Wednesday, 9 October 2019

ಗೀತಾಂಜಲಿಯ ತುಣುಕು


ಕೈದಿಯೇ ಹೇಳು, ನಿನ್ನ ಕಟ್ಟಿಹಾಕಿದವರಾರು? 

’ಅದು ನನ್ನ ಸ್ವಾಮಿ, 

ನಾನಂದುಕೊಂಡಿದ್ದೆ 

ಬಲದಲಿ ಸೌಭಾಗ್ಯದಲಿ 

ನನಗೆ ಸಮನಾರಿಲ್ಲವೆಂದು, 

ನನ್ನೊಡೆಯನಿಗೆ ಸಲ್ಲಬೇಕಾದುದನ್ನೂ 

ನನ್ನ ತಿಜೋರಿಯಲೇ ಇಟ್ಟುಕೊಂಡಿದ್ದೆ. 

ನಿದಿರೆಯೆನ್ನನಾವರಿಸಿದಾಗ, 

ನನ್ನ ಸ್ವಾಮಿಯ ಪಲ್ಲಂಗದಲೇ ಪವಡಿಸಿದೆ, 

ಎಚ್ಚರಾದಾಗ ನಾ ಬಂಧಿಯಾಗಿದ್ದೆ 

ನನ್ನದೇ ಭಂಡಾರದಲಿ’ 

ಎಂದನಾ ಕೈದಿ, 



ಕೈದಿಯೇ ಹೇಳು, 

ಈ ಕಠೋರ ಸರಪಳಿಯಿಂದ ನಿನ್ನ ಕಟ್ಟಿದವರಾರು? 

’ಅದು ನಾನೇ’ ಎಂದನಾ ಕೈದಿ, 

’ಬಲು ಕೌಶಲ್ಯದಿಂದ ಈ ಸರಪಳಿಯ 

ಎರಕ ಹೊಯ್ದವ ನಾನೇ, 

ನಾನಂದುಕೊಂಡಿದ್ದೆ 

ನನ್ನ ಅಪ್ರತಿಮ ಬಲದಿಂದ ಜಗವನ್ನೇ ಕಟ್ಟಿ 

ಬಿಡುಬೀಸಾಗಿರಬಹುದೆಂದು. 

ಅದಕೆಂದೇ ದಿನರಾತ್ರಿಯೂ ದುಡಿದೆ, 

ಕುಲುಮೆಯಲಿ ಬಡಿದೆ. 

ಕೆಲಸವದು ಮುಗಿದಾಗ ಸಂಕೋಲೆ 

ಚೆಲುವಿತ್ತು 

ಬಲಶಾಲಿಯಾಗಿತ್ತು, 

ಆದರೆ ನನ್ನನೇ ಹಿಡಿದಿತ್ತು.’ 

- ಸಿ ಮರಿಜೋಸೆಫ್ 


(ರವೀಂದ್ರನಾಥ ಟ್ಯಾಗೋರರ “Prisoner, tell me, who was it that bound you?” ಪದ್ಯದ ಅನುವಾದ.) 

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...