ಒಮ್ಮೊಮ್ಮೆ ಹಾಗಾಗುತ್ತದೆ!
ಒಬ್ಬ ಶಿಷ್ಯ ಗುರುವಿನ ಬಳಿ ಹೋಗಿ "ಗುರುಗಳೇ ನನ್ನಿಂದ ಏಕಾಗ್ರತೆಯನ್ನು ಸಾಧಿಸಲಾಗುತ್ತಿಲ್ಲ ; ಧ್ಯಾನ ಮಾಡಲಾಗುತ್ತಿಲ್ಲ ; ಸಾಧನೆ ಮಾಡಲು ನನ್ನಲ್ಲಿ ಯೋಗ್ಯತೆ ಇಲ್ಲವೇನೋ ಅನಿಸುತ್ತಿದೆ. ಬಹಳ ನಿರಾಶೆಯಾಗಿದೆ" ಎಂದು ಹೇಳುತ್ತಾನೆ. ಆಗ ಗುರು " ಚಿಂತಿಸಬೇಡ , ಒಮ್ಮೊಮ್ಮೆ ಹಾಗನಿಸುವದುಂಟು , ಅದಕ್ಕೆಲ್ಲ ಗಮನ ಕೊಡಬೇಡ" ಎನ್ನುತ್ತಾನೆ. ಸ್ವಲ್ಪ ದಿನಗಳ ನಂತರ ಶಿಷ್ಯನು ಮತ್ತೆ ಗುರುವಿನ ಬಳಿ ಹೋಗಿ
"ಗುರುಗಳೆ , ನನ್ನ ಧ್ಯಾನ ಯಶಸ್ವಿಯಾಗಿದೆ, ಸಾಧನೆ ಅದ್ಭುತವಾಗಿದೆ, ಜ್ಞಾನ ನನಗೆ ಲಭಿಸಿದೆ ಅನ್ನಿಸುತ್ತಿದೆ" ಎಂದು ಹೇಳುತ್ತಾನೆ. ಆಗ ಗುರುವು " ಚಿಂತಿಸಬೇಡ , ಒಮ್ಮೊಮ್ಮೆ ಹಾಗನಿಸುವುದುಂಟು , ಅದಕ್ಕೆಲ್ಲ ಗಮನ ಕೊಡಬೇಡ" ಎನ್ನುತ್ತಾನೆ .
"ಗುರುಗಳೆ , ನನ್ನ ಧ್ಯಾನ ಯಶಸ್ವಿಯಾಗಿದೆ, ಸಾಧನೆ ಅದ್ಭುತವಾಗಿದೆ, ಜ್ಞಾನ ನನಗೆ ಲಭಿಸಿದೆ ಅನ್ನಿಸುತ್ತಿದೆ" ಎಂದು ಹೇಳುತ್ತಾನೆ. ಆಗ ಗುರುವು " ಚಿಂತಿಸಬೇಡ , ಒಮ್ಮೊಮ್ಮೆ ಹಾಗನಿಸುವುದುಂಟು , ಅದಕ್ಕೆಲ್ಲ ಗಮನ ಕೊಡಬೇಡ" ಎನ್ನುತ್ತಾನೆ .
ಹೋಗು ಸುಮ್ಮನೆ ಮಲಗು
ಗಾಸನ್ ತನ್ನ ಗುರು ಟೆಕಿಸ್ಯುವಿನ ಹಾಸಿಗೆಯ ಪಕ್ಕದಲ್ಲೇ ಕುಳಿತಿದ್ದ. ಸಾಯಲು ಮೂರು ದಿನ ಉಳಿದಿತ್ತು. ಟೆಕಿಸ್ಯು, ಗಾಸನ್ ನನ್ನು ತನ್ನ ಉತ್ತಾರಾಧಿಕಾರಿಯಾಗಿ ಅಗಲೇ ಆಯ್ಕೆ ಮಾಡಿದ್ದ. ಒ೦ದು ದೇಗುಲ ಇತ್ತೀಚಿಗೆ ಸುಟ್ಟುಹೋಗಿತ್ತು. ಗಾಸನ್ ಮತ್ತೆ ಆ ದೇಗುಲವನ್ನು ಪುನರ್ನಿರ್ಮಾಣ ಮಾಡುವುದರಲ್ಲಿ ನಿರತನಾಗಿದ್ದ. ಟೆಕಿಸ್ಯು ಅವನನ್ನು ಕೇಳಿದ; 'ಗುಡಿ ಪುನರ್ನಿರ್ಮಾಣವಾದ ನ೦ತರ ನೀನೇನು ಮಾಡುವೆ?' 'ನೀವು ಗುಣಮುಖವಾದ ಮೇಲೆ ಅಲ್ಲಿ ನೀವು ಉಪದೇಶಿಸಬೇಕು. ' ಗಾಸನ್ ಹೇಳಿದ 'ಒ೦ದು ವೇಳೆ ಅಲ್ಲಿಯವರೆಗೂ ನಾನು ಬದುಕಿರದಿದ್ದರೆ?' 'ಆಗ ಬೇರೆ ಇನ್ನೊಬ್ಬರನ್ನು ಕರೆತರುತ್ತೇವೆ. ' 'ಒ೦ದು ವೇಳೆ ನಿನಗೆ ಯಾರೂ ಸಿಗದಿದ್ದರೆ?' ಗಾಸನ್ ಗಟ್ಟಿಯಾಗಿ ಉತ್ತರಿಸಿದ, 'ಅ೦ಥಾ ಮೂರ್ಖ ಪ್ರಶ್ನೆಗಳನ್ನು ಹಾಕಬೇಡ. ಹೋಗು ಸುಮ್ಮನೆ ಮಲಗು. . . . '
ಕೂಗಿ ಹೇಳಿದ, 'ಈ ಲಾಟೀನನ್ನು ನೀನು ನೋಡಲಿಲ್ಲವಾ?
'ಸಹೋದರನೇ, ನಿನ್ನ ಲಾಟೀನ್ ಆರಿ ಹೋಗಿದೆ!' ಶಾ೦ತನಾಗಿ ಮರುತ್ತರಿಸಿದ ಆ ಅಪರಿಚಿತ.
ಸಂಗ್ರಹ - ಇನ್ನಾ
No comments:
Post a Comment