Wednesday, 9 October 2019

ಒಳ್ಳೆಯ ದಿನಗಳ ಬಯಸಿ...


 - ಡೇವಿಡ್ ಕುಮಾರ್. ಎ
ಮನೆ ಮನೆಯ ಮುಂದೆ
’ಅಚ್ಚೇ ದಿನ’ ದ ಫಲಕ,
’ವಿಕಾಸ’ ದ ಭ್ರಾಂತಿ
ಕೋಟಿ ಜನರ ಪುಳಕ 
ಕಾಶ್ಮೀರದ ಕಣಿವೆಯಲಿ
ಕಾಮನ ಬಿಲ್ಲಿಗೂ ಗಲ್ಲು !
’ಸ್ವಾತಂತ್ರ್ಯ’ದ ಹಕ್ಕಿಗಳಿಗೆ
ಬಂಗಾರದ ಪಂಜರ 
ಅನ್ನವಿಲ್ಲದ ನಾಡು
ದೇಶಭಕ್ತಿಯ ಅಮಲು !
ಬಂಡಾಯದ ಬಡಪಾಯಿಗೆ
’ಉಗ್ರ’ನೆಂಬ ಬಿರುದು 
 ಊಟ, ಬಟ್ಟೆಗೂ ಕಾನೂನು
ಬಂಧಿಖಾನೆಯ ಭಯ,
ಸಿಂಹಗಳಿಗೂ ಸಸ್ಯಾಹಾರ
ಜಾರಿಯಾಗಿದೆ ನಿಯಮ !


No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...