- ಡೇವಿಡ್ ಕುಮಾರ್. ಎ
ಮುತ್ತಜ್ಜನ ಲಂಗೋಟಿಯನು
ಗೆದ್ದಲ ಹುಳು ತಿಂದು,
ಬೆಳೆದು ನಿಂತಿದೆ ಹುತ್ತ,
ಹಳೇ ಮಣ್ಣ ಘಮಲೇ ಪುರಾವೆ !
ಮುತ್ತಜ್ಜಿಯ ಮಣ್ಣ ಮಡಕೆಯ
ಒಡೆದ ಚೂರುಗಳು,
ಊರೆಲ್ಲಾ ಹರಡಿ
ಕುಂಟಪಿಲ್ಲಿಯ ಚೌಕದೊಳಗೆ
ಬಿಡಿ ಬಿಡಿ ಚೆಲ್ಲಾಡಿವೆ
ಸಾಕಲ್ಲವೇ ಸಾಕ್ಷಿ !?
ಊರೊಳಗಿನ ಗೋಕಟ್ಟೆ
ಊರಾಚೆಯ ಗುಂಡುತೋಪು,
ಗಿಳಿಹಿಂಡು, ಹಕ್ಕಿಹಾಡು,
ಕೆರೆ ಏರಿಯ ನೇರಳೆ ಹಣ್ಣು,
ನನ್ನೂರಿಗೆ ದಾಖಲೆ !
ವಿದೇಶಿ ದಂಡುಗಳ
ಹಿಮ್ಮೆಟ್ಟಿದ ಹಿರಿಯರಿಗೆ
ಜಾತಿ-ಧರ್ಮಗಳಿಲ್ಲ,
ವಂಶ ವೃಕ್ಷಗಳಿಗೆ, ದ್ವೇಷದ ಬೇರಿಲ್ಲ
ಪೌರತ್ವಕ್ಕೆ ಸಹಬಾಳ್ವೆಯೇ ಪುರಾವೆ!
--0--0--0-
ಮುತ್ತಜ್ಜನ ಲಂಗೋಟಿಯನು
ಗೆದ್ದಲ ಹುಳು ತಿಂದು,
ಬೆಳೆದು ನಿಂತಿದೆ ಹುತ್ತ,
ಹಳೇ ಮಣ್ಣ ಘಮಲೇ ಪುರಾವೆ !
ಮುತ್ತಜ್ಜಿಯ ಮಣ್ಣ ಮಡಕೆಯ
ಒಡೆದ ಚೂರುಗಳು,
ಊರೆಲ್ಲಾ ಹರಡಿ
ಕುಂಟಪಿಲ್ಲಿಯ ಚೌಕದೊಳಗೆ
ಬಿಡಿ ಬಿಡಿ ಚೆಲ್ಲಾಡಿವೆ
ಸಾಕಲ್ಲವೇ ಸಾಕ್ಷಿ !?
ಊರೊಳಗಿನ ಗೋಕಟ್ಟೆ
ಊರಾಚೆಯ ಗುಂಡುತೋಪು,
ಗಿಳಿಹಿಂಡು, ಹಕ್ಕಿಹಾಡು,
ಕೆರೆ ಏರಿಯ ನೇರಳೆ ಹಣ್ಣು,
ನನ್ನೂರಿಗೆ ದಾಖಲೆ !
ವಿದೇಶಿ ದಂಡುಗಳ
ಹಿಮ್ಮೆಟ್ಟಿದ ಹಿರಿಯರಿಗೆ
ಜಾತಿ-ಧರ್ಮಗಳಿಲ್ಲ,
ವಂಶ ವೃಕ್ಷಗಳಿಗೆ, ದ್ವೇಷದ ಬೇರಿಲ್ಲ
ಪೌರತ್ವಕ್ಕೆ ಸಹಬಾಳ್ವೆಯೇ ಪುರಾವೆ!
--0--0--0-
No comments:
Post a Comment