ಮಾತು ಆಕಾರ ಮೌನ ನಿರಾಕಾರ
ನಿರಾಕಾರದಿಂದ ಆಕಾರದೆಡೆಗೆ
ಸಾಕಾರವಾಗುತ್ತಾ ನಿರಾಕಾರವಾಗಲಿ
ಮೌನ ನೀನು
ಮಾತುಗಳಲ್ಲೇ ಕಳೆದುಹೋಗಿರುವ ನಾನು
ಮೌನ ನಿನ್ನ ಸೇರಿ
“ಮಾತು” ನಾನು ಇಲ್ಲವಾಗಲಿ
--------
--------
ನನ್ನ ನಿನ್ನ ಸಮಾಗಮ
ತುತ್ತಾಗದಿರಲಿ ಸ್ಪಷ್ಟೀಕರಿಸುವ ಮಾತಿನ ಗಾಣಕ್ಕೆ
ಬೀಳದಿರಲಿ ಅರ್ಥ ಮಾಡಿಕೊಳ್ಳಲು ಹೆಣಗುವ ವಿವೇಕದ ಗುಂಡಿಗೆ
ನಾನೆ ನೀನಾಗಿ ನಾನು ಮಾಯವಾಗಿ
ನೀನು ಮಾತ್ರ ಕಾಣಲಿ
----------
----------
ನಾ ಕತ್ತಲು
ಬೆಳಕು ನೀನು
ನನ್ನಲ್ಲಿಗೆ ಬಂದೊಡನೆ
ಕತ್ತಲು ನಾನು ಇಲ್ಲವಾಗಿ
ಬೆಳಕು ನೀನೊಂದೆ ರುಜುವಾಗಿಬಿಡಲಿ
----------
----------
ಒಂದಲ್ಲ ನೂರು ಸಲ
ಕೊಟ್ಟ ಅವಕಾಶಗಳಿಗೆ ನಾನು
ಮುಚ್ಚಿ
ಬಾಗಿಲ ಹೊರಗಟ್ಟಿ
ಕೊನೆಗೆ
ಎಲ್ಲಾ ದಾರಿಗಳು
ನನಗೆ ಮುಚ್ಚಿಕೊಂಡಾಗ ಗೊತ್ತಾಗಿದ್ದು
ನಾನು
ಆಗಲೇ ಸಮುದ್ರ ಸೇರಿಬಿಟ್ಟ ನದಿಯೆಂದು. .
¨ ಜೀವಸೆಲೆ
No comments:
Post a Comment