Tuesday, 24 April 2018

ವಸಂತ ಸಂತ



ಪಾದ್ವದ ಪರಿಮಳವೇ,
ಹಲಸೂರಿನ ಮಣ್ಣಿನಲ್ಲಿದೆ.
ಈ ಮಣ್ಣ ಪ್ರತಿಕಣಕಣದಲ್ಲೂ
ಆ ಸಂತನ ವರದಾನವಿದೆ!
"ಬಾರಯ್ಯಾ ಬಾ ಯಾತ್ರಿಕನೇ,
ಹೂತಂಪನೆಯ ನೆರಳು ಇವನೇ!
ಬಾರಯ್ಯಾ ಬಾ ಯಾತ್ರಿಕನೇ,
ಜಗದ ಸಂತನಿವನು ಸಾತ್ವಿಕನೇ!"
ನದಿಯಾಳದ ಮೀನಿಗೂ,
ಬುದ್ಧಿ ಮರೆತ ಪ್ರಾಣಿಗೂ,
ಜೀವವಾಣಿ ಕೇಳಿಸಿದ ಸಂತ.
ಹುಲುಮಾನವನೆದೆಯಲ್ಲಿ,
ಪರಮಾತ್ಮನ ಮೂಡಿಸಲು,
ಈ ಬೆಟ್ಟದ ಬಯಲಲ್ಲಿ ನಿಂತ!
"ಬಾರಯ್ಯಾ ಬಾ ಯಾತ್ರಿಕನೇ,
ಹೂತಂಪನೆಯ ನೆರಳು ಇವನೇ!
ಬಾರಯ್ಯಾ ಬಾ ಯಾತ್ರಿಕನೇ,
ಜಗದ ಸಂತನಿವನು ಸಾತ್ವಿಕನೇ!"
ದೂರದೂರಿಗೊಯ್ದರೂ,
ಮರಳಿ ಬಂದು ನಿಂತನು,
ಕಾಲ ದೇಶ ಮೀರಿದಂಥ ಸಂತ!
ನಂಬಿ ಬಂದ ಕಂಗಳಲಿ,
ಒಣಮರದ ರೆಂಬೆಗಳಲಿ,
ತಂದೇ ತರುವನಯ್ಯಾ ವಸಂತ!
"ಬಾರಯ್ಯಾ ಬಾ ಯಾತ್ರಿಕನೇ,
ಹೂತಂಪನೆಯ ನೆರಳು ಇವನೇ!
ಬಾರಯ್ಯಾ ಬಾ ಯಾತ್ರಿಕನೇ,
ಜಗದ ಸಂತನಿವನು ಸಾತ್ವಿಕನೇ!"
(ಬೆಟ್ಟದ ಹಲಸೂರಿನ ಅಂತೋಣಪ್ಪನನ್ನು ನೆನೆದು. . . . )

¨ ಯಜಮಾನ್ ಫ್ರಾನ್ಸಿಸ್


No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...