Tuesday, 24 April 2018

ಕ್ರಿಸ್ತನೊಳಗಿನ ಕ್ರಿಸ್ತ

ಕ್ರಿಸ್ತನ ವ್ಯಕ್ತಿತ್ವವನ್ನು ಸರಿಯಾಗಿ ಗ್ರಹಿಸಿದವರು ಬಹು ಕಡಿಮೆ. ಆತ ಸತ್ಯ ಬೋಧಿಸಿದ ಒಬ್ಬ ಧಾರ್ಮಿಕ ಉಪದೇಶಕ ಎಂದು ಕೆಲವರು ಗುರುತಿಸಿದರೆ, ಆತನ ದೈವತ್ವವನ್ನು ಒತ್ತಿ ಹೇಳುತ್ತಾ ಮನುಷ್ಯತ್ವವನ್ನು ಸಂಪೂರ್ಣ ಕಡೆಗಣಿಸಿಬಿಟ್ಟವರೇ ಹೆಚ್ಚು. ಈ ಎರಡೂ ಕಡೆಯಿಂದಲೂ ಕ್ರಿಸ್ತನ ವ್ಯಕ್ತಿತ್ವಕ್ಕೆ ಸಮರ್ಪಕ ಮಹತ್ವ ಸಿಗಲಾಗದು. ಹಾಗೆ ನೋಡಿದರೆ, ಆತನ ವ್ಯಕ್ತಿತ್ವವನ್ನು ಸಂಪೂರ್ಣವಾಗಿ ಅಳೆದು ತೂಗಿ ನೋಡಿದವರೂ ಬಲು ಕಡಿಮೆ ಎಂದೇ ಹೇಳಬೇಕು.
ಕ್ರಿಸ್ತನ ಬಗ್ಗೆ ಯಾವುದೇ ಪೂರ್ವಗ್ರಹ ಹೊಂದಿರದೆ, ಆತನ ಮಾತುಗಳನ್ನು ಆತನ ಕಾಲಾಘಟ್ಟದಲ್ಲಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದಾಗ ಕ್ರಿಸ್ತನ ನಿಜವಾದ ವ್ಯಕ್ತಿತ್ವ ಗೋಚರವಾಗುತ್ತದೆ. ಆತನ ಅಪಾರ ಧೈರ್ಯ, ವ್ಯಕ್ತಿಗತ ಸ್ವಾತಂತ್ರ್ಯ, ಆಳವಾದ ನಂಬಿಕೆ, ಸ್ಪಷ್ಟವಾದ ಮಾತು ಆತನ ಅಸಾಧಾರಣ ವ್ಯಕ್ತಿತ್ವವನ್ನು ಹೊರಚೆಲ್ಲುತ್ತದೆ. ಆತನ ಗ್ರಹಿಕೆಯ ಶಕ್ತಿ ಎಲ್ಲಾ ವಿವರಣೆಯನ್ನು ಮೀರಿ ನಿಲ್ಲುತ್ತದೆ. ಹಾಗಾಗಿ, ಕ್ರಿಸ್ತನ ಮನುಷ್ಯತ್ವವನ್ನು ಕಡೆಗಣಿಸಿ ಆತನನ್ನು ನೋಡುವುದೆಂದರೆ, ಆತನ ಶ್ರೇಷ್ಠತೆ ಮತ್ತು ಮಹತ್ವವನ್ನು ಕಡೆಗಣಿಸಿದಂತೆಯೇ!

ಕ್ರಿಸ್ತನೊಳಗಿನ ಕ್ರಿಸ್ತ, ಬಂಡಾಯಗಾರನೊಬ್ಬನ ಉದ್ಭವ, /೧೨೪/ ಫಾ. ಚಸರಾ






No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...