Tuesday, 14 May 2019

ಮತಗಟ್ಟೆಯ ಮಸಿ


ಡೇವಿಡ್ ಕುಮಾರ್. ಎ. 


ಮತಗಟ್ಟೆಯ ಕಪ್ಪು ಮಸಿಯು 

ಬೆರಳ ತುದಿಯ ನೆಕ್ಕಿದೆ 

ಕನಸ ’ಗುಂಡಿ’ ಒತ್ತಿ ಬಂದ 

ಭ್ರಮನಿರಸನ ನಗೆಯಲಿ 


ನಿರಂಕುಶ ಕಪಿಮುಷ್ಠಿಯು 

ಜನರ ಕೊರಳು ಹಿಸುಕಿದೆ 

ಕೋಮು ವಿಷದ ಘಟಸರ್ಪವು 

ಬೆರಳ ತುದಿಯ ಕಚ್ಚಿದೆ ! 


ಜನಾಧಿಕಾರ ಕೋಟೆಯೊಳಗೆ 

ಸರ್ವಾಧಿಕಾರ ನುಸುಳಿದೆ 

ಪ್ರಜಾತತ್ವ ಹೆಬ್ಬಾಗಿಲಿಗೆ 

ಮಸಿಯ ರಾಶಿ ಸುರಿದಿದೆ 


ಕೊರಳಿಗಿರದ ಸ್ವಾತಂತ್ರ್ಯವು 

ಬೆರಳ ತುದಿಗೆ ಬರುವುದೇ ? 

ಮರುಳು, ಮೋಡಿ ಕಾಡಿನಲಿ 

ಉರುಳು ಬಿಗಿದ ನವಿಲುಗಳು ! 

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...