Sunday, 12 May 2019

ಸಂತ ಯೊವಾನ್ನರ ಶುಭಸಂದೇಶ – 9 - ಸಹೋ. ವಿನಯ್ ಕುಮಾರ್, ಚಿಕ್ಕಮಗಳೂರು


ಯಾವುದೇ ಒಂದು ಬರವಣಿಗೆಯ ಹಿಂದೆ ಅದಕ್ಕೊಂದು ಮೂಲವಿರುತ್ತದೆ. ಈ ಮೂಲ ವಿಷಯ ಇಡೀ ಬರವಣಿಗೆಯ ಒಳಗೆ ಮತ್ತು ಹೊರಗೆ ಹಾಸುಹೊಕ್ಕಿರುತ್ತದೆ. ಇಂದು ನಾವು ಈ ಮೂಲದ ಬಗ್ಗೆ ಹುಡುಕುತ್ತಾ ಯೋವಾನ್ನರ ಶುಭಸಂದೇಶದ ಕುರುಹುಗಳನ್ನು ಹುಡುಕೋಣ. 
ಸಂತ ಯೋವಾನ್ನರ ಶುಭ ಸಂದೇಶದ ಮೂಲ
ಸಾಮಾನ್ಯವಾಗಿ ಈ ಶುಭ ಸಂದೇಶಕ್ಕೆ 6 ಮೂಲಗಳಿವೆ ಎಂದು ಬೈಬಲ್ ವಿದ್ವಾಂಸರು ತಿಳಿಸುತ್ತಾರೆ. 

¨ ಮೂರು ಶುಭ ಸಂದೇಶಗಳ ಮೂಲ. 

¨ ಸಂಕೇತಗಳ/ ಚಿನ್ನೆಗಳ ಮೂಲ. 

¨ ಬಹಿರಂಗಪಡಿಸುವ ಪ್ರವಚನದ ಮೂಲ. 

¨ ಜುದೇಯ ಅಥವಾ ಜೆರುಸಲೇಮಿನ ಮೂಲ. 

¨ ಯಾತನೆ ಮತ್ತು ಪುನರುತ್ಥಾನದ ಮೂಲ. 

¨ ಕಣ್ಣಾರೆ ಕಂಡವನ ಸಾಕ್ಷಿಯ ಮೂಲ. 

1) ಮೂರು ಶುಭ ಸಂದೇಶಗಳ ಮೂಲ: ಶುಭಸಂದೇಶಗಳಾದ ಮತ್ತಾಯ, ಮಾರ್ಕ ಮತ್ತು ಲೂಕರ ಶುಭಸಂದೇಶಗಳ ಸಂಪಾದನೆ ನಾಲ್ಕನೇ ಶುಭ ಸಂದೇಶ ಬರೆಯುವ ಹೊತ್ತಿಗೆ ಆಗಲೇ ಲಭ್ಯವಿತ್ತು. ಬಹುಷ್ಯ ಶುಭಸಂದೇಶದ ಕರ್ತೃವಿಗೆ ಈಗಾಗಲೇ ಈ ಶುಭ ಸಂದೇಶಗಳ ಬಗ್ಗೆ ಮತ್ತು ಇದರ ದೈವಶಾಸ್ತ್ರದ ಬಗ್ಗೆ ಅರಿವು ಇತ್ತು. ಉದಾಹರಣೆ: *ಐದು ಸಾವಿರ ಜನರಿಗೆ ರೊಟ್ಟಿ ಹಂಚಿದನು ಪರಮ ಪ್ರಸಾದದ ಪ್ರವಚನದಲ್ಲಿ ಒಂದಾಗಿರುವುದನ್ನ ನಾವು ಇಲ್ಲಿ ಕಾಣಬಹುದು. ಯೇಸುಸ್ವಾಮಿ ದೇವಾಲಯದ ಶುದ್ಧೀಕರಣವನ್ನುಅವರು ಪ್ರಥಮ ಕಾರ್ಯವನ್ನಾಗಿ ಈ ಶುಭ ಸಂದೇಶದಲ್ಲಿ ಮಾಡುತ್ತಾರೆ, ಆದರೆ ಈ ಸನ್ನಿವೇಶವನ್ನು ನಾವು ಕೊನೆಯ ಗಳಿಗೆಯಲ್ಲಿ ನಾವು ನೋಡಬಹುದು 3 ಶುಭ ಸಂದೇಶಗಳಲ್ಲಿ. 

2) ಸಂಕೇತ ಅಥವಾ ಚಿಹ್ನೆಗಳ ಮೂಲ: ಈ ಶುಭಸಂದೇಶವನ್ನು ಸಾಂಕೇತಿಕ ಶುಭ ಸಂದೇಶ ಎಂದು ಕರೆಯಲಾಗುತ್ತದೆ. ಈ ಸಂಕೇತ ಅಥವಾ ಚಿಹ್ನೆ ಎಂಬ ಪದವು ಪವಾಡ ಅಥವಾ ಅದ್ಭುತ ಪದಕ್ಕೆ ಪರ್ಯಾಯವಾಗಿ ಈ ಶುಭ ಸಂದೇಶದಲ್ಲಿ ಬಳಸಲಾಗಿದೆ. ಈ ಶುಭ ಸಂದೇಶದಲ್ಲಿ ಏಳು ಪ್ರಮುಖ ಮತ್ತು ವಿಶೇಷವಾದ ಚಿಹ್ನೆಗಳಿವೆ. 

i. ನೀರನ್ನು ದ್ರಾಕ್ಷಾರಸವನ್ನಾಗಿ ಮಾರ್ಪಡಿಸಿದ್ದು. 

ii. ಶತಾಧಿಪತಿಯ ಮಗಳ ಸಾಧ್ಯತೆ. 

iii. ಬೆಥ್ಸಾಯಿದ ಕೊಳದ ಬಳಿ ಸೌಖ್ಯತೆ. 

iv. ರೊಟ್ಟಿಯ ಅದ್ಭುತ. 

v. ಯೇಸುಸ್ವಾಮಿ ನೀರ ಮೇಲೆ ನಡೆದದ್ದು. 

vi. ಹುಟ್ಟು ಕುರುಡರಿಗೆ ದೃಷ್ಟಿದಾನ. 

vii. ಲಾಜರನನ್ನು ಸಾವಿನಿಂದ ಎಬ್ಬಿಸಿದ್ದು. 

ಮೊದಲ ಎರಡನ್ನು ಸ್ಪಷ್ಟವಾಗಿ ಸಂಕೇತವನ್ನಾಗಿ ಬಿಂಬಿಸಲಾಗಿದೆ. 2:23;20:30;21:25- ಈ ಸ್ಥಳದಲ್ಲಿ ಸಂಕೇತ ಎನ್ನುವ ಪದವನ್ನು ಬಳಸಲಾಗಿದೆ. ಇದಾಗಲೇ ಯೇಸುಸ್ವಾಮಿ ಮಾಡಿದ ಪವಾಡಗಳ ಸಂಗ್ರಹ ಇದ್ದಿರಬಹುದು, ಅದನ್ನು ಈ ಶುಭ ಸಂದೇಶದ ಕರ್ತೃ ಬಳಸಿರಬಹುದು ಎನ್ನಲಾಗಿದೆ. 

3) ಬಹಿರಂಗಪಡಿಸುವ ಪ್ರವಚನಗಳ ಮೂಲ: ಮೂರು ಶುಭ ಸಂದೇಶಗಳಲ್ಲಿ ನಾವು ನೋಡುವುದಾದರೆ ನಿರೂಪಣೆಯ ಶೈಲಿಯಲ್ಲಿ ಶುಭಸಂದೇಶವನ್ನು ಬರೆಯಲಾಗಿದೆ ಆದರೆ ಇಲ್ಲಿ ನಿರೂಪಣೆಯ ಶೈಲಿಯ ಬದಲು ಪ್ರವಚನದ ಶೈಲಿಯನ್ನು ಬಳಸಲಾಗಿದೆ. ಈ ಶುಭಸಂದೇಶದಲ್ಲಿ ಸಂವಾದ ರೀತಿಯೇ ಹೆಚ್ಚಾಗಿ ಕಂಡು ಬಂದರು ಅದು ಅಂತ್ಯಗೊಳ್ಳುವುದು ಪ್ರವಚನದ ರೀತಿಯಲ್ಲಿ. ಉದಾಹರಣೆ: ಯೇಸುಸ್ವಾಮಿ ಮತ್ತು ನಿಕೋದೆಮನ ಮಧ್ಯೆ ನಡೆಯುವಂತಹ ಸಂವಾದವು, ಸಂವಾದದಿಂದ ಪ್ರಾರಂಭವಾಗಿ ಪ್ರವಚನದಲ್ಲಿ ಅಂತ್ಯಗೊಳ್ಳುತ್ತದೆ. ಯೇಸುಸ್ವಾಮಿ ಮತ್ತು ಸಮಾರಿಯಾದ ಸ್ತ್ರೀ ಸಂವಾದವು ಅಂತ್ಯಗೊಳ್ಳುವುದು ಪ್ರವಚನದ ಮೂಲಕವೇ. 

4) ಜುದೇಯ ಅಥವಾ ಜೆರೂಸಲೇಮಿನ ಮೂಲ: ಸಂತ ಯೋವಾನ್ನರ ಶುಭಸಂದೇಶ ಬೇರೆ ಮೂರು ಶುಭಸಂದೇಶಕ್ಕಿಂತ ಹೆಚ್ಚಾಗಿ ಜೆರುಸಲೇಮಿನಲ್ಲಿ ನಡೆದ ಘಟನೆಗಳ ಬಗ್ಗೆ ಹೆಚ್ಚು ಮಹತ್ವ ನೀಡುತ್ತದೆ. ಎಲ್ಲಾ ಸನ್ನಿವೇಶಗಳು ಜೆರೂಸಲೇಮಿನ ಹಬ್ಬಗಳ ಸುತ್ತ ನಡೆಯುವುದನ್ನು ನಾವು ಕಾಣಬಹುದು. ಪ್ರತಿಯೊಬ್ಬ ಯಹೂದ್ಯ ಗಂಡು ಜೆರುಸಲೇಮಿಗೆ ಮೂರು ಬಾರಿ ಅಥವಾ ವರ್ಷಕ್ಕೆ ಒಂದು ಬಾರಿಯಾದರೂ ಹೋಗಬೇಕಿತ್ತು ಬಹುಷ್ಯ ಈ ಐತಿಹಾಸಿಕ ಹಿನ್ನೆಲೆ ಇದಕ್ಕೆ ಕಾರಣವಿರಬೇಕು. ಈ ಜೆರುಸಲೇಮಿನಲ್ಲಿ ನಡೆದ ಎಲ್ಲಾ ಘಟನೆಗಳ ಸಂಗ್ರಹ ಇದ್ದಿರಬೇಕು ಅದನ್ನೇ ಈ ಶುಭ ಸಂದೇಶದ ಕರ್ತೃ ಬಳಸಿ ಕೊಂಡಿರಬೇಕು. 


5) ಯಾತನೆ ಮತ್ತು ಪುನರುತ್ಥಾನದ ಮೂಲ: ಶುಭಸಂದೇಶದ ರಚನೆಯ ಬಗ್ಗೆ ನಾನಾಗಲೇ ನೋಡಿದಂತೆ ಎಲ್ಲಾ ಪುಸ್ತಕಗಳ ರೀತಿಯಲ್ಲಿ ಇದು ಮುಂದೆಯಿಂದ ರಚಿತವಾಗಿಲ್ಲ ಅಂದರೆ ಈಗ ನಾವು ನೋಡುವ ರೀತಿಯಲ್ಲಿ ಯೇಸುಸ್ವಾಮಿಯ ಜನನ, ಜೀವನ, ಮರಣ ಮತ್ತು ಪುನರುತ್ತಾನ ಕ್ರಮದಂತೆ ರಚಿತವಾಗಿಲ್ಲ, ಅದರ ಬದಲಾಗಿ ಪುನರುತ್ಥಾನದಿಂದ ರಚನೆಯಾದದ್ದು. ಈ ಶುಭ ಸಂದೇಶ ಕರ್ತೃ ಈ ಯಾತನೆ ಮತ್ತು ಪುನರುತ್ಥಾನದ ಸಂಗ್ರಹವನ್ನು ಆಧರಿಸಿ ಬರೆದಿರಬಹುದು. ಆದರೆ ಈ ಶುಭ ಸಂದೇಶವು ಯಾತನೆ ಮತ್ತು ಪುನರುತ್ಥಾನದ ಪ್ರಸಂಗವನ್ನು ಬೇರೆ ಮೂರು ಶುಭ ಸಂದೇಶಕ್ಕಿಂತ ಕೊಂಚ ಭಿನ್ನವಾಗಿ ಬರೆದಿದೆ. ಇದು ಕಾಲಗಣನೆ ಮತ್ತು ದೈವ ಶಾಸ್ತ್ರದಲ್ಲಿಯೂ ವಿಭಿನ್ನವಾಗಿದೆ. ಕೇವಲ ಒಂದೇ ಮೂಲವನ್ನು ಬಳಸಿ ತನ್ನದೇ ಆದಂತಹ ರೂಪ ಮತ್ತು ಶೈಲಿಯನ್ನು ಇದಕ್ಕೆ ಸೇರಿಸಿದ್ದಾರೆ ಎನ್ನಲಾಗುತ್ತದೆ. 

6) ಕಣ್ಣಾರೆ ಕಂಡವನ ಸಾಕ್ಷಿಯ ಮೂಲ: ನಾವು ಸಂತ ಯೋವಾನ್ನನ ಶುಭ ಸಂದೇಶದಲ್ಲಿ ಕೆಲವು ಕಡೆಗಳಲ್ಲಿ ನೋಡುತ್ತೇವೆ ಇದು ಕಣ್ಣಾರೆ ಕಂಡವನ ಹೇಳಿಕೆ ಎಂದು ಮತ್ತು ಕಣ್ಣಾರೆ ಕಂಡವನ ಸಾಕ್ಷಿ ಎಂದು ಬರೆಯಲಾಗಿದೆ, ಇದರಿಂದ ನಮಗೆ ತಿಳಿಯುತ್ತದೆ ಇದನ್ನೆಲ್ಲಾ ಕಣ್ಣಾರೆ ಕಂಡವನ ಸಾಕ್ಷಿಯ ಮೂಲದಿಂದ ಬರೆದದ್ದು ಎಂದು. ಇವೆಲ್ಲವೂ ಒಂದು ಕಲ್ಪನೆ ಏಕೆಂದರೆ ನಮಗೆ ಸಾಕ್ಷಿ ಇದರ ಬಗ್ಗೆ ದೊರೆತಿಲ್ಲ. 





No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...