Monday, 23 April 2018

ಕಥಾದನಿ


ತಪಸ್ಸು ಕಾಲದಲ್ಲಿ ಸಿಗರೇಟು ಬಿಟ್ಟಿದ್ದೀನಿ'
ಒಮ್ಮೆ ಒಬ್ಬ ಕಥೊಲಿಕ ಗುರುಗಳು ದಾರಿಯಲ್ಲಿ ನಡೆದು ಹೋಗುತ್ತಿದ್ದರು. ಹೋಗುತ್ತಿರುವಾಗ ಹಿಂದಿನಿಂದ ಕಳ್ಳನೊಬ್ಬ ಪಿಸ್ತೂಲನ್ನು ಹಿಡಿದು, `ನಿನ್ನ ಬಳಿಯಿರುವ ಹಣವನ್ನೇಲ್ಲ ಕೊಡು' ಎಂದ. ಅದಕ್ಕೆ ಗುರುಗಳು ತನ್ನ ಜೇಬಿಗೆ ಕೈ ಹಾಕಿ ನೋಡುತ್ತಿರುವಾಗ ಇವರೊಬ್ಬ ಗುರುಗಳು ಎಂದು ತಿಳಿದು `ಕ್ಷಮಿಸಿ ಫಾದರ್! ನೀವು ಗುರುಗಳು ಅಂತ ಗೊತ್ತಿರಲಿಲ್ಲ. ನಿಮ್ಮ ಹಣ ನನಗೆ ಬೇಡ' ಎಂದ. ಗುರುಗಳು `ಹೋಗಲಿ' ಎಂದು ಜೇಬಿನಿಂದ ಒಂದು ಸಿಗರೇಟನ್ನು ಅವನಿಗೆ ಕೊಡಲು ಮುಂದಾದಾಗ ಕಳ್ಳ, `ಬೇಡ ಫಾದರ್! ತಪಸ್ಸು ಕಾಲದಲ್ಲಿ ಸಿಗರೇಟು ಬಿಟ್ಟಿದ್ದೀನಿ' ಎಂದ

 ಆ ನೋಟ್ಬುಕ್ ನಿಮ್ಮದೇ !!!
ಪ್ರಸಿದ್ಧ ಫ್ರೆಂಚ್ ಲೇಖಕ ಬಾಲ್ವಾಕ್, ತಮ್ಮ ಬಿಡುವಿನ ವೇಳೆಯಲ್ಲಿ, ಇತರರ ಕೈಬರಹವನ್ನು ವಿಶ್ಲೇಷಿಸಿ, ಅವರ ವ್ಯಕ್ತಿತ್ವವನ್ನು ನಿರ್ಧರಿಸುವ ಕಾರ್ಯದಲ್ಲಿ ನಿರತರಾಗಿದ್ದರು. ಅವರು ಆ ಕಲೆಯಲ್ಲಿ ಒಬ್ಬ ಮಹಾತಜ್ಞನೆಂದು ತೋರ್ಪಡಿಸಲು ಇಷ್ಟಪಡುತ್ತಿದ್ದರು.
ಒಮ್ಮೆ ವಯಸ್ಸಾದ ಮಹಿಳೆಯೊಬ್ಬಳು ಅವರಿಗೆ ಚಿಕ್ಕ ಹುಡುಗನ ಹೋಮ್ ವರ್ಕ್ ನೋಟ್ ಬುಕ್ ಅನ್ನು ಕೊಟ್ಟು, ಆ ಮಗುವಿನ ಸಾಮರ್ಥ್ಯದ ಬಗ್ಗೆ ತಮ್ಮ ಅಭಿಪ್ರಾಯವನ್ನು ನೀಡಲು ಬಾಲ್ವಕ್‌ನಲ್ಲಿ ಕೇಳಿದಳು. ಬಾಲ್ವಾಕ್ ಆ ಸುಂದರವಲ್ಲದ ಲಿಪಿಯನ್ನು ಎಚ್ಚರಿಕೆಯಿಂದ ಅಧ್ಯಯನ ಮಾಡಿ, “ ನೀವು ಆ ಹುಡುಗನ ತಾಯಿಯೇ ?” ಎಂದು ಕೇಳಿದರು
“ಇಲ್ಲ”
“ಬಹುಶಃ ನೀವು ಅವರ ಸಂಬಂಧಿಕರೇ?”
“ಇಲ್ಲವೇ ಇಲ್ಲ”
“ಹಾಗಾದರೇ ನಾನು ನಿಮಗೆ ಮುಕ್ತವಾಗಿ ನನ್ನ ಅಭಿಪ್ರಾಯವನ್ನು ಹೇಳುತ್ತೇನೆ, ಈ ಯುವಕ ಪ್ರಾಯಶಃ ಅತೀ ದೊಡ್ಡ ಮೂರ್ಖನಾಗಿರಬೇಕು ಹಾಗೂ ಅವನು ಯಾವುದಕ್ಕೂ ಪ್ರಯೋಜನವಿಲ್ಲದ ವ್ಯಕ್ತಿ.”
“ಆದರೆ, ಸರ್”
ಆ ಮಹಿಳೆ ನಗುತ್ತಾ ಹೇಳುತ್ತಾಳೆ
“ಆ ನೋಟ್ಬುಕ್ ನಿಮ್ಮದೇ “!

ನೀನು ಮೊದಲೇ ಏಕೆ ಹೇಳಲಿಲ್ಲ ?
ದುಃಖಾ ಕ್ರಾಂತನಾಗಿದ್ದಂತೆ ಕಾಣುತ್ತಿದ್ದ ಮನುಷ್ಯನೊಬ್ಬ ಧರ್ಮಕೇಂದ್ರ ಗುರುಗಳ ಬಳಿ ಬಂದು, 
“ಸ್ವಾಮಿ, ನಿನ್ನೆ ನಮ್ಮ ಮುದ್ದಿನ ನಾಯಿ ಸತ್ತು ಹೋಯಿತು. ಅದರ ಆತ್ಮಶಾಂತಿಗಾಗಿ ಒಂದು ಪೂಜೆ ಇಡುತ್ತೀರಾ?” ಎಂದ. 
ಗುರುಗಳಿಗೆ ಸಿಕ್ಕಾಪಟ್ಟೆ ಕೋಪ ಬಂತು, 
“ಇಲ್ಲಿ ನಾಯಿಗಳಿಗೆಲ್ಲಾ ನಾವು ಪೂಜೆ ಹೇಳುವುದಿಲ್ಲ”, ಕೂಗಾಡಿದರು ಫಾದರ್,
“ ಬೇಕಾದರೆ ರಸ್ತೆಯ ಆಚೆ ಹೊಸ ಕ್ರೈಸ್ತ ಪಂಗಡವೊಂದು ಶುರುವಾಗಿದೆ ಅಲ್ಲಿ ಹೋಗು. ಅವರು ಪ್ರಾಣಿಗಳ ಆತ್ಮಗಳಿಗೂ ಪೂಜೆ ಹೇಳಬಹುದು.”
 “ ಆ ಪುಟ್ಟ ನಾಯಿಯನ್ನು ನಾನು ತುಂಬಾ ಪ್ರೀತಿಸಿದ್ದೆ”  ಆ ಮನುಷ್ಯ ದುಃಖದಿಂದ ಹೇಳಿದ, 
“ ಅವನಿಗೆ ಒಳ್ಳೆಯ ಶ್ರದ್ಧಾಂಜಲಿ ಅರ್ಪಿಸಬೇಕು ಅನ್ನಿಸಿತ್ತು. ಈ ಸಂದರ್ಭಕ್ಕೆ ಏನು ಕೊಡಬೇಕು ಅಂತಗೊತ್ತಿಲ್ಲ, ಬಹುಶ ೧೦, ೦೦೦ ಡಾಲರ್ ಸಾಕಾಗಬಹುದಲ್ಲಾ?”  
“ ಆಹಾಂ, ಒಂದ್ನಿಮಿಷ ಇರು”  ಫಾದರ್ ಹೇಳಿದರು, “ಆ ನಿನ್ನ ನಾಯಿ ಕಥೋಲಿಕ ನಾಯಿ ಅಂತ ನೀನು ಮೊದಲೇ ಏಕೆ ಹೇಳಲಿಲ್ಲ ?”
¨  ಸಂಗ್ರಹ: ಇನ್ನಾ


No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...