ಮ ಎನ್ನುವುದು ಸಂದರ್ಭೋಚಿತವಾದುದ್ದು, ಸಮಂಜಸವಾದುದ್ದು. ಕಾಲದ ಅಳದಲ್ಲಿ ಹುದುಗಿ ಬರುವಂಥದ್ದು. ಕ್ರಿಸ್ತನು ಸಹ ಅವನ ಕಾಲದ ವಿದ್ಯಮಾನಗಳನ್ನು ಅರ್ಥಮಾಡಿಕೊಂಡು ಅವನ ಶಿಷ್ಯರಿಗೂ ಅದನ್ನೇ ಮಾಡಲು ತಿಳಿಹೇಳಿದ. ನಾವು ಇತರ ವಿಷಯಗಳ ನಡುವೆ, ನಮ್ಮ ಈಗಿನ ಪರಿಸ್ಥಿತಿಯನ್ನು ಪ್ರಾಮಾಣಿಕತೆಯಿಂದ ವಿಮರ್ಶಿಸಿ ಗಂಭೀರವಾಗಿ ಪರಿಗಣಿಸಿದಾಗ ಮಾತ್ರ ಕ್ರಿಸ್ತನನ್ನು ಗಂಭೀರವಾಗಿ ಪರಿಗಣಿಸಲು ಸಾಧ್ಯ.
ನಮ್ಮ ಕಾಲದ ಲಕ್ಷಣಗಳನ್ನು ತಿಳಿಯುವುದೆಂದರೆ, ವಿಶ್ವದ ಹೊರನಿಂತು, ಅದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂಬ ಮನೋಭಾವದಿಂದ ವಿಶ್ವವನ್ನು ದಿಟ್ಟಿಸುವುದಲ್ಲ. ನಾವು ತಪ್ಪಿಸಿಕೊಳ್ಳಲಾಗದಂತಹ ಸಂಬಂಧ ಜಾಲದ ಬಲೆಯಲ್ಲಿ ಹೆಣೆಯಲ್ಪಟ್ಟಿದ್ದೇವೆ, ಇದು ನಮ್ಮ ಜಗತ್ತು, ಯಾವುದೇ ರೀತಿಯ ಗಂಭೀರವಾದ ಅಧ್ಯಾತ್ಮ ಎಂಬುದು ಈ ಜಗತ್ತನ್ನು ಹೊರತುಪಡಿಸಿ ಇರಲು ಸಾಧ್ಯವೇ ಇಲ್ಲ.
ಆದ್ದರಿಂದ ಒಂದನೆಯ ಭಾಗದಲ್ಲಿ ನಮ್ಮ ಕಾಲದ ಲಕ್ಷಣಗಳ, ಆಗುಹೋಗುಗಳ ರೂಪರೇಖೆಗಳನ್ನು ಚರ್ಚಿಸೋಣ. ಎರಡನೆಯ ಭಾಗದಲ್ಲಿ ಕ್ರಿಸ್ತ ಅಧ್ಯಾತ್ಮದ ಮೇಲೆ ಆತ್ಮೀಯ ದೃಷ್ಟಿಯನ್ನು ಹರಿಸಸೋಣ. ಕೊನೆಯ ಮೂರು ಮತ್ತು ನಾಲ್ಕನೆಯ ಭಾಗಗಳಲ್ಲಿ ಕ್ರಿಸ್ತನಿಂದ ಪ್ರೇರಣೆಗೊಂಡ ಅಧ್ಯಾತ್ಮವನ್ನು ನಾವು ಹೇಗೆ ಇಂದಿನ ಜಗತ್ತಿನಲ್ಲಿ ಕ್ರಿಯಾತ್ಮಕವಾಗಿ ಬದುಕಾಗಿಸಿಕೊಳ್ಳಬಹುದು ಎಂಬುದನ್ನು ಚರ್ಚಿಸೋಣ. ಆದ್ದರಿಂದ ಈ ಲೇಖನಗಳ ಸರಣಿಯ ಕೇಂದ್ರ ಬಿಂದು ಅಧ್ಯಾತ್ಮ.
ಇಂದು ಅಧ್ಯಾತ್ಮದ ವಿಷಯವನ್ನು ಕುರಿತು ಅನೇಕ ಪುಸ್ತಕಗಳನ್ನು ಬರೆಯಲಾಗಿದೆ. ಆತ್ಮ್ಮದ ಬಗೆಗಿನ ವಿಷಯಗಳಲ್ಲಿ ಜನರ ಅಭೂತಪೂರ್ವ ಆಸಕ್ತಿಯನ್ನು ಅಂತಹ ಪುಸ್ತಕಗಳಲ್ಲಿ ಕಾಣಬಹುದಾಗಿದೆ. ಆದರೆ ಕ್ರಿಸ್ತನ ಅಧ್ಯಾತ್ಮದ ಬಗ್ಗೆ ಬರೆದ ಹಲವಾರು ಪುಸ್ತಕಗಳಲ್ಲಿ ಕ್ರಿಸ್ತನನ್ನೇ ಕಡೆಗಣಿಸಲಾಗಿದೆ. ಕೆಲವೊಂದಂತೂ ಕ್ರಿಸ್ತನನ್ನು ಅಸಂಬದ್ಧ ಎಂದು ಪರಿಗಣಿಸಿ ಕ್ರಿಸ್ತನನ್ನೇ ತಿರಸ್ಕರಿಸಿವೆ. ಇನ್ನೊಂದು ಕಡೆ, ಕ್ರಿಸ್ತನನ್ನು ಕೇಂದ್ರೀಕರಿಸಿ ಹುಟ್ಟಿಕೊಂಡ ಅಧ್ಯಾತ್ಮದ ಪುಸ್ತಕಗಳು, ಕ್ರಿಸ್ತನನ್ನು ಅಧ್ಯಾತ್ಮದ ವಸ್ತುವನ್ನಾಗಿಸಿಕೊಂಡಿವೆ ಹೊರತು, ಕ್ರಿಸ್ತನೆಂಬ ವ್ಯಕ್ತಿಗೂ ಅವನದೇ ಆದ ಅಧ್ಯಾತ್ಮ ಇತ್ತೆಂಬ ಅರಿವಿನಲ್ಲಿ ಅವನ ಅಧ್ಯಾತ್ಮದಿಂದ ನಾವು ಕಲಿಯಬೇಕಾದುದನ್ನು ಸೂಚಿಸಲು ಮರೆತಿದಂತಿದೆ. ಕ್ರಿಸ್ತನ ಅಧ್ಯಾತ್ಮದ ಬಗೆ ಅಳವಾದ, ಆತ್ಮೀಯವಾದ ಒಲವು ನಮ್ಮಲ್ಲಿ ಇಲ್ಲದೇ ಹೋದರೆ, ಇಂದಿನ ನಮ್ಮ ಹೋರಾಟಗಳಲ್ಲಿ ಕ್ರಿಸ್ತನೆಂಬ ವ್ಯಕ್ತಿಯ ಪ್ರಾಮುಖ್ಯತೆಯನ್ನು ಗ್ರಹಿಸಲು ವಿಫಲವಾಗಿಬಿಡುತ್ತೇವೆ.
ಮುಂದಿನ ಲೇಖನಗಳ ಸರಣಿಯಲ್ಲಿ ನಮ್ಮ ಕಾಲಘಟ್ಟದ ಅನೇಕ ಘಟನೆಗಳು, ಸಂಶೋಧನೆಗಳು, ಆವಿಷ್ಕಾರಗಳು ಹೇಗೆ ಕ್ರಿಸ್ತನ ಪ್ರೀತಿ ಮತ್ತು ಸ್ವಾತಂತ್ರ್ಯವನ್ನು ಕ್ರಿಯಾತ್ಮಕವಾಗಿ ಬದುಕಾಗಿಸಿಕೊಂಡವರ ಜತೆ, ಹೇಗೆ ಇನ್ನೂ ಹೆಚ್ಚು ಹೆಚ್ಚು ಜನರು ಬದುಕು ರೂಪಿಸಿಕೊಳ್ಳಬಹುದು ಎಂಬ ಸಾಧ್ಯತೆಯ ಹೊಸ ಮತ್ತು ಉತ್ತೇಜನದ ಮಾರ್ಗಗಳನ್ನು ನಿಮಗೆ ತೋರಿಸಿ ಕೊಡಲಾಗುವುದು.
ನಮ್ಮ ಕಾಲಘಟ್ಟದ ಲಕ್ಷಣಗಳು
ಮುಂದಿನ ನಾಲ್ಕು ಸರಣಿ ಲೇಖನಗಳು ನಮ್ಮ ಕಾಲಘಟ್ಟದ ಅತ್ಯಂತ ಸಂಕೀರ್ಣ ಮತ್ತು ಬದಲಾಗುತ್ತಿರುವ ಕಾಲಘಟ್ಟದ ಲಕ್ಷಣಗಳನ್ನು ಬಹಿರಂಗಪಡಿಸುವ ಒಂದು ಪಕ್ಷಿನೋಟ ಮಾತ್ರವೆಂದಷ್ಟೇ ಹೇಳಬಹುದು. ನಮ್ಮ ಕಾಲದ ಕೆಲವೊಂದು ಘಟನೆಗಳ ಮೇಲಿನ ಒಂದು ಸ್ಥೂಲ ನೋಟ ನಮ್ಮ ಕಾಲಘಟ್ಟದ ಲಕ್ಷಣಗಳ ಭಯಾನಕತೆಯನ್ನು ತೋರಿಸುತ್ತದೆ. ಭಯಾನಕತೆಯೆನ್ನಲು ಎರಡು ಕಾರಣಗಳಿವೆ: ನಮಗೆ ಕಾಣುತ್ತಿರುವ ನಮ್ಮ ಅವ್ಯವಸ್ಥೆಯ ಬದುಕು ಒಂದಾದರೆ, ಇನ್ನೂಂದು ನಮ್ಮ ಇತಿಹಾದ ಮತ್ತು ವಿಕಾಸದ ಪ್ರಕ್ರಿಯೆಯಲ್ಲಿ ಸಾಧ್ಯತೆಕೊಂಡ ಒಂದು ದೊಡ್ಡ ದೈತ್ಯ ನೆಗೆತ.
ಹೌದು ನಮ್ಮ ಕಾಲಘಟ್ಟದ ಲಕ್ಷಣಗಳು ಅಸ್ಪಷ್ಟವಾಗಿವೆ. ಏಕಕಾಲದಲ್ಲಿ ನಾನಾÀ ವಿಷಯಗಳು ನಾನಾÀ ದಿಕ್ಕಿನಲ್ಲಿ ಚಲಿಸುತ್ತಿರುವಂತೆ ತೋರುತ್ತಿವೆ. ಕೆಲವೊಂದು ಪ್ರವೃತ್ತಿಗಳು ಕೆಲವರು ತೆಗೆದುಕೊಂಡ ದಿಕ್ಕಿನ ಪ್ರತಿಕ್ರಿಯೆಂಬಂತೆ ಕಾಣುತ್ತಿವೆ. ಉಣ್ಣೆಯ ಬಿಡಿ ಬಿಡಿ ಎಳೆÉಗಳಂತಹ ವಿವಿಧ ಲಕ್ಷಣಗಳು ಒಟ್ಟಾಗಿ ಹೆಣೆದುಕೊಂಡು ಒಂದು ಸಂಕೀರ್ಣ ಸ್ವರೂಪವನ್ನು ಪಡೆದುಕೊಂಡುಟ್ಟಿವೆ
ನಮ್ಮ ಕಾಲಘಟ್ಟದ ವಿದ್ಯಮಾನಗಳು ನಮ್ಮ ಭವಿಷ್ಯದ ಸೂಚಿಗಳಂತನೇ ಹೇಳಬಹುದು. ಈ ಸೂಚಿಗಳು ನಾವು ಎಲ್ಲಿಗೆ ಹೋಗುತ್ತಿದ್ದೇವೆ ಎಂದು ನಿಖರವಾಗಿ ನಮಗೆ ಹೇಳುವುದಿಲ್ಲ. ಬದಲಾಗಿ ಸೂಚಿಗಳ ಮಹತ್ವವೇನೆಂದರೆ ಅವು ನಮಗೆ ಸವಾಲುಗಳನ್ನು ಒಡ್ಡುತ್ತವೆ. ಇಲ್ಲಿ ನಮಗೆ ಮುಖ್ಯವೆನ್ನಿಸುವುದೇನೆಂದರೆ, ಅವು ಒಡ್ಡುವ ಸವಾಲುಗಳನ್ನು ನಾವು ಒಪ್ಪಿಕೊಳ್ಳುತ್ತೇವೆ. ಅಥವಾ ವಿಶ್ವಾಸದ ದೃಷ್ಟಿಯಿಂದ ನೋಡುವುದಾದರೆ, ನಮ್ಮ ಕಾಲಘಟ್ಟದ ವಿದ್ಯಮಾನಗಳನ್ನು ದೇವರು ನಮಗೆ ಒಡ್ಡುವ ಸವಾಲುಗಳೆಂದು ಒಪ್ಪಿಕೊಳ್ಳಬೇಕಾಗುತ್ತದೆ. ಈ ಒಂದು ಪ್ರಕ್ರಿಯೆಯಲ್ಲಿ ವಾಸ್ತವಿಕತೆಯ ಬಗೆಗಿನ ನಮ್ಮ ಪೂರ್ವಕಲ್ಪಿತ ಅಲೋಚನೆಯನ್ನು ಬಿಟ್ಟುಬಿಡಬೇಕು. ನಮಗೆ ಇಷ್ಟವೋ ಇಲ್ಲವೋ ನಮ್ಮ ನಡುವೆ ಏನು ಆಗುತ್ತಿದೆಯೆಂಬ ಸತ್ಯವನ್ನು ಎದುರಿಸುವ ಉದ್ದೇಶ ನಮ್ಮದಾಗಬೇಕು. ನಮ್ಮ ಈಗಿನ ಸಮಸ್ಯೆಗಳಿಗೆ ಇನ್ನೊಬ್ಬರ ಮೇಲೆ ಗೂಬೆಕೂರಿಸಿದರೆ ಕಾಲಘಟ್ಟದ ಆಗುಹೋಗುಗಳ ನಮ್ಮ ವಿಮರ್ಶೆಯಲ್ಲಿ ಮುಖ್ಯ ಉದ್ದೇಶವೇ ವಿಫಲವಾಗಿಬಿಡುತ್ತವೆ.
ಮುಂದುವರಿಯುವುದು
-0--0--0--0--0--0-
No comments:
Post a Comment