ಬಂದನೋ ಬಂದನೋ. ಯೇಸುಸ್ವಾಮಿ ಎದ್ದು ಬಂದನೋ
ಬಂದನೋ ಬಂದನೋ. ಯೇಸುಸ್ವಾಮಿ ಎದ್ದು ಬಂದನೋ
||ಪಲ್ಲವಿ||
ಎದ್ದನೋ ಎದ್ದನೋ, ಸಮಾಧಿ ಬಿಟ್ಟು ಎದ್ದು ಬಂದನೋ
ಎದ್ದನೋ ಎದ್ದನೋ, ಯೇಸುಸ್ವಾಮಿ ಎದ್ದು ಬಂದನೋ
||ಪಲ್ಲವಿ||
ಬಿದ್ದನೋ ಬಿದ್ದನೋ, ಜವರಾಯನು ಬಿದ್ದು ಬಿಟ್ಟನೋ
ಬಿದ್ದನೋ ಬಿದ್ದನೋ, ಮಕಾಡೆಯಾಗಿ ಬಿದ್ದು ಬಿಟ್ಟನೋ
||ಪಲ್ಲವಿ||
ಗೆದ್ದನೋ ಗೆದ್ದನೋ, ಯೇಸುಸ್ವಾಮಿ ಗೆದ್ದು ಬಿಟ್ಟನೋ
ಗೆದ್ದನೋ ಗೆದ್ದನೋ ಜವರಾಯನನ್ನ ಗೆದ್ದು ಬಿಟ್ಟನೋ
||ಪಲ್ಲವಿ||
ಹುಟ್ಟು ಸಾವ ಮಧ್ಯದ ಕಿರಿಬಾಳಲಿ ಯೇಸುಸ್ವಾಮಿಯೋ
ನ್ಯಾಯ, ನೀತಿ, ಬದುಕ ಪ್ರೀತಿ, ಧರ್ಮವ ಕಲಿಸಿದನೋ |
|ಪಲ್ಲವಿ||
ನರರ ಬಣ್ಣಭಾವಗಳಲಿ, ಬೇಧವನು ಎಣಿಸಬೇಡಿರೋ
ಧರೆಯ ನರರೆಲ್ಲಾ, ಒಂದೇ ಜೀವ ಎಂದು ನುಡಿದನೋ
||ಪಲ್ಲವಿ||
ಸಗ್ಗದ ಸರ್ವೇಶ್ವರನ, ತಂದೆಯೇ ಎಂದು ಕರೆದನೋ
ಪಿತನ ಸುತನು, ಜನರೆಲ್ಲಾ, ಒಂದೆ ಮಂದೆ ಎಂದನೋ
||ಪಲ್ಲವಿ||
ದುಗ್ಗಾಣಿಗೆ ಗತಿಯಿಲ್ಲದ ಬಡವರು ಬಲ್ಲಿದರೆಂದನೋ
ನಾಕದ ಭಾರಿ ಬಾಗಿಲ ಅಗಳಿಯ ತೆರೆದು ಇರಿಸಿದನೋ
||ಪಲ್ಲವಿ||
ಸಿರಿವಂತರಿಗೋ, ಸಗ್ಗದ ಹೆಬ್ಬಾಗಿಲು ಸೂಜಿಯ ಕಣ್ಣೋ
ಬಡಬಗ್ಗರಿಗೋ, ನೀರುಕುಡಿದಂದದಿ ಸಲೀಸು ಎಂದನೋ
|ಪಲ್ಲವಿ||
ಬಡವಿಧವೆಯ ಪುಡಿಗಾಸು, ಹುಂಡಿ ತುಂಬುವ ಕನಕವೋ
ಊಟ ಮಾಡುವನಿಗಿಂತ ಬಡಿಸುವವ ಹೆಚ್ಚಾದವನೆಂದನೋ
||ಪಲ್ಲವಿ||
ವ್ಯಭಿಚಾರ, ಪರನಿಂದೆ, ನರಹತ್ಯೆ, ಕಳವು ಬೇಡವೆಂದನೋ
ತಂದೆತಾಯ ಗೌರವಿಸು, ಧನಕನಕ ಕೂಡಿಡಬೇಡ ಎಂದನೋ
||ಪಲ್ಲವಿ||
ಕಡೆಯಲಿ ಬಂದವರಲಿ, ಕೆಲವರು ಮೊದಲಿಗರಾಗುವರೋ
ಮೊದಲು ಬಂದವರಲಿ, ಕೆಲವರು ಕಡೆಯವರಾಗುವರೆಂದನೊ
||ಪಲ್ಲವಿ||
ಬೆಸ್ತರ, ಸುಂಕದವರ, ಸೂಳೆಯರನು ತನ್ನವರೆಂದನೊ,
ಅಂತ್ಯಜರು, ಅಸ್ಪೃಶ್ಯರು ಸರ್ವೇಶ್ವರನ ಮಕ್ಕಳೆಂದನೋ
||ಪಲ್ಲವಿ||
ಸಿದ್ಧಪ್ರವಾದಿಗಳ ಕಾಲಜ್ಞಾನ ಇತ್ತ ಭರವಸೆಯಂತೆಯೇ
ಪಿತನ ಒಡಂಬಡಿಕೆಯಂತೆಯೇ, ಧರೆಗಿಳಿದು ಬಂದನೋ
||ಪಲ್ಲವಿ||
ಬಂದ ಕಾಯಕದಂತೆ ನೊಂದವರ ನೋವ ಕಳೆದನೋ
ಸಂದ ಪಾಪ ಸಂಭಾವನೆಯ ಮರಣವ ಗೆದ್ದು ನಿಂತನೋ
||ಪಲ್ಲವಿ||
ಯೇಸುಸ್ವಾಮಿಯೊಂದಿಗೆ ನಾವು ಮರಣ ಹೊಂದಿದರೋ
ಜೀವಿಸುವೆವು ಸತತ ಸ್ವಾಮಿಯೊಂದಿಗೆ ವಿಶ್ವಾಸದಿಂದಲೋ
||ಪಲ್ಲವಿ||
ಬಂದನೋ ಬಂದನೋ. ಯೇಸುಸ್ವಾಮಿ ಎದ್ದು ಬಂದನೋ
||ಪಲ್ಲವಿ||
ಎದ್ದನೋ ಎದ್ದನೋ, ಸಮಾಧಿ ಬಿಟ್ಟು ಎದ್ದು ಬಂದನೋ
ಎದ್ದನೋ ಎದ್ದನೋ, ಯೇಸುಸ್ವಾಮಿ ಎದ್ದು ಬಂದನೋ
||ಪಲ್ಲವಿ||
ಬಿದ್ದನೋ ಬಿದ್ದನೋ, ಜವರಾಯನು ಬಿದ್ದು ಬಿಟ್ಟನೋ
ಬಿದ್ದನೋ ಬಿದ್ದನೋ, ಮಕಾಡೆಯಾಗಿ ಬಿದ್ದು ಬಿಟ್ಟನೋ
||ಪಲ್ಲವಿ||
ಗೆದ್ದನೋ ಗೆದ್ದನೋ, ಯೇಸುಸ್ವಾಮಿ ಗೆದ್ದು ಬಿಟ್ಟನೋ
ಗೆದ್ದನೋ ಗೆದ್ದನೋ ಜವರಾಯನನ್ನ ಗೆದ್ದು ಬಿಟ್ಟನೋ
||ಪಲ್ಲವಿ||
ಹುಟ್ಟು ಸಾವ ಮಧ್ಯದ ಕಿರಿಬಾಳಲಿ ಯೇಸುಸ್ವಾಮಿಯೋ
ನ್ಯಾಯ, ನೀತಿ, ಬದುಕ ಪ್ರೀತಿ, ಧರ್ಮವ ಕಲಿಸಿದನೋ |
|ಪಲ್ಲವಿ||
ನರರ ಬಣ್ಣಭಾವಗಳಲಿ, ಬೇಧವನು ಎಣಿಸಬೇಡಿರೋ
ಧರೆಯ ನರರೆಲ್ಲಾ, ಒಂದೇ ಜೀವ ಎಂದು ನುಡಿದನೋ
||ಪಲ್ಲವಿ||
ಸಗ್ಗದ ಸರ್ವೇಶ್ವರನ, ತಂದೆಯೇ ಎಂದು ಕರೆದನೋ
ಪಿತನ ಸುತನು, ಜನರೆಲ್ಲಾ, ಒಂದೆ ಮಂದೆ ಎಂದನೋ
||ಪಲ್ಲವಿ||
ದುಗ್ಗಾಣಿಗೆ ಗತಿಯಿಲ್ಲದ ಬಡವರು ಬಲ್ಲಿದರೆಂದನೋ
ನಾಕದ ಭಾರಿ ಬಾಗಿಲ ಅಗಳಿಯ ತೆರೆದು ಇರಿಸಿದನೋ
||ಪಲ್ಲವಿ||
ಸಿರಿವಂತರಿಗೋ, ಸಗ್ಗದ ಹೆಬ್ಬಾಗಿಲು ಸೂಜಿಯ ಕಣ್ಣೋ
ಬಡಬಗ್ಗರಿಗೋ, ನೀರುಕುಡಿದಂದದಿ ಸಲೀಸು ಎಂದನೋ
|ಪಲ್ಲವಿ||
ಬಡವಿಧವೆಯ ಪುಡಿಗಾಸು, ಹುಂಡಿ ತುಂಬುವ ಕನಕವೋ
ಊಟ ಮಾಡುವನಿಗಿಂತ ಬಡಿಸುವವ ಹೆಚ್ಚಾದವನೆಂದನೋ
||ಪಲ್ಲವಿ||
ವ್ಯಭಿಚಾರ, ಪರನಿಂದೆ, ನರಹತ್ಯೆ, ಕಳವು ಬೇಡವೆಂದನೋ
ತಂದೆತಾಯ ಗೌರವಿಸು, ಧನಕನಕ ಕೂಡಿಡಬೇಡ ಎಂದನೋ
||ಪಲ್ಲವಿ||
ಕಡೆಯಲಿ ಬಂದವರಲಿ, ಕೆಲವರು ಮೊದಲಿಗರಾಗುವರೋ
ಮೊದಲು ಬಂದವರಲಿ, ಕೆಲವರು ಕಡೆಯವರಾಗುವರೆಂದನೊ
||ಪಲ್ಲವಿ||
ಬೆಸ್ತರ, ಸುಂಕದವರ, ಸೂಳೆಯರನು ತನ್ನವರೆಂದನೊ,
ಅಂತ್ಯಜರು, ಅಸ್ಪೃಶ್ಯರು ಸರ್ವೇಶ್ವರನ ಮಕ್ಕಳೆಂದನೋ
||ಪಲ್ಲವಿ||
ಸಿದ್ಧಪ್ರವಾದಿಗಳ ಕಾಲಜ್ಞಾನ ಇತ್ತ ಭರವಸೆಯಂತೆಯೇ
ಪಿತನ ಒಡಂಬಡಿಕೆಯಂತೆಯೇ, ಧರೆಗಿಳಿದು ಬಂದನೋ
||ಪಲ್ಲವಿ||
ಬಂದ ಕಾಯಕದಂತೆ ನೊಂದವರ ನೋವ ಕಳೆದನೋ
ಸಂದ ಪಾಪ ಸಂಭಾವನೆಯ ಮರಣವ ಗೆದ್ದು ನಿಂತನೋ
||ಪಲ್ಲವಿ||
ಯೇಸುಸ್ವಾಮಿಯೊಂದಿಗೆ ನಾವು ಮರಣ ಹೊಂದಿದರೋ
ಜೀವಿಸುವೆವು ಸತತ ಸ್ವಾಮಿಯೊಂದಿಗೆ ವಿಶ್ವಾಸದಿಂದಲೋ
||ಪಲ್ಲವಿ||
No comments:
Post a Comment