Tuesday, 24 April 2018

ವೋಟ್ ಕೇಳಲು ನಾಯಕರೊಬ್ಬರು. . . .




ಮೊನ್ನೆ,
ವೋಟ್ ಕೇಳಲು ನಾಯಕರೊಬ್ಬರು
ಮನೆಯ ಬಳಿ ಬಂದರು
ಕೈ ಮುಗಿದರು
ಮನೆಯ ಪಕ್ಕದ ಕಸದ ರಾಶಿ
ತೋರಿಸಿದೆ
ನಮ್ಮ ಮನೆಯ ಪಕ್ಕದಲ್ಲೂ
ಹೀಗೆ ಎಂದರು
ಮನೆಯ ಮುಂದಿನ
ಕೆಟ್ಟು ಹೋದ
Street light
ತೋರಿಸಿದೆ
ಕಿತ್ತು ಹೋಗಿದ್ದ ರಸ್ತೆ
ತೋರಿಸಿದೆ
ನಮ್ಮ ಮನೆಯ ಮುಂದೆಯೂ
ಹೀಗೆ ಎಂದರು
ಮನೆ ಕಾರು ತೋರಿಸಿ
ನಮ್ಮದು ಒಂದೇ ಮನೆ
ಒಂದೇ ಕಾರು ಎಂದೆ
ಬರಲೇ ಎಂದು ಕೈ ಬೀಸಿ
ಮುಂದೆ ನಡೆದರು


¨ ಪ್ರಶಾಂತ್ ಇಗ್ನೇಷಿಯಸ್


No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...