Wednesday, 12 December 2018

ದುಷ್ಟರ ಸಂಚು ಮಣ್ಣುಪಾಲಾಗುವುದು ಮಾತ್ರ ಖಚಿತ

ಮೊನ್ನೆ ಫೆಸ್ಬುಕ್ನಲ್ಲಿ ಒಂದು ಪೊಸ್ಟ್ ನೋಡಿದೆ. ಅದು Tamil BJP followers  ಎಂಬ ಹೆಸರಿನ account ನಿಂದ ಪೋಸ್ಟ್ ಆದದ್ದು. ಪೋಸ್ಟ್ ರೀತಿ ಇತ್ತು: ಮುಸ್ಲಿಮರು ಮಸೀದಿಗೆ ಹೋಗಿ ಮೋದಿಯವರು ಮತ್ತೊಮ್ಮೆ ಪ್ರಧಾನ ಮಂತ್ರಿ ಆಗಬಾರದೆಂದು ಪ್ರಾರ್ಥಿಸುತ್ತಾರೆ, ಕ್ರೈಸ್ತರು ಚರ್ಚಿಗೆ ಹೋಗಿ  ಮೋದಿಯವರು ಮತ್ತೊಮ್ಮೆ ಪ್ರಧಾನ ಮಂತ್ರಿ ಆಗಬಾರದೆಂದು ಪ್ರಾರ್ಥಿಸುತ್ತಾರೆ; ಹಿಂದೂಗಳಾದ ನಾವು ಏನು ಮಾಡಬೇಕು ಎಂಬ ಪ್ರಶ್ನೆಯೊಂದಿಗೆ ಪೊಸ್ಟ್ ಕೊನೆಗೊಳ್ಳುತ್ತದೆ. ಪ್ರಶ್ನೆಗೆ  ಹಿಂದೂ ಧರ್ಮಕ್ಕೆ ಸೇರಿದ ವ್ಯಕ್ತಿ (ಅವನ ಹೆಸರಿನಿಂದ ಗೊತ್ತಾಗಿದ್ದು) ಉತ್ತರಿಸುತ್ತಾನೆ. ಅವನ ಉತ್ತರ ಏನಿರಬಹುದು?
ಹೌದು, ಚುನಾವಣೆ ಹತ್ತಿರವಾಗುತ್ತಿದ್ದಂತೆ ನಮ್ಮ ರಾಜಕೀಯ ಪ್ರಕ್ಷಗಳಲ್ಲಿ ಎಲ್ಲಿಲ್ಲದ ಹುಮಸ್ಸು ಕಾಣಿಸಿಕೊಳ್ಳುತ್ತದೆ. ಜನರ ಮೇಲೆ ಪ್ರಭಾವ ಬೀರಲು ನಾನಾ ರೀತಿಯ ಸರ್ಕಸ್ಸುಗಳು, ದೊಂಬರಾಟಗಳು ಪಕ್ಷಗಳ ಕೃಪಾಕಟಾಕ್ಷದಲ್ಲಿ ನಡೆಯುತ್ತಿರುತ್ತವೆ. ಇಂತಹ ದೊಂಬರಾಟಗಳಿಂದ ಜನರಿಗೆ ಅಲ್ಪಸ್ವಲ್ಪ ಒಳಿತಾದರೆ, ಕಡೆ ಪಕ್ಷ ಚುನಾವಣೆ ಗಳಿಗೆಯಲ್ಲಾದರೂ ಜನರ ಒಳಿತನ್ನು ಬಯಸುತ್ತಿದ್ದಾರಲ್ಲ ಎಂದು ಶಹಬಾಸ್ ಹೇಳೋಣವೆಂದರೆ, ಮಾಡುತ್ತಿರುವುದು ಮಾತ್ರ ಮನೆ ಹಾಳು ಕೆಲಸ.
ಸುಳ್ಳು ಭಾಷಣಗಳು, ಧರ್ಮಗಳ  ಹೆಸರಿನಲ್ಲಿ ಜನರ ಧ್ರುವೀಕರಣ, ಕೋಮುಗಳನ್ನು ಎತ್ತಿಕಟ್ಟಿ ಕೋಮುಗಲಭೆಗಳ ಸೃಷ್ಟಿ, ಗೋರಕ್ಷಣೆಯ ನೆಪದಲ್ಲಿ ಮುಗ್ಧಜನರ ಕೊಲೆಗಳು, ಸರ್ಕಾರವನ್ನು ಪ್ರಶ್ನಿಸಿದವರ ಬಂಧನ, ಸೈಬರ್ ಭಯೋತ್ಪಾದನೆ, ಸರ್ಕಾರೀ ಸಂಸ್ಥೆಗಳ ದುರುಪಯೋಗ, ಕೆಟ್ಟ ಆರ್ಥಿಕ ನೀತಿಗಳು, ದೇವಾಲಯಗಳ  ಭೇಟಿ, ರಾಷ್ಟ್ರೀಯತೆಯ ನೆಪದಲ್ಲಿ ಬುದ್ಧಿಜೀವಿಗಳ ಶೋಷಣೆ, ಕೊಲೆಗಳು ಇವೆಲ್ಲವೂ ಪಕ್ಷಗಳಿಗೆ ಓಟು ಪಡೆಯುವ ತಂತ್ರಗಳಾಗಿಬಿಟ್ಟಿವೆ. ಆದ್ದರಿಂದ ಚುನಾವಣೆ ಹತ್ತಿರವಾಗುತ್ತಿದಂತೆ, ಇಂತಹ ಸರ್ಕಸ್ಸುಗಳು ಹೆಚ್ಚು ಹೆಚ್ಚು ಪಕ್ಷಗಳ ವತಿಯಿಂದ ನಡೆಯುತ್ತಿರುತ್ತವೆ. ಇತ್ತೀಚೆಗೆ ರಾಮಮಂದಿರದ ಪ್ರಸ್ತಾಪ ಕೂಡಾ ಮುನ್ನೆಲೆಗೆ ಬಂದಿರುವುದು ಕಾರಣದಿಂದಾಗಿಯೇ.
ಯುದ್ಧ, ಪ್ರೀತಿ ಗೆಲ್ಲಲು  ಮಾಡಿದ್ದೆಲ್ಲವೂ  ನ್ಯಾಯೋಚಿತವೆನ್ನುವಂತೆ, ಮತಗಳ ಬೇಟೆಗೆ ಏನು ಮಾಡಿದರೂ ಒಪ್ಪಿತವೇ ಎಂಬ ಸಂಸ್ಕೃತಿ ನಮ್ಮ ದೇಶದಲ್ಲಿ ಎದ್ದು ಕಾಣುತ್ತಿದೆ. ಹಿಂದೆ ರಾಜಕೀಯ ಪಕ್ಷಗಳು ಚುನಾವಣೆಗಳನ್ನು ವಿಷಯಾಧಾರದಲ್ಲಿ ಎದುರಿಸುತ್ತಿದ್ದವು. ಚುನಾವಣೆ ಪ್ರಣಾಳಿಕೆಗಳನ್ನು ಸಿದ್ಧಪಡಿಸಲು ಹತ್ತಾರು ತಿಂಗಳು ತೆಗೆದುಕೊಳ್ಳುವುದಲ್ಲದೆ, ಸಾರ್ವಜನಿಕವಾಗಿ ಪ್ರಣಾಳಿಕೆಯ ಬಗ್ಗೆ ಚರ್ಚೆಗಳು ನಡೆಯುತ್ತಿದ್ದವು. ಅದರೆ ಕಾಲ ಬದಲಾಗಿದೆ. ಪಕ್ಷಗಳು ಚುನಾವಣೆಗೆ ಮೂರ್ನಾಲ್ಕು ದಿನಗಳು ಬಾಕಿ ಇರುವಾಗ, ಪ್ರಣಾಳಿಕೆಗಳನ್ನು ಬಿಡುಗಡೆ ಮಾಡುತ್ತಿವೆ. ಪ್ರಣಾಳಿಕೆಯನ್ನು ಕೇವಲ ಔಪಚಾರಿಕ ಎಂಬಂತೆ ಸಿದ್ಧಪಡಿಸಲಾಗುತ್ತಿದೆ.
ಪಕ್ಷಗಳು ಜನರ ಸಮಸ್ಯೆಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಅವು ನಿರುದ್ಯೋಗದ ಬಗ್ಗೆ ಮಾತನಾಡುತ್ತಿಲ್ಲ. ನಿರುದ್ಯೋಗವನ್ನು ನಿವಾರಿಸುವ ಕ್ರಮದ ಬಗ್ಗೆ ಮಾತನಾಡುತ್ತಿಲ್ಲ. ರೈತರ ಸಮಸ್ಯೆಗಳ ಬಗ್ಗೆ ಪಕ್ಷಗಳು ದನಿ ಎತ್ತುತ್ತಿವೆಯೇ? ರೈತರ ಅತ್ಮಹತ್ಯೆಗಳು ದಿನೇ ದಿನಕ್ಕೆ ಹೆಚ್ಚುತ್ತಿವೆ. ಆದರೂ ರೈತರ ಸಮಸ್ಯೆಗಳು ನಮ್ಮ ಪಕ್ಷಗಳಿಗೆ ನಗಣ್ಯವಾಗಿಬಿಟ್ಟಿವೆ. ಇಷ್ಟೇ ಅಲ್ಲ, ಶಿಕ್ಷಣದ ಸಮಸ್ಯೆಗಳ ಬಗ್ಗೆಯಾಗಲೀ, ಅರೋಗ್ಯ ಕ್ಷೇತ್ರದ ಸುಧಾರಣೆಯ ಬಗ್ಗೆಯಾಗಲೀ ಪಕ್ಷಗಳು ಉಸಿರೆತ್ತುತ್ತಿಲ್ಲ.
ಅಧಿಕಾರ ಹಿಡಿಯಲು ನಮ್ಮ ಪಕ್ಷಗಳು ಅಡ್ಡದಾರಿ ಹಿಡಿಯುತ್ತಿವೆ. ಸುಳ್ಳು ಪ್ರಚಾರಗಳಿಂದ ಜನರನ್ನು ಮರಳುಮಾಡುತ್ತಿವೆ. ಧರ್ಮ, ಜಾತಿ, ಕೋಮು, ಭಾಷೆ, ದೇಶ.. ಹೀಗೆ  ಭಾವನಾತ್ಮಕ ವಿಷಯಗಳ ಬಗ್ಗೆ ಮಾತನಾಡಿ ಜನರನ್ನು ಉದ್ರೇಕಿಸಿ ವಂಚಿಸುತ್ತಿದ್ದಾರೆ. ಭಾವನಾತ್ಮಕ ವಿಷಯಗಳಿಗೆ ಸುಳ್ಳುಗಳನ್ನು ಪೋಣಿಸಿ ಜನರ ಹಾದಿಯನ್ನು ತಪ್ಪಿಸುತ್ತಿದ್ದಾರೆ. 
ಹೌದು, ಲೋಕಸಭೆ ಚುನಾವಣೆ ಸಮೀಪಿಸುತ್ತಿದೆಏನಿರಬೇಕು ನಮ್ಮ ಚುನಾವಣೆಯ ವಿಚಾರ? ಸರ್ಕಾರದ ಅಸರ್ಮಥತೆಬಗ್ಗೆ ಗಟ್ಟಿ ದನಿಯಲ್ಲಿ ಮಾತನಾಡಬೇಕು. ಸರ್ಕಾರದ ಹಲವಾರು ನಕರಾತ್ಮಕ ವಿಷಯಗಳು ಚರ್ಚೆಯ ಮುನ್ನೆಲೆಗೆ ಬರಬೇಕು; ನೋಟು ರದ್ದತಿ, ಗುಂಪು ಹತ್ಯೆಗಳು, ರೂಪಾಯಿ ಮೌಲ್ಯ ಕುಸಿತ, ರಫೇಲ್ ವಿಚಾರ, ಕೃಷಿ ಕ್ಷೇತ್ರದ ಬಿಕ್ಕಟ್ಟುಗಳು, ಪೊಳ್ಳಾದ ಭರವಸೆಗಳು, ಹಣದುಬ್ಬರ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯ ಹೆಚ್ಚಳ, ಉದ್ಯೋಗ ಕಡಿತ ಇತ್ಯಾದಿ. ನಾವು ಅಭಿಯಾನ ಆರಂಭಿಸೋಣ. ಸಮಸ್ಯೆಗಳ ಬಗ್ಗೆ ದನಿ ಎತ್ತಿ ಮಾತಾಡೋಣ.
ದುರದೃಷ್ಟವಶಾತ್, ರೈತರು ರೈತರಾಗಿ ಓಟ್ ಮಾಡುವುದಿಲ್ಲ, ನೇಕಾರ ಒಬ್ಬ ನೇಯ್ಗೆಯವನಾಗಿ ಓಟ್ ಹಾಕುವುದಿಲ್ಲ. ಕೃಷಿ ಕಾರ್ಮಿಕ ಒಬ್ಬ ಕೃಷಿ ಕಾರ್ಮಿಕನಾಗಿ ಓಟ್ ಮಾಡುವುದಿಲ್ಲ, ಬದಲಾಗಿ, ಪಟೇಲನಾಗಿಯೋ, ಒಕ್ಕಲಿಗನಾಗಿಯೋ, ಲಿಂಗಾಯಿತನಾಗಿಯೋ, ಹಿಂದೂ, ಮುಸ್ಲಿಮರಾಗಿಯೋ, ಕನ್ನಡಿಗನಾಗಿಯೋ, ಮಳಯಾಳಿಯಾಗಿಯೋ ಓಟ್ ಮಾಡುತ್ತೇವೆ. ಕಾರಣದಿಂದ ರಾಜಕಾರಣಿಗಳು ಸುಲಭವಾಗಿ ನಮ್ಮ ಚರ್ಚೆ, ವಿಚಾರಗಳ ದಿಕ್ಕತಪ್ಪಿಸಿ ನಮ್ಮಲ್ಲೇ ಒಡಕು ಮೂಡಿಸಿ ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುತ್ತಾರೆ. ಆದ್ದರಿಂದ ಜಾಗೃತರಾಗೋಣ ಮತ್ತು ಎಲ್ಲರನ್ನೂ ಜಾಗೃತಗೊಳಿಸೋಣ.
ಕೊನೆಗೆ, ವ್ಯಕ್ತಿ  ಉತ್ತರ ರೀತಿ ಇತ್ತು: “ಹಿಂದೂ ಆದ ನಾನು ದೇವಸ್ಥಾನಕ್ಕೆ ಹೋಗಿ ಮೋದಿ ಮತ್ತೊಮ್ಮೆ ಪ್ರಧಾನಮಂತ್ರಿ ಆಗಬಾರದೆಂದು ಪ್ರಾರ್ಥಿಸುತ್ತೇನೆ.
ಅಂದರೆ ನಾವು ಜೀವಪರ ಕಾಳಜಿಯುಳ್ಳ ವ್ಯಕ್ತಿ ನಮ್ಮ ನಾಯಕರಾಗಲೆಂದು ಪ್ರಾರ್ಥಿಸೋಣ. ದೆಹಲಿಯಲ್ಲಿ ನಡೆದ ರೈತರ rally  ದಿಸೆಯಲ್ಲಿನ ಅಶಾದಾಯಕ ಬೆಳವಣಿಗೆ. ಧರ್ಮ ಜಾತಿಯ ವಿಚಾರ ಬಿಟ್ಟು  ಬದುಕ ಸಂಕಟಗಳ ಕುರಿತು, ಅವುಗಳ ಪರಿಹಾರ ದಾರಿಗಳ ಕುರಿತು ಯೋಚಿಸೋಣ. ಆಗ ದುಷ್ಟರ ಸಂಚು ಮಣ್ಣುಪಾಲಾಗುವುದು ಮಾತ್ರ ಖಚಿತ.



- ಜೋವಿ

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...