ನಾ ಹಾಡುವ ಹಾಡದು ಇಂದಿಗೂ ಹಾಡದೇ ಉಳಿದಿದೆ.
ದಿನವೆಲ್ಲ ತಂಬೂರಿಯ ತಂತಿಯನು ಬಿಗಿಯಲೂ ಬಿಚ್ಚಲೂ ಕಳೆದಿದೆ.
ಗಳಿಗೆಯದು ಬಂದಿಲ್ಲ, ಶಬುದಗಳೇ ಸಿಗುತಿಲ್ಲ;
ಮಾತಾಡುವ ಬಯಕೆಯದು ಮನಸಿನಲಿ ತುಡಿಯುತಿದೆ.
ಮೊಗ್ಗಿನ್ನೂ ಅರಳಿಲ್ಲ, ತಂಬೆಲರು ನಿಟ್ಟುಸಿರ ಸೂಸಿದೆ.
ನಾನವನ ಮೊಗವ ಕಂಡಿಲ್ಲ, ಅವನ ದನಿಯನೂ ಕೇಳಿಲ್ಲ;
ಮನೆಯಾಚೆ ಬೀದಿಯಲಿ ಅವನ ಹೆಜ್ಜೆಯ ಸಪ್ಪಳವಷ್ಟೇ ಆಲಿಸಿದೆ.
ಅವನಿಗಾಗಿ ಮಣೆಹಾಕಿ ದಿನವೆಲ್ಲ ಕಳೆದೋಯ್ತು;
ದೀಪ ಹಚ್ಚುವುದ ಮರೆತೆ,
ಅವನ ಒಳಗೆ ಕರೆಯಲೂ ಸೋತೆ,
ಅವನ ಭೇಟಿಯ ಬಯಕೆಯಲಿ ಬದುಕಿರುವೆ; ಆದರೆ ಆ ಭೇಟಿಯಿನ್ನೂ ಆಗಿಲ್ಲ.
ಮೂಲ: ರವೀಂದ್ರನಾಥ ಟ್ಯಾಗೋರರ
The song that I came to sing
ಭಾವಾನುವಾದ, ಸಿ ಮರಿಜೋಸೆಫ್
-0--0--0-
No comments:
Post a Comment