ಕುಣಿ ಕುಣಿ ಎಂದ ಹಣವು ಕುಣಿಯುತಿಹುದು
ರೈಲು ವೇಗವ ಮೀರಿ
ಒಳಗೂ ಇರದೆ ಮನೆಯಲೂ ಇರದೆ
ಕೊಲೆಗೈಯುತಿದೆ ದಿನವೂ
ನೆಮ್ಮದಿ ತಂಪನೂ ಹಾರಿ
ನಗುವವರೆಷ್ಟೋ ಅಳುವವರೆಷ್ಟೋ
ಹೊಟ್ಟೆ ಕಿಚ್ಚಿನಲಿ ಬದುಕುವ
ಮಿನಿ ಕುಟುಂಬಗಳೆಷ್ಟೊ ರೊಕ್ಕದ
ಬಾಯಿಗೆ ಸಿಕ್ಕ ನೆಮ್ಮದಿ ಬೇರುಗಳೆಷ್ಟೋ
ಬರೆ ಮೂಡುತಿವೆ ಪುಟಾಣಿಗಳಿಗೆ ಬಿಕ್ಷೆಯಾಗಿ
ಸಿಗದ ರೊಕ್ಕಕೆ ಸುತ್ತಾಡಿ
ಅನ್ನದ ಹಸಿವು ಎಲ್ಲಿಹುದೋ
ಬಡವನ ಬೆನ್ನ ಆವರಿಸಿದೆಯೊ
ಚೀಲ ತುಂಬಿ ಸಾಕೆನದ ರೊಕ್ಕದ ಮಾಲಿಕರು
ವೋಟಿನ ಬಿಕ್ಷೆಯಲಿ ಕೈ ಚಾಚುವರೋ
ಬಲಿಯಾದವನೊಬ್ಬನೆ
ವೋಟಿನ ದಾನ ಶೂರ ಕರ್ಣನೆ
ರಾಶಿ ಅನ್ನ ಬೆಳೆದವಗೆ
ಅಗಳು ಅನ್ನ ದೊರಕದೆ
ಸಾಲ ಬಾಧೆಯ ಸುಳಿಗೆ
ಕೊರಳ ಕೊಟ್ಟು ಸಾಯುವ ಕರ್ಣನೆ
ದುಡ್ಡಿನ ಆಮಿಷವನುಂಡ ಬಿಳಿ
ಬಟ್ಟೆಯ ಮಾಲಿಕ
ಬರುವುದುಂಟು ನಿನಗೊಮ್ಮೆ ಕಾಲ
ಅರೆಬೆತ್ತಲೆ ಮೆರವಣಿಗೆಯ ಮೂಲಕ
¨ ಶಿವಮೂರ್ತಿ ಕೆ. ಗುಡದಿನ್ನಿ
¨ ಶಿವಮೂರ್ತಿ ಕೆ. ಗುಡದಿನ್ನಿ
No comments:
Post a Comment