Friday, 13 July 2018

ನಾನು ಎಡಗೈಲಿ ಇಡಲಿಲ್ಲ...



". . . . . ಕವಿಶೈಲದಲ್ಲಿ ಅಣ್ಣನ ಅಂತ್ಯಸಂಸ್ಕಾರದ ಸಂದರ್ಭದಲ್ಲಿ ಎಲ್ಲರೂ ಚಿತೆಯ ಮೇಲೆ ಒಂದೊಂದು ಗಂಧದ ಚಕ್ಕೆಯನ್ನಿಡುತ್ತಿದ್ದರು. ನನಗೂ ಹೇಳಿದರು. ನನಗೆ ಇದೊಂದು ಶಾಸ್ತ್ರ ಎಂದು ಗೊತ್ತಿರಲಿಲ್ಲ. ಅಂತಿಮ ಗೌರವ ಈ ರೀತಿ ಸಮರ್ಪಿಸುತ್ತಿದ್ದಾರೆ ಎಂದು ಹೋದೆ. ಚಕ್ಕೆ ತೆಗೆದು ಇಡುತ್ತಾ ಇರಬೇಕಾದರೇ ಹಿಂದಿನಿಂದ ಯಾರೋ "ಅಯ್ಯಯ್ಯೋ ಬಲಗೈಲಿ ಇಡಬಾರದು, ಎಡಗೈಲಿ ಇಡಬೇಕು" ಎಂದರು. ಹಿಂದಿರುಗಿ ನೋಡಿದೆ! ನನ್ನ ಮಿತ್ರರಾದ ಚಂದ್ರೇಗೌಡರೇ ನಿಂತಿದ್ದಾರೆ. ನನಗೆ ಅಣ್ಣನ ಇಡೀ ಜೀವಮಾನದ ಬೋಧನೆ, ಅವಿರತ ಹೋರಾಟ, ಕೊಟ್ಟಕೊನೆಯ ಅವರ ಸಂದೇಶ ಎಲ್ಲ ಮನಃಪಟಲದಲ್ಲಿ ಒಂದು ಕ್ಷಣ ಸುಳಿದುಹೋಯ್ತು. ಒಕ್ಕಲಿಗರ, ಶೂದ್ರರ ದೌರ್ಬಲ್ಯಗಳನ್ನು ನೆನೆದು ದುಃಖವಾಯಿತು. ಇದು ಮಾತಿಗೆ ಸಮಯವಲ್ಲವೆಂದು ಚೆನ್ನಾಗಿ ಗೊತ್ತಿದ್ದು "ಚಂದ್ರೇಗೌಡರೇ, ಕುವೆಂಪು ಇಡೀ ಜೀವಮಾನ ಹೇಳಿದ್ದೆಲ್ಲಾ ನಿರರ್ಥಕ, ನಾನೀಗ ಎಡಗೈಲಿ ಇಟ್ಟರೆ! ಏನು ಮಾಡಲಿ ಹೇಳಿ!" ಎಂದೆ. ಚಂದ್ರೇಗೌಡರಿಗೆ ನನ್ನ ಪ್ರಶ್ನೆಯು ತಾಗಿರಬೇಕು. "ನಿಮ್ಮ ಇಷ್ಟ, ಸ್ಸಾರಿ!!" ಎಂದರು. ನಾನು ಎಡಗೈಲಿ ಇಡಲಿಲ್ಲ."

ಪೂರ್ಣಚಂದ್ರ ತೇಜಸ್ವಿಯವರ "ಅಣ್ಣನ ನೆನಪು" ಪುಸ್ತಕದಿಂದ

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...