ಸಣ್ಣ ಸೊಳ್ಳೆಗಳು ಸಿಂಹಗಳು ಮತ್ತು ಆನೆಗಳಿಗಿಂತ ಆಫ್ರಿಕಾದಲ್ಲಿ ಹೆಚ್ಚು ಜನರ ಕೊಲ್ಲುತ್ತವಂತೆ !
ಸಣ್ಣ ಬೀಜಗಳು ಬೃಹತ್ ಓಕ್ ಮರಗಳಾಗಿ ಬೆಳೆಯುತ್ತವೆ. ಲಕ್ಷಾಂತರ ಹನಿಗಳು ಒಂದುಗೂಡಿ ಒಂದು ದೊಡ್ಡ ಸಾಗರವಾಗಿ ಬಿಡುತ್ತವೆ. ಹಾನಿ ಮಾಡುತ್ತವುದು ಗನ್ನಿನ ಗಾತ್ರವಲ್ಲ ಸಣ್ಣ ಗುಂಡು ಚಲಿಸುವ ವೇಗ ಮತ್ತು ಗುಂಡಿನ ನಿಖರತೆಯಿಂದ. ಹೀಗೆ ನಮ್ಮ ಪ್ರತಿ ದಿನ ಜೀವನದಲ್ಲಿ ಇಂತಹ ಚಿಕ್ಕ ಚಿಕ್ಕ ವಿಷಯಗಳಿಂದ ಬದುಕಲ್ಲಿ ಒಂದು ದೊಡ್ಡ ವ್ಯತ್ಯಾಸವನ್ನು ಕಂಡುಕೊಳ್ಳಬಹುದು. ಬೆಚ್ಚಗಿನ ನಗು, ಒಂದು ಸರಳ "ಧನ್ಯವಾದ. "ದ ಮಾತು, ಆರೈಕೆಯ ಕೈ. ಪ್ರೋತ್ಸಾಹದ ಮಾತು, ಒಂದು ತ್ವರಿತ ಪ್ರಾರ್ಥನೆ… ಇವುಗಳನ್ನು ಇತರರಿಗೆ ಕೊಡುವುದರಿಂದ ಹಾಗೂ ಇತರರಿಂದ ಇವುಗಳನ್ನು ಸ್ವೀಕರಿಸಿವುದರಿಂದ ವಿಶ್ವವನ್ನೇ ಬದಲಾಯಿಸಿ ಜಗತ್ತನ್ನು ಒಂದು ಉತ್ತಮ ವಾಸಯೋಗ್ಯ ಸ್ಥಾನವಾಗಿಸಬಹುದು. ನಿಮ್ಮ ಜೀವನವನ್ನು ಪರಿಣಾಮಕಾರಿಯಾಗಿಸಲು ನೀವು ಆಶಿಸಿದ್ದೀರಿ ಆದಕ್ಕಾಗಿ ನೀವು ಚಿಕ್ಕ ಚಿಕ್ಕ / ಸಣ್ಣ ಸಣ್ಣ ಕ್ರಮಗಳನ್ನು ಕೈಗೊಳ್ಳಲು ನೀವು ಸಿದ್ಧರಾಗಿರಿ…. .
-------
ಸಮತೋಲನದ ಅನುಗ್ರಹದಿಂದ ಕಾರ್ಯವನ್ನು ನಿರ್ವಹಿಸುವ ವಿಶ್ವಾಸಭರಿತ ಜನರನ್ನು ನೋಡಿ ನಮಗೆ ಹೊಟ್ಟೆಕಿಚ್ಚು ಬರುವುದಿಲ್ಲವೇ? ಬದುಕಿನ ಒತ್ತಡದ ಸಂದರ್ಭದಲ್ಲೂ ಅವರ ಹಣೆಯ ಮೇಲೆ ಒಂದು ತೊಟ್ಟು ಬೆವರಿನ ಹನಿ ಕಾಣುವುದಿಲ್ಲ. ಆದರೆ ಇಲ್ಲಿ ಸಾಮಾನ್ಯವಾಗಿ ನಮಗೆ ಒಂದು ವಿಷಯ ತಿಳಿದಿರುವುದಿಲ್ಲ. ಬಹುಶಃ ಅವರ ಭಯ ನಮಗೆ ಕಾಣಿಸಿಕೊಳ್ಳದಿದ್ದರೂ ಒಳಗೊಳಗೆ ಅವರು ಕೂಡ ಸಂಪೂರ್ಣವಾಗಿ ಭಯಭೀತರಾಗಿರುತ್ತಾರೆ. ನೀವು ನೋಡಿ, ಎಲ್ಲರೂ ಹೆದರುತ್ತಾರೆ/ಭಯಪಡುತ್ತಾರೆ: ಕೆಲವರು ಆ ಭಯವನ್ನು ತೋರಿಸಿಕೊಳ್ಳುವುದಿಲ್ಲ, ಇನ್ನೂ ಕೆಲವರು ಅದನ್ನು ನಿರಾಕರಿಸಬಹುದು. ಮತ್ತೂ ಕೆಲವರು ಭಯವನ್ನು ಇನ್ನೊಂದು ರೀತಿಯಲ್ಲಿ ಕರೆಯಬಹುದು. ಆದರೆ ನಮ್ಮನ್ನು ಕಾಡುವ ಭಯವನ್ನು ಅವರು ಕೂಡ ಅನುಭವಿಸುತ್ತಾರೆ.
"ಯಾಕೆ ಅವರಲ್ಲಿನ ಭಯ ನಮಗೆ ಕಾಣುವುದಿಲ್ಲ?", ಅಥವಾ, "ಈ ಭಯ ನಮ್ಮಿಂದ ಯಾವಾಗ ಮಾಯವಾಗುತ್ತೇ ?" ನೀವು ಕೇಳಿಕೊಳ್ಳಬೇಕಾದ ಅಗತ್ಯವಾದ ಪ್ರಶ್ನೆಗಳು ಇವಲ್ಲ. ನಾವು ನಮ್ಮನ್ನೇ ಕೇಳಿಕೊಳ್ಳಬೇಕಾದ ಪ್ರಶ್ನೆ ಏನೆಂದರೇ “ ಈ ರೀತಿಯ ಭಯದಲ್ಲೂ ನಾನು ಏನು ಮಾಡುತ್ತೇನೆ? ಹೇಗೆ ವರ್ತಿಸುತ್ತೇನೆ? ಎಂದು..
No comments:
Post a Comment