ಝರಿಯು ಉಕ್ಕಿ ಹರಿದಿದೆ
ಮಣ್ಣ ಮೈಯ ಕುಕ್ಕಿದೆ
ಮೂಲ ಜಾಡ ಹುಡುಕಿದೆ
ತೊರೆಯು ಮೊರೆದು ಉಬ್ಬಿದೆ
ಅತಿಕ್ರಮಣದ ಗಾಯಕೆ
ಮತಿಭ್ರಮಣೆಯ ಆಟಕೆ
ಕೆರೆಯು ತುಂಬಿ ತುಳುಕಿದೆ
ಹೊಟ್ಟೆಯೊಳಗೆ ಹೂಳಿದೆ
ಆಸು-ಪಾಸು ವಿಷವಿದೆ
ಹೊಳೆಯ ರಭಸ ಹೆಚ್ಚಿದೆ
ಕೊಳೆಯ ಕೊಚ್ಚಿ ತಂದಿದೆ
ಮಳೆಯ ರುದ್ರ ಕುಣಿತಕೆ
ಕಡಲ ಒಡಲು ಸಿಡಿದಿದೆ
ಒಳಗೊಳಗೆ ಕುದಿಯಿದೆ
ಅಂತ್ಯ ನಿಗಧಿಯಾಗಿದೆ
¨ ಡೇವಿಡ್ ಕುಮಾರ್. ಎ
ಮಣ್ಣ ಮೈಯ ಕುಕ್ಕಿದೆ
ಮೂಲ ಜಾಡ ಹುಡುಕಿದೆ
ತೊರೆಯು ಮೊರೆದು ಉಬ್ಬಿದೆ
ಅತಿಕ್ರಮಣದ ಗಾಯಕೆ
ಮತಿಭ್ರಮಣೆಯ ಆಟಕೆ
ಕೆರೆಯು ತುಂಬಿ ತುಳುಕಿದೆ
ಹೊಟ್ಟೆಯೊಳಗೆ ಹೂಳಿದೆ
ಆಸು-ಪಾಸು ವಿಷವಿದೆ
ಹೊಳೆಯ ರಭಸ ಹೆಚ್ಚಿದೆ
ಕೊಳೆಯ ಕೊಚ್ಚಿ ತಂದಿದೆ
ಮಳೆಯ ರುದ್ರ ಕುಣಿತಕೆ
ಕಡಲ ಒಡಲು ಸಿಡಿದಿದೆ
ಒಳಗೊಳಗೆ ಕುದಿಯಿದೆ
ಅಂತ್ಯ ನಿಗಧಿಯಾಗಿದೆ
¨ ಡೇವಿಡ್ ಕುಮಾರ್. ಎ
No comments:
Post a Comment