- ಜೀವಸೆಲೆ
ಉರಿದ ಹಣತೆ
ಹೇಳಿದ್ದು ಇಷ್ಟೇ
ಸುಟ್ಟುಕೊಂಡರಷ್ಟೇ ಬೆಳಕು
ಬೆಳಕು ನಿನ್ನ
ಸಂಭ್ರಮಿಸಿ ಬೆಳಕಾಗಲು
ನಿನ್ನಂತೆ ಹಣತೆಯಾಗ ಹೊರಟಿದ್ದೇನೆ.
ಇಡೀ ಲೋಕಕ್ಕೆ ಬೆಳಕಾಗಬೇಕೆಂಬ ಭ್ರಮೆಯಿಂದಲ್ಲ
ಎಲ್ಲವನ್ನು ಮರೆತು ಬಿಡುವ
ಈ ಜಗತ್ತಿನಲ್ಲಿ ನಿನ್ನನ್ನು
ಎಂದೆಂದಿಗೂ ಜೀವಂತವಾಗಿರಿಸಬೇಕೆಂಬ
ಸಣ್ಣ ಆಸೆಯಿಂದ
ಹೌದು
ಹಣತೆಯಾಗಿ ಬೆಳಕು ಚೆಲ್ಲಲು ನಾನು
ನೆನಪಿಸು ಆ ಹಣತೆ
ನಾನಲ್ಲ ನೀನು !
-0--0--0--0--0--0-
No comments:
Post a Comment