Wednesday, 9 May 2018

ನಿನ್ನ ಪೀತಿಯ ಬೇರ ಸುಡಬೇಡ

ನಿನ್ನ ಪೀತಿಯ ಬೇರ ಸುಡಬೇಡ
ಬದುಕ ಮರವೇ ಒಣಗಿಬಿಡುವುದು
ಈ ಲೋಕದ ಸ್ವಾರ್ಥದ ಬೆಂಕಿಗೆ ಸೌದೆಯಾಗುತ್ತಾ !!!

ನನ್ನ ಅರ್ಥಮಾಡಿಕೊಳ್ಳುವೆಯಾ?
ಎಂದು ನಿನ್ನ ಕೇಳುವಾಗ ತಿಳಿಯಿತು..
ನನ್ನನ್ನು ನಾನು ಅರ್ಥಮಾಡಿಕೊಳ್ಳುವ ತನಕ
ಯಾರಿಗೂ ಅರ್ಥವಾಗದ ದುರಹಂಕಾರಿ ನಾನು ಎಂದು!!

ನಾನು ಬೇಡವೆನ್ನಿಸಿದ್ದೇಕೆ ನಿನಗೆ?
ಗೀರಿ ಬಿಟ್ಟ ಬೆಂಕಿ ಕಡ್ಡಿಯು
ಪ್ರೀತಿಯೆಂಬ ಬೆಂಕಿಯನ್ನು ಹತ್ತಿಸುವುದಾದರೂ
ಹೇಗೆ ಎಂದೆ???

ಸಮುದ್ರವೆಂಬ ನಿನ್ನ ಪ್ರೀತಿಗೆ
ಸೇರಿಬಿಟ್ಟಿರುವ ನನ್ನನ್ನು
ಮತ್ತೊಮ್ಮೆ ನದಿಯಾಗಿ
ನಿನ್ನಿಂದ ಬೇರೆಯಾಗಲು ಹೇಳಬೇಡ
ಅದು ಆಗದ ಮಾತು !!!

-ಜೀವಸೆಲೆ

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...