ಪವಿತ್ರವೆಂದು ಜನ ಭಾವಿಸಿದ ಒಂದು ತಾಣ. ಅದರ ಒಳಗೆ ಹೋಗಲು ಯಾರಿಗೂ ಅವಕಾಶವೇ ಇಲ್ಲ. ಒಳಗೆ ದೇವರಿದ್ದಾನೆ ಎಂದು ಜನ ನಂಬಿದ್ದಾರೆ. ವಾಸ್ತವದಲ್ಲಿ ಒಬ್ಬಾತನನ್ನು ಆ ಕಟ್ಟಡದ ಒಳಗೆ ಬಂಧಿಸಿ ಇಡಲಾಗಿದೆ. ಅವನ ಮುಂದೆ ಒಂದು ಮೈಕ್ ಇಡಲಾಗಿದೆ. ಅವನು ಮಾತಾಡುತ್ತಾ ಹೋಗುತ್ತಾನೆ. ಆದರೆ ಆ ಮೈಕಿಗೆ ಸಂಪರ್ಕ ಕಡಿತವಾಗಿದೆ. ಅದರ ಬದಲು ರೆಕಾರ್ಡ್ ಮಾತುಗಳೇ ಹೊರಗಿದ್ದವರಿಗೆ ಕೇಳುಸುತ್ತಿದೆ.
ಒಳಗಿರುವವನು ಹೇಳುತ್ತಿದ್ದಾನೆ: ನಾನು ದೇವರಲ್ಲ. ನಾನು ನಿಮ್ಮಂತೆ ಮನುಷ್ಯ, ನನಗೆ ಬಿಡುಗಡೆ ಕೊಡಿ. ನನಗೆ ನಿಮ್ಮ ಹಣ ಬೇಕಾಗಿಲ್ಲ. ನನಗೆ ಈ ಯಾತನೆಯಿಂದ ಮುಕ್ತಿ ಕೊಡಿಸಿ.
ಹೊರಗಿರುವವರಿಗೆ ಕೇಳುತ್ತಿದೆ: ನಾನೇ ದೇವರು. ನಿಮಗೆ ಬಿಡುಗಡೆ ಬೇಕಿದ್ದರೆ ನನ್ನನ್ನು ನಂಬಿ. ಇಲ್ಲಿರುವ ಹುಂಡಿಗೆ ನಿಮ್ಮಲ್ಲಿರುವ ಹಣವನ್ನು ಹಾಕಿ. ಅತ್ಯಂತ ಕಡಿಮೆ ಹಣ ಯಾರ ಬಳಿ ಇರುತ್ತದೆಯೋ ಅವನನ್ನು ನಾನು ತುಂಬ ಪ್ರೀತಿಸುತ್ತೇನೆ.
———————
ಶಿಷ್ಯನೋರ್ವ ಬಂದು ಹಿಲ್ಲೆಲ್ ಎಂಬ ಯೆಹೊದ್ಯ ಗುರುವಿನ ಬಳಿ ಹೋಗಿ, ಒಂದೇ ಮಾತಿನಲ್ಲಿ ವೇದಶಾಸ್ತ್ರದ ಸಾರ ಸಮಸ್ತವನ್ನು ಹೇಳಬಲ್ಲೆಯಾ ಎಂದು ಕೇಳಿದಾಗ, ಬೇರೆಯವರು ನಿನಗೇನು ಮಾಡಬಾರದೆಂದು ಬಯಸುತ್ತಿಯೋ ಅದನ್ನು ಪರರಿಗೆ ನೀನು ಮಾಡಬೇಡ, ಇದುವೇ ವೇದಶಾಸ್ತ್ರದ ಸಾರಾಂಶ, ಉಳಿದೆಲ್ಲವೂ ವಿವರಣೆ ಎಂದು ನುಡಿದರು.
—————
ಒಮ್ಮೆ ಮುಲ್ಲಾನ ನಂಟನೊಬ್ಬ ಬಂದಿದ್ದ. ದೂರದ ಹಳ್ಳಿಯಲ್ಲಿದ್ದವನು ಅವನು. ಬರುವಾಗ ಬಾತುಕೋಳಿಯೊಂದನ್ನು ತಂದಿದ್ದ. ಮುಲ್ಲಾಗೆ ಸಂತೋಷವಾಯಿತು. ಬಾತು ಕೋಳಿಯನ್ನು ಬೇಯಿಸಿ ಸಾರು ಮಾಡಿಸಿದ. ಅತಿಥಿಯೊಡನೆ ಖುಷಿಯಾಗಿ ಊಟ ಮಾಡಿದ. ಕೊಂಚ ಹೊತ್ತಿನ ನಂತರ ಇನ್ನೊಬ್ಬ ಬಂದ. “ನಾನು ನಿಮ್ಮ ನಂಟನ ಗೆಳೆಯ” ಅಂದ. ಮತ್ತೊಬ್ಬ ಬಂದ. “ನಾನು ನಿಮ್ಮ ನಂಟನ ಗೆಳೆಯನ ಗೆಳೆಯ” ಅಂದ. ಹೀಗೇ ಗೆಳೆಯನ ಗೆಳೆಯನ... ಎಂದು ಹೇಳಿಕೊಂಡು ಬರುವವರು ಹೆಚ್ಚಾದರು. ಎಲ್ಲರೂ ಊಟಕ್ಕೆ ಬಂದವರೇ ಹೊರತು ಮುಲ್ಲಾಗೆ ಕೊಡಲು ಏನೂ ತಂದಿರಲಿಲ್ಲ. ಎಲ್ಲರಿಗೂ ಊಟಕ್ಕಿಟ್ಟು ಮುಲ್ಲಾನಿಗೆ ಸಾಕಾಗಿಹೋಯಿತು.
ಮೂರನೆ ದಿನ ಇನ್ನೊಬ್ಬ ಬಂದ. “ನಾನು ನಿಮಗೆ ಬಾತು ಕೋಳಿ ತಂದುಕೊಟ್ಟ ನಂಟನ ಗೆಳೆಯನ ಗೆಳೆಯನ ಗೆಳೆಯನ ಗೆಳೆಯ” ಎಂದು ಪರಿಚಯ ಮಾಡಿಕೊಂಡ. ನನ್ನನ್ನೂ ಊಟಕ್ಕೆ ಕರೆಯುತ್ತಾರೆ ಎಂದು ಕಾದು ಕುಳಿತ.
ಮೂರನೆ ದಿನ ಇನ್ನೊಬ್ಬ ಬಂದ. “ನಾನು ನಿಮಗೆ ಬಾತು ಕೋಳಿ ತಂದುಕೊಟ್ಟ ನಂಟನ ಗೆಳೆಯನ ಗೆಳೆಯನ ಗೆಳೆಯನ ಗೆಳೆಯ” ಎಂದು ಪರಿಚಯ ಮಾಡಿಕೊಂಡ. ನನ್ನನ್ನೂ ಊಟಕ್ಕೆ ಕರೆಯುತ್ತಾರೆ ಎಂದು ಕಾದು ಕುಳಿತ.
ಮುಲ್ಲಾ ಒಂದು ಬೋಗುಣಿಯಲ್ಲಿ ನೀರು ತಂದಿಟ್ಟ. “ಇದೇನು?” ಎಂದು ಅಚ್ಚರಿಯಿಂದ ಕೇಳಿದ ಅಭ್ಯಾಗತ. “ಇದು ಬಾತು ಕೋಳಿಯ ಸಾರಿನ ಸಾರಿನ ಸಾರಿನ ಸಾರು. ದಯವಿಟ್ಟು ಊಟಮಾಡಿ” ಎಂದ ಮುಲ್ಲಾ.
——--
ಇಬ್ಬರು ಗೆಳೆಯರು ಕಾಡಿನಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಹಠಾತ್ತನೆ ಎದುರಿಗೆ ಒಂದು ಹುಲಿ ಬರುವುದು ಕಾಣಿಸಿತು. ಹೇಗೆ ಓಡಿದರೂ ಹುಲಿಯಿಂದ ತಪ್ಪಿಸಿಕೊಳ್ಳುವುದು ಸಾಧ್ಯವಿರಲಿಲ್ಲ. ತಕ್ಷಣವೇ ಒಬ್ಬ ತನ್ನ ಕೈ ಚೀಲದಿಂದ ಓಡಲು ಉಪಯೋಗಿಸುವ ಶೂ ತೆಗೆದುಕೊಂಡು ಹಾಕಿಕೊಳ್ಳಲು ಪ್ರಾರಂಭಿಸಿದ. ಭಯದ ನಡುವೆಯೂ ಇನ್ನೊಬ್ಬನಿಗೆ ಇದು ಏಕೋ ಅತಿ ಎನಿಸಿತು. ಆ ಶೂ ಹಾಕಿಕೊಂಡರೆ ಹುಲಿಗಿಂತ ವೇಗವಾಗಿ ಓಡಿ ತಪ್ಪಿಸಿಕೊಳ್ಳಲು ಸಾಧ್ಯಾನ? ದಡ್ಡ” ಎಂದ. ಶೂ ಹಾಕಿ ನಿಂತವನು ಹೇಳಿದ “ಹುಲಿಗಿಂತ ಜೋರಾಗಿ ಓಡೋದು ಬೇಡ. ನಿನಗಿಂತ ಜೋರಾಗಿ ಓಡಿದರೆ ಸಾಕು”
¨ ಇನ್ನಾ
No comments:
Post a Comment