Friday, 6 September 2019

ಗೀತಾಂಜಲಿಯ ತುಣುಕು

ನೀ ಹೇಗೆ ಹಾಡುವೆಯೋ ನಾನರಿಯೆ ಗುರುವೇ!

ಮೌನ ಸೋಜಿಗದಿ ನಾನದಕೆ ಕಿವಿಯಾಗುವೆ.

ನಿನ್ನ ರಾಗವದು ಜಗವ ಬೆಳಗುತಿಹುದು.

ಆ ಗಾನದ ಜೀವದುಸಿರು ಗಗನದಿಂ ಗಗನಕೆ ನೆಗೆಯುತಿಹುದು.

ನಿನ್ನ ಹಾಡೆಂಬ ಪವಿತ್ರ ಝರಿಯು

ಬಂಡೆಗಳನೆಲ್ಲ ಕೊರೆದು ಮುನ್ನುಗ್ಗುತಿಹುದು.

ನಿನ್ನ ನಾದದಲಿ ಬೆರೆಯಲು ನನ್ನಾತ್ಮ ಹಾತೊರೆದರೂ,

ಸ್ವರವೆತ್ತಲು ತಿಣುಕಿ ಸೋಲುತಿಹೆ.

ಬಾಯ್ದೆರೆವೆನಾದರೂ ಮಾತು ಹಾಡಾಗದೆ ಗೊಂದಲದಿಕಿರುಲುತಿಹೆ.

ಅಯ್ಯೋ!ಸ್ವಾಮೀ!ನಿನ್ನ ಗೀತೆಯ ಕೊನೆಯಿರದ ಜಾಲಂದ್ರದೊಳೆನ್ನ

ಗುಂಡಿಗೆಯ ಬಂಧಿಯಾಗಿಸಿಹೆ.


· ಅನುವಾದ: ಸಿ ಮರಿಜೋಸೆಫ್

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...