Wednesday, 9 May 2018

ಕಥಾದನಿ


ಒಬ್ಬ ಪಾದ್ರಿ ತನ್ನ ಯಾಜಕೀಯ ಜೀವನದ ೫೦ನೇ ವಾರ್ಷಿಕೋತ್ಸವನ್ನು ಆಚರಿಸಿಕೊಂಡ ಕಥೆಯಿದು. ವಾರ್ಷಿಕೋತ್ಸದ ಆಚರಣೆಗೆ ಯಾಜಕ ತನ್ನ ಆತ್ಮೀಯ ಗೆಳೆಯ ರಿಚರ್ಡ್ ಬರ್ಟನ್‍‍ ನನ್ನು ಆಹ್ವಾನಿಸಿ ಕೀರ್ತನೆ ೨೩ನ್ನು ಹಾಡಬೇಕೆಂದು ಕೇಳಿಕೊಳ್ಳುತ್ತಾನೆ. ಆಗ ರಿಚರ್ಡ್ ಬರ್ಟನ್‍ 'ನಾನು ಹಾಡಿದ ನಂತರ ನೀವು ಕೂಡ ಕೀರ್ತನೆಯನ್ನು ಹಾಡುವುದಾದರೆ' ಎಂಬ ಷರತ್ತನ್ನು ಹಾಕಿ ಹಾಡಲು ಒಪ್ಪಿಕೊಳ್ಳುತ್ತಾನೆ.
ಕಾರ್ಯಕ್ರಮದಲ್ಲಿ ಸಂಗೀತಜ್ಞ ರಿಚರ್ಡ್ ಬರ್ಟನ್ಸಭಿಕರ ಮುಂದೆ ನಿಂತು ತನ್ನ ಜನಪ್ರಿಯ ಕೀರ್ತನೆಯನ್ನು ಸೊಗಸಾಗಿ ಹಾಡುತ್ತಿದ್ದಂತೆ ಸಭಿಕರೆಲ್ಲರೂ ಬೆರಗಾಗಿ ರಿಚರ್ಡ್ ಬರ್ಟನ್‍‍ನನ್ನು ಮನಸಾರೆ ಶ್ಲಾಘಿಸಿದರು. ನಂತರ ಪಾದ್ರಿಯು ಸಂಗೀತಜ್ಞಾನ ಇಲ್ಲದಿದ್ದರೂ ವಿನಮ್ರನಾಗಿ ಅದೇ ಕೀರ್ತನೆಯನ್ನು ತನ್ಮಯನಾಗಿ ಹಾಡುತ್ತಿದ್ದಂತೆ ನೆರೆದಿದ್ದ ಜನರು ಕಣ್ಣೀರಿಡುತ್ತಾ ಭಾವಪರವಶರಾದರು. ಅದನ್ನು ಗಮನಿಸಿದ ಒಬ್ಬ ವ್ಯಕ್ತಿ ರಿಚರ್ಡ್ ಬರ್ಟನ್‍‍ನನ್ನು ಕೇಳಿದರು, "ನೀವು ಹಾಡಿದಾಗ ಜನರು ಶ್ಲಾಘಿಸಿದರು, ಆದರೆ ಪಾದ್ರಿ ಹಾಡಿದ್ದನ್ನು ಕೇಳಿ ಇಡೀ ಸಭೆಯು ಭಾವಪರವಶವಾದುದ್ದು ಹೇಗೆ?" ಅದಕ್ಕೆ ರಿಚರ್ಡ್ ಬರ್ಟನ್‍‍ "ನಾನು ಕೀರ್ತನೆ ಮಾತ್ರ ಬಲ್ಲೆ, ಆದರೆ ಗುರುಗಳು ಕುರುಬನನ್ನೇ ಬಲ್ಲವರು" ಎಂದು ಉದ್ಗರಿಸಿದರು.


ಒಬ್ಬ ಕುರುಬ ತನ್ನ ಕುರಿಗಳನ್ನು ಮೇಯಿಸುತ್ತಿದ್ದಾಗ ವೇಗವಾಗಿ ಒಂದು ಕಾರು ಬಂದು ನಿಂತಿತು. ಕಾರಿನಿಂದ ಸೂಟುಬೂಟು ಹಾಕಿಕೊಂಡಿದ್ದ ಒಬ್ಬ ವ್ಯಕ್ತಿ ಹೊರಬಂದು ಕುರುಬನನ್ನು ಮತ್ತು ದೊಡ್ಡದಾದ ಕುರಿ ಮಂದೆಯನ್ನು ನೋಡಿ, "ಏಯ್, ನಿನ್ನಲ್ಲಿ ಎಷ್ಟು ಕುರಿಗಳಿವೆ ಎಂದು ನಾನು ಒಮ್ಮಲೇ ಹೇಳಿದರೆ ನನಗೆ ನಿನ್ನ ಒಂದು ಕುರಿಯನ್ನು ಕೊಡುವೆಯಾ?" ಎಂದು ಕೇಳಿದ. ಕುರುಬ ವ್ಯಕ್ತಿಯನ್ನು ದಿಟ್ಟಿಸಿ ಶಾಂತನಾಗಿ "ಆಗಬಹುದು" ಎಂದ.
ಸೂಟುಬೂಟಿನ ವ್ಯಕ್ತಿ ಕೂಡಲೇ ತನ್ನ ಸೆಲ್ಪೋನನ್ನು ಲ್ಯಾಪ್ಟಾಪ್ಗೆ ಜೋಡಿಸಿದ. ಇಂರ್ನೆಟ್ನಲ್ಲಿ ಸ್ಯಾಟ್ಲೈಟ್ ನ್ಯಾವಿಗೇಷನ್ ಮೂಲಕ ಪ್ರದೇಶವನ್ನು ಸರ್ಫಿಂಗ್ ಮಾಡಿ ಕೆಲವೇ ನಿಮಿಷಗಳಲ್ಲಿ "ನಿಖರವಾಗಿ ೧೫೮೬ ಕುರಿಗಳಿವೆ" ಎಂದು ಹೇಳಿದ.
ಆನಂತರ ಆತ ಒಂದು ಕುರಿಯನ್ನು ತನ್ನ ಕಾರಿನಲ್ಲಿ ಹಾಕಿಕೊಂಡು ಹೋಗಲು ತಯಾರಾಗುತ್ತಿದ್ದಂತೆ ಕುರುಬನು ಅವನಿಗೆ "ನಿಮ್ಮ ವ್ಯವಹಾರ (Business) ಏನೆಂದು ಹೇಳಿದರೆ ನೀವು ನನ್ನ ಕುರಿಯನ್ನು ಹಿಂತಿರುಗಿಸುವಿರಾ?" ಎಂದು ಕೇಳುತ್ತಾನೆ. ಅದಕ್ಕೆ ವ್ಯಕ್ತಿ ಸಮ್ಮತಿಸಿದ. ಕೂಡಲೇ ಕುರುಬ ತಡವರಿಸದೆ "ನೀವೊಬ್ಬ consultant/ಸಲಹೆಗಾರರಾಗಿದ್ದೀರಿ" ಎಂದುತ್ತರಿಸಿದ.
ಅವಾಕ್ಕಾದ ವ್ಯಕ್ತಿ "ನಿಮ್ಮ ಉತ್ತರ ಸರಿಯಾಗಿದೆ ನೀವು ಹೇಗೆ ಊಹಿಸಿದಿರಿ?" ಎಂದು ಅಚ್ಚರಿ ವ್ಯಕ್ತಪಡಿಸಿದ. ಅದಕ್ಕೆ ಕುರುಬ "ನಾನು ಕೇಳದಿದ್ದರೂ ನೀವೇ ಬಂದು ನಾನು ಕೇಳದ ಪಶ್ನೆಗೆ ಉತ್ತರಿಸಿ.. ನನಗೆ ಗೊತ್ತಿರುವ ಮಾಹಿತಿಯನ್ನೇ ನನಗೆ ಕೊಟ್ಟು. ನನ್ನ ನಾಯಿಯನ್ನು ಕುರಿಯೆಂದು ನಿಮ್ಮ ಕಾರಿಗೆ ಹಾಕಿಕೊಂಡಿದ್ದೀರಿ.. ದಯವಿಟ್ಟು ನನ್ನ ನಾಯಿಯನ್ನು ಹಿಂದಿರುಗಿಸಿ.."
-ಸಂಗ್ರಹ : ಇನ್ನಾ

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...