- ಆಜು
ನನ್ನಲ್ಲಿ ನಿಮ್ಮನು ನೀವು ಕಾಣದಿರಬಹುದು. ಆದರೆ ಪ್ರತಿನಿತ್ಯ ನಿಮ್ಮಲ್ಲಿ ನಾನು ನನ್ನನ್ನು ಕಾಣುತ್ತೇನೆ. ಹೇಗೆ ಎಂದು ಯೋಚಿಸಬೇಡಿ ಮುಂದೆ ನಿಮಗೇ ತಿಳಿಯುತ್ತದೆ. ಅದಕ್ಕೂ ಮುಂಚೆ ನನ್ನ ಮೇಲಿನ ನನ್ನ ಅಭಿಪ್ರಾಯ ತಿಳಿಸಿದರೆ ನಿಮ್ಮ ಮೇಲಿನ ನನ್ನ ಅಭಿಪ್ರಾಯ ಏನೆಂಬುದು ನಿಮಗೂ ತಿಳಿದರೂ ತಿಳಿಯಬಹುದು. ನಾನು ನನ್ನ ಬಗ್ಗೆ ಮಾತಾಡಲು ಹೊರಟಾಗ ನನ್ನ ಮುಂದೆ ಸದಾ ಸಿದ್ದವಾಗಿ ಎದುರಾಗುವ ಪ್ರಶ್ನೆ "ನಾನು ಯಾರು". ಕೆಲವೊಮ್ಮೆ ಪ್ರಶ್ನೆಗಳು ಎಷ್ಟು ಸುಲಭವಾಗಿ ಕಂಡರೂ ಅದಕ್ಕೆ ಬೇಕಾದ ಉತ್ತರ ಕಠಿಣ ಹಾಗೂ ನಿಗೂಢ.
ಈ ಪ್ರಶ್ನೆ ನನಗೇನು ಹೊಸದಲ್ಲ ಎಷ್ಟೋ ಮಂದಿಯ ಈ ಪ್ರಶ್ನೆಗೆ ನಾನು ಈಗಾಗಲೇ ಉತ್ತರಿಸಿದ್ದೀನಿ. ಆ ಉತ್ತರಗಳಲ್ಲಿ ನಾನು "ನನ್ನ ಅಪ್ಪನ ಮಗನಾಗಿದ್ದೆ" "ಅಜ್ಜಿಯ ಮೊಮ್ಮಗನಾಗಿದ್ದೆ" "ಯಾರದೋ ಗೆಳೆಯನಾಗಿದ್ದೆ "ಮುಂದೆ "ನನ್ನ ಮಡದಿಯ ಗಂಡನಾಗುತ್ತೇನೆ"! ಕೆಲವೊಮ್ಮೆ"ನನ್ನ ಜಾತಿಯ ನಾನಾಗಿದ್ದೇನೆ" ಹಾಗಾಗ "ನನ್ನ ರಾಜಕೀಯ ಪಕ್ಷದವ" ಆಗಿದ್ದೇನೆ. ಆದರೆ ಇದು ಯಾವುದೂ ನನ್ನನ್ನು ಮಾತ್ರ ಪರಿಚಯಿಸದೆ, ನನ್ನ ಜೊತೆಯವರನ್ನು, ನನ್ನ ಜಾತಿಯನ್ನು ಪರಿಚಯಿಸುತ್ತದೆ. ಆದರೆ ಇಲ್ಲಿನ ಪ್ರಶ್ನೆ ನನ್ನನ್ನು ಮಾತ್ರ ಕೇಳುತ್ತಿದೆ.
ಹಾಗಾದರೆ ನಾನ್ಯಾರು? ನಾನು ಯಾರು ಎಂದು ತಿಳಿಯದ ನಾನು. ಇನ್ನು ಹೇಗೆ ನಿಮ್ಮನ್ನು ತಿಳಿಯಲಿ? ನಿಮ್ಮನ್ನು ತಿಳಿಯದ ನಾನು ಹೇಗೆ ನನ್ನನ್ನು ತಿಳಿಯಲಿ? ನನ್ನನೇ ತಿಳಿಯದ ನನ್ನಿಂದ ನೀವು ನಿಮ್ಮನ್ನು ಹೇಗೆ ತಿಳಿಯುವಿರಿ? ಇದಕ್ಕೇ ಇರಬೇಕು ಕ್ರಿಸ್ತ "ಜನ ತನ್ನನ್ನು ಯಾರೆಂದು ತಿಳಿಯುತ್ತಾರೆ" ಎಂದು ಶಿಷ್ಯರಿಂದ ತಿಳಿದುಕೊಂಡದ್ದು. ಜನ ತನ್ನನ್ನು ಏನೆಂದು ತಿಳಿಯುತ್ತಾರೆ ಎಂದು ತಿಳಿದೇ ಆ ಜನರನ್ನು ಅವನು ಅರಿತದ್ದು. (ತಿಳಿದುಕೊಂಡಿದ್ದರಿಂದಲೇ ಬಹುಶಃ ಅವನನ್ನು ಶಿಲುಬೆಗೇರಿಸಲು ಆ ಜನ ಮುಂದಾದದ್ದು). ಇಷ್ಟೆಲ್ಲಾ ಯೋಜನೆಗಳು ಶುರುವಾದದ್ದು ಕೇವಲ "ನಾನು" ಎಂಬುದರಿಂದ.
ಈ ಪ್ರಶ್ನೆಯ ಹುಡುಕಾಟದಲ್ಲಿ ಮುಕ್ತಾಯ ಶುರುವಿನಲ್ಲಿಯೇ ಎಂದು ತಿಳಿದ್ದಿದರೂ ಮತ್ತೆ ಶುರು ಮಾಡುತ್ತೇವೆ ಮತ್ತೆ ಶುರುವಿನಲ್ಲೇ ಬಂದು ನಿಲ್ಲುತ್ತೇವೆ. ಇಷ್ಟೆಲ್ಲಾ ಹೇಳಿದ ನನಗೀಗ ಕನಕದಾಸರ "ನಾನು ಹೋದರೆ ಹೋದೇನು" ಎಂಬ ಮಾತುಗಳು ನೆನಪಾಗುತ್ತಿವೆ.
ಇದು ನಿಮಗೂ ತಿಳಿದಿರುವ ಕಥೆಯೇ ಆದರೂ ಮತ್ತೆ ಹೇಳುವ ನನ್ನ ಉದ್ದಟತನವನ್ನು ಸಹಿಸಿಕೊಳ್ಳಿ. ಒಮ್ಮೆ ವ್ಯಾಸರಾಜರ ಶಿಷ್ಯ ಕೂಟದಲ್ಲಿ ಯಾರು ಸ್ವಗ9ಕ್ಕೆ ಹೋಗುವೆವು ಎಂಬ ಚಚೆ9 ಎದ್ದಾಗ ಎಲ್ಲರೂ ನಾನು ನಾನು ಶ್ರೇಷ್ಠನೆಂದು ಹೇಳುತ್ತಿದಾಗ, ಕನಕದಾಸರು ಮಾತ್ರ ಸುಮ್ಮನಿರುವುದನ್ನು ಕಂಡ ಗುರುಗಳು ಕನಕನ ಕುರಿತು "ಏಕೆ ಕನಕ ನೀನು ಸ್ವಗ9ಕ್ಕೆ ಹೋಗುವುದಿಲ್ಲವೆ "ಎಂದು ಕೇಳಿದರು. ಆಗ ಕನಕ "ನಾನು ಹೋದರೆ ಹೋದೇನು"ಎಂದು ಹೇಳುತ್ತಾರೆ. ಅಂದರೆ "ನಾನು" ಎಂಬ ಭಾವನೆ ನನ್ನನ್ನು ಬಿಟ್ಟು ಹೋದರೆ ಹೋಗುತ್ತೇನೆ ಎಂದು.
ಆದರೆ ನಾನು ಎಂಬುದನ್ನು ಬಿಡಲು ಸಾಧ್ಯವೇ? ಬಿಟ್ಟರೂ ಅದು ನಮ್ಮನ್ನು ಬಿಡುತ್ತದೆಯೆ? ನನ್ನನ್ನು ಬಿಡದ ನಾನು ನಿಮ್ಮನ್ನು ಬಿಡುವುದೇ? ಈ ನಾನು ಎಂಬುದರ ಸಂತತಿಗಳಾದ ನನ್ನದು, ನನ್ನ ಆಸ್ತಿ, ನನ್ನ ಮನೆ, ನನ್ನ ಜಾತಿ ಇವನ್ನೆಲ್ಲ ಹೇಗೆ ಬಿಡಲು ಸಾಧ್ಯ. ನಿಶ್ಚಿತವಾಗಿ ಇಲ್ಲ, ಇದು ನಮ್ಮಿಂದ ಆಗದು.
ಇಂತಹ ಸ್ವಾಥ9 ತುಂಬಿರುವ ನಮ್ಮಲ್ಲಿ ಹೇಗೆ ತಾನೆ "ನಮ್ಮಂತೆಯೆ ಪರರರನ್ನು ಪ್ರೀತಿಸಲು ಸಾಧ್ಯ" ಪರರನ್ನು ಪ್ರೀತಿಸದ ಹೊರತು, ಪರಮಾತ್ಮನ ನಿಮಿತ್ತವನ್ನು ನಡೆಸಲು ಸಾಧ್ಯ, ಅವನನ್ನು ಸೇರಲು ಸಾಧ್ಯ, ನಾನರಿಯೆ, ಏಕೆಂದರೆ "ನಿಮ್ಮಲ್ಲಿ ನಾನೂ ಒಬ್ಬ"
***********
No comments:
Post a Comment