Sunday, 12 May 2019

ಮೌನದ ದನಿ - ¨ ಜೀವಸೆಲೆ



ನಿನ್ನ ಮಾರಾಟ ಮಾಡಿದ್ದು
ಜೂದಾಸ್ ಮಾತ್ರವಲ್ಲ
ನಾನು ಕೂಡ
ನನ್ನ ವಿಶ್ವಾಸವನ್ನು
ಪ್ರೀತಿಯನ್ನು
ಸಂಬಂಧಗಳನ್ನು
ತತ್ವ ನಿಲ್ಲುವುಗಳನ್ನು
ಮೌಲ್ಯಗಳನ್ನು
ಲೌಕಿಕ ಲಾಭಕ್ಕೆ ಆಗಾಗ
ಮಾರಾಟ ಮಾಡುತ್ತಿರುತ್ತೇನೆ
-------

ಕತ್ತಲೆಯು ಮನಸ್ಸನ್ನು
ಆವರಿಸಿಕೊಂಡಾಗ
ಸತ್ಯವು ಕಾಣದಾಗದು
---------

ಒಬ್ಬ ರಾಜಾಸನದಿಂದ
ಅಧಿಕಾರ ಮಾಡಲು
ಹಾತೊರೆದರೆ
ಇನ್ನೊಬ್ಬ
ಶಿಲುಬೆ ಮರದಲ್ಲಿ ತೂಗಾಡುತ್ತಾ
ಜನರನ್ನು ಪ್ರೀತಿಸಲು ಕಲಿಸಿದ
----------

ಅವಮಾನದ ಶಿಲುಬೆ ಮರ
ಕ್ರಿಸ್ತನ ಪ್ರೀತಿಯ ರಕ್ತದಿಂದ
ರಕ್ಷಣೆಯ ಮೂಲವಾಯಿತ್ತು
----------

ಪೇತ್ರನಲ್ಲಿ ಭಯ
ಜೂದಾಸ್ನಲ್ಲಿ ಕ್ರೌರ್ಯ
ಪಿಲಾತನಲ್ಲಿ ಅಧಿಕಾರ ದಾಹ
ಯಾಜಕರಲ್ಲಿ ದ್ವೇಷ, ತಳಮಳ
ಇವುಗಳೆನ್ನೆಲ್ಲಾ ನುಂಗಿಬಿಡುವ ಕ್ರಿಸ್ತನಲ್ಲಿ
ಇದುದ್ದು ಪ್ರೀತಿ ಮಾತ್ರ





No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...