Friday, 13 July 2018

ಇದು ಹಾದಿಗೊಂದು ಶಿಲುಬೆ ||


ನಾ ಹುಡುಕದೆ ಹೋದಲ್ಲಿ ಅದು ನನ್ನದಾದೀತೆ
ನಾ ಹೊರದೆ ಹೋದಲ್ಲಿ ನನ್ನ ಗೆಲುವಾದೀತೆ
ಏನು ಇದರ ಮಾಯೆ, ಹೊತ್ತು ನಡೆವಲ್ಲಿ!
ಹಿಂದಿರುಗಲಾಗದು, ಅಕ್ಕಪಕ್ಕ ಸರಿಯಲಾಗದು
ಮುಗ್ಗರಿಸಿ ಬೀಳುವುದು ಮಾತ್ರ,
ಇದು ಹಾದಿಗೊಂದು ಶಿಲುಬೆ||

ನನಗಾಗಿ ಸಜ್ಜುಗೊಂಡಿತು, ನನಗಾಗಿ ಕಾದುನಿಂತಿತು
ಕರಾಳ ಕಾಲ ಕಳೆಯವ ತಮೋಹದ ಹಣತೆ
ನಾ ಹೊತ್ತರೇನೆ ಫಲ, ನನ್ನ ಜಡಿದರೇನೆ ನೆಲ
ಸಾಗುಹುದು ಈ ಪಯಣ ತಿಳಿಯದ ಶಯನ
ಪರಾಸು ನಾನಲ್ಲ ಪುನರುತ್ಥಾನ ಮಾತ್ರ,
ಇದು ಹಾದಿಗೊಂದು ಶಿಲುಬೆ||

ಧನವಲ್ಲ, ಬಲವಲ್ಲ, ಶಕ್ತಿಯಿಂದಲೂ ಅಲ್ಲ,
ಹೊರಲಾಗದು ಈ ಪ್ರೀತಿಯ ಗೌಳ
ಗ್ರಹಗತಿಗಳು ನಿಂತು ಹೋಗುವುವು, ನಾನು ಹೊರುವುದು ನಿಂತರೆ
ರಕ್ತಬೆವರ ಕ್ಲಿನ್ನನಾದೆ ಹೊತ್ತುಸಾಗಲು,
ಮತ್ತಾವತ್ತು ಠೇವಣಿಸದಿರು ನನ್ನ, ಮುವತ್ತು ಬೆಳ್ಳಿಗೆ!
ಹೊರುತ್ತಿರುವೆ ಇನ್ನು
ಇದು ಹಾದಿಗೊಂದು ಶಿಲುಬೆ ||
ನವೀನ್ ಮಿತ್ರ

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...