ಜಾಹೀರಾತಿನ ಖರ್ಚಿನ ಲೆಕ್ಕಚಾರದಲ್ಲಿ ಬಿಜೆಪಿ, ಎಲ್ಲಾ ರಾಜಕೀಯ ಪಕ್ಷಗಳಿರಲ್ಲಿ, ದೊಡೊಡ್ಡ ಉದ್ಯಮಿಗಳನ್ನು ಹಿಂದಾಕಿ
ಮೊದಲ ಸ್ಥಾನ ಗಿಟ್ಟಿಸಿಕೊಂಡಿದೆ. ಇದರಿಂದ ಪಾರ್ಟಿಗೆ ಇರುಸು ಮುರುಸು ಅಗಿದ್ಯೋ ಗೊತ್ತಿಲ್ಲ, ಆದರೆ ಪ್ರಜ್ಞಾವಂತರು ಯೋಚಿಸಲೇ ಬೇಕಾದ ವಿಷಯವಿದು. ಒಂದು ಒಳ್ಳೆಯ ಆಡಳಿತ ನೀಡಿದಿದ್ದರೆ ಈ ಪಕ್ಷಕ್ಕೆ ಜಾಹೀರಾತಿನ ಅವಶ್ಯಕತೆ ಇತ್ತಾ? ಜಾಹೀರಾತಿಗಾಗಿ ಖರ್ಚು ಮಾಡಿದ ಸಾವಿರಾರು ಕೋಟಿ ರೂಪಾಯಿಗಳು ಈ ಪಾರ್ಟಿಗೆ ಎಲ್ಲಿಂದ ಬಂತು? ಈ ಸಂದರ್ಭದಲ್ಲಿ ನನ್ನ ಗುರುಗಳು ಹೇಳಿದ ಒಂದು ಸಣ್ಣ ಕಥೆ ನೆನಪಿಗೆ ಬಂತು:
ಒಂದು ಬಿಸ್ಕತ್ತುಗಳ ಉತ್ಪಾದಿಸುವ ಉದ್ಯಮ. ತಾನು ಉತ್ಪಾದಿಸುತ್ತಿದ್ದ ಬಿಸ್ಕತ್ತುಗಳ ಮಾರಾಟ ಕಾಲ ಕ್ರಮೇಣ ಕಡಿಮೆಯಾಗುತ್ತಾ ಉದ್ಯಮದ ಆಡಳಿತಗಾರರನ್ನು ನಿದ್ದೆಗೆಡಿಸುತ್ತದೆ. ಆದ್ದರಿಂದ ಬೇಡಿಕೆ ಹೆಚ್ಚಿಸುವ ತಂತ್ರಗಾರಿಕೆಯ ಹುಡುಕಾಟಕ್ಕೆ ಉದ್ಯಮದ ಪ್ರತಿಯೊಬ್ಬ ಪಾಲುದಾರರಿಗೆ ಸಭೆಯನ್ನು ಕರೆಯಲಾಗುತ್ತದೆ. ಸಭೆಯಲ್ಲಿ ಸೇರಿದ ಎಲ್ಲರಿಗೂ ಉದ್ಯಮವು ಅನುಭವಿಸುತ್ತಿರುವ ಸಮಸ್ಯೆಯ ಬಗ್ಗೆ ವಿವರಿಸಿ ಬೇಡಿಕೆ ಅಥವಾ ಮಾರಾಟ ಹೆಚ್ಚಿಸಲು ಅಹ್ವಾನಿತರಿಂದ ಸಲಹೆ ಸೂಚನೆಗಳನ್ನು ಆಡಳಿತ ಮಂಡಳಿಯು ಆಹ್ವಾನಿಸುತ್ತದೆ.
ನಮ್ಮ ಬಿಸ್ಕೆಟ್ಟುಗಳ wrapper ಅಂದರೆ ಸುತ್ತುಹೊದಿಕೆ ಆಕರ್ಷಕವಾಗಿಲ್ಲ, ತರಾವರಿ ಬಣ್ಣ, ವಿನ್ಯಾಸಗಳಿಂದ ಸುತ್ತುಹೊದಿಕೆಯನ್ನು ಆಕರ್ಷಕವಾಗಿಸಿದರೆ, ಖಂಡಿತವಾಗಿಯೂ ನಮ್ಮ ಬಿಸ್ಕತ್ತುಗಳ ಮಾರಾಟ ಜಾಸ್ತಿಯಾಗುತ್ತದೆ. ಈ ಸಲಹೆಯನ್ನು ಆಡಳಿತ ಮಂಡಳಿಯು ತಕ್ಷಣ ಕಾರ್ಯಗತಗೊಳಿಸುತ್ತದೆ. ತಿಂಗಳ ಮಟ್ಟಿಗೆ ಮಾರಾಟ ಜಾಸ್ತಿಯಾಗಿ ಯಥಾ ಪ್ರಕಾರ ಮಾರಾಟ ಕ್ಷೀಣಿಸಲು ಪ್ರಾರಂಭಿವಾಗುತ್ತದೆ. ಮತ್ತೊಮ್ಮೆ ಸಭೆಯನ್ನು ಕರೆಯಲಾಗಿ, ಮಾರಾಟ ಹೆಚ್ಚಿಸಲು ಸಲಹೆಸೂಚನೆಗಳನ್ನು ಮತ್ತೊಮ್ಮೆ ಕೇಳಲಾಗುತ್ತದೆ. ಸಭೆಯಲ್ಲಿ, ಜಾಹೀರಾತಿನ ಬಗ್ಗೆ ಪ್ರಸ್ತಾಪವಾಗಿ, ನಮ್ಮ ಬಿಸ್ಕೆಟ್ಟುಗಳ ಬಗ್ಗೆ ಸಾಕಾದಷ್ಟು ಜಾಹೀರಾತು ಕೊಟ್ಟಿಲ್ಲ ಆದ್ದರಿಂದ ನಮ್ಮ ಬಿಸ್ಕತ್ತುಗಳ ಬಗ್ಗೆ ಜಾಹೀರಾತುಗಳನ್ನು ಹೆಚ್ಚಿಸೋಣ, ಇದರಿಂದ ಖಂಡಿತವಾಗಿ ನಮ್ಮ ಬಿಸ್ಕತ್ತುಗಳಿಗೆ ಬೇಡಿಕೆ ಹೆಚ್ಚಾಗಿ, ಮಾರಾಟ ಜಾಸ್ತಿಯಾಗುತ್ತದೆ – ಬಂದ ಸಲಹೆಯನ್ನು ತಕ್ಷಣ ಅನುಷ್ಠಾನಗೊಳಿಸುತ್ತಾರೆ ಆಡಳಿತ ಮಂಡಳಿಯವರು. ಜಾಹೀರಾತಿನಿಂದ ಮಾರಾಟ ಜಾಸ್ತಿಯಾಗುತ್ತದೆ. ಆದರೆ ಒಂದು ತಿಂಗಳ ನಂತರ ಪುನಃ ಮಾರಾಟ ಕ್ಷೀಣಿಸ ತೊಡಗುತ್ತದೆ. ಮತ್ತೊಮ್ಮೆ ಸಲಹೆ ಸೂಚನೆಗಳಿಗೆ ಸಭೆಯನ್ನು ಕರೆಯಲಾಗುತ್ತದೆ. ನಮ್ಮ ಬಿಸ್ಕತ್ತುಗಳಿಗೆ ಪ್ರಚಾರ ಕೊಡಲು ರಾಯಭಾರಿಯೇ ಇಲ್ಲ ಅಂದರೆ ಬ್ರ್ಯಾಂಡ್ ಅಂಬಾಸಡರ್ ಇಲ್ಲ. ಖ್ಯಾತ ಚಲನಚಿತ್ರ ನಟಿಯನ್ನು ನಮ್ಮ ಬಿಸ್ಕತ್ತುಗಳ ಉತ್ಪನ್ನಕ್ಕೆ ರಾಯಭಾರಿಯಾಗಿ ನೇಮಿಸಿಕೊಳ್ಳೋಣ ಇದರಿಂದ ಮಾರಾಟ ಹೆಚ್ಚುತ್ತದೆ ಎಂಬ ಸಲಹೆ ಬರುತ್ತದೆ. ಸಲಹೆಯಂತೆ ಖ್ಯಾತ ನಟಿಯನ್ನು ಉದ್ಯಮದ ಉತ್ಪನ್ನಕ್ಕೆ ರಾಯಭಾರಿ ನೇಮಿಸಿಕೊಳ್ಳುತ್ತಾರೆ. ಪರಿಣಾಮವಾಗಿ ಮಾರಾಟ ಇಮ್ಮಡಿಗೊಳ್ಳುತ್ತದೆ. ಆದರೆ ಎರಡು ತಿಂಗಳ ನಂತರ ಮಾರಾಟದ ಪ್ರಮಾಣ ಕಡಿಮೆಯಾಗುತ್ತದೆ. ಆಡಳಿತಮಂಡಳಿಯು ಗೊಂದಲಗೊಂಡು ಮತ್ತೊಮ್ಮೆ ಸಭೆ ಕರೆದು ಸಲಹೆಸೂಚನೆಗಳನ್ನು ಕೇಳಿದಾಗ, ಕೋಣೆಯ ಒಂದು ಮೂಲೆಯಿಂದ ಮೃದು ದನಿಯು ಹೇಳುತ್ತದೆ: ನಮ್ಮ ಬಿಸ್ಕೆಟ್ಟುಗಳನ್ನು ನಾಯಿ ಕೂಡ ಮೂಸಿ ನೋಡುವುದಿಲ್ಲ....!!!
ಆಡಳಿತದ ಗುಣಮಟ್ಟ ಸರಿಯಿದ್ದರೆ ಜನರಿಂದ ಮತ್ತೊಮ್ಮೆ ಆಯ್ಕೆಗೊಳ್ಳಲು ಜಾಹೀರಾತಿನ ಅವಶ್ಯಕತೆಯೇ ಇರುವುದಿಲ್ಲ... ಇದು ಸತ್ಯ.
¨ ಜೋವಿ ಯೇ.ಸ
No comments:
Post a Comment