ನನ್ನಾಸೆಗಳೋ ಅನೇಕ ನನ್ನಳುವೂ ದಯನೀಯ,
ಆದರೂ ಥೂ ಎಂಬ ತಿರಸ್ಕಾರಗಳಿಂದ ನನ್ನನ್ನು ರಕ್ಷಿಸಿರುವೆ;
ನಿನ್ನ ಕಡು ದಯೆಯೇ ನನ್ನ ಬದುಕಿನ ಒಳಹೊರಗನ್ನೆಲ್ಲ ರೂಪಿಸಿದೆ.
ದಿನದಿನವೂ ನಾ ಕೇಳದೆಯೇ ಕೊಡುವ ಸರಳ, ಮಹಾ ಕೊಡುಗೆ –
ಈ ಆಗಸ, ಈ ಬೆಳಗು, ಈ ದೇಹ, ಈ ಜೀವ ಮತ್ತು ಮನಸು –
ಗಳಿಗೆ ನನ್ನನ್ನು ಪಕ್ವನಾಗಿಸುತಿಹೆ,
ದುರಾಸೆಯೆಂಬ ದೊಡ್ಡ ಅಪಾಯಕೆ ನಾ ಸಿಲುಕದಂತೆ.
ಕೆಲವೊಮ್ಮೆ ನಾ ತೂಕಡಿಸುತ ಆಲಸಿಯಾಗಿದ್ದೆ,
ಕೆಲವೊಮ್ಮೆ ನಾ ಎಚ್ಚರಿದ್ದು ಲವಲವಿಕೆಯಿಂದ ನನ್ನ ಗುರಿಯನರಸುತ್ತಿದ್ದೆ;
ಅದೆಂತು ಕಠೋರನಾಗಿ ನನ್ನಿಂದ ನೀ ಮರೆಯಾದೆ.
ದಿನದಿನವೂ ನನ್ನ ಕಡೆಗಣಿಸಿ ಹೆಸರಿಲ್ಲದವನಾಗಿಸಿ,
ಕಾಣದ ಕ್ಷುದ್ರಬಯಕೆಯ ಸೆರೆಯಿಂದ ಬಿಡಿಸಿ,
ನಿನ್ನ ಸ್ವೀಕಾರಕ್ಕೆ ನನ್ನನ್ನು ಅರ್ಹನಾಗಿಸುತಿಹೆ
(ಟ್ಯಾಗೋರರ My desires are many and my cry is pitiful ಕವನದ ಭಾವಾನುವಾದ: ಸಿ ಮರಿಜೋಸೆಫ್)
-0-0-0-0

No comments:
Post a Comment